ಈ ಸ್ಟಾರ್ ನಟಿಯ ಬಾಯ್‌ಫ್ರೆಂಡ್‌ `ಅನುಷ್ಕಾ ಶರ್ಮಾ ಸಹೋದರ`, ಖ್ಯಾತ ನಿರ್ಮಾಪಕ.. ಕರ್ನಾಟಕದೊಂದಿಗೆ ಇದೆ ಆತ್ಮೀಯ ನಂಟು!!

Sat, 23 Mar 2024-2:37 pm,

ಅನುಷ್ಕಾ ಶರ್ಮಾ ಸಹೋದರ ಕರ್ಣೇಶ್ ಶರ್ಮಾ ಪ್ರಸಿದ್ಧ ನಿರ್ಮಾಪಕರಾಗಿದ್ದಾರೆ. ಅನುಷ್ಕಾ ತನ್ನ ಸಹೋದರ ಕರ್ಣೇಶ್ ಶರ್ಮಾ ಜೊತೆಗೆ ಕ್ಲೀನ್ ಸ್ಲೇಟ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದರು. 

ಕರ್ಣೇಶ್ ಶರ್ಮಾ ಅವರು 2015 ರಲ್ಲಿ 'NH10' ಚಿತ್ರದ ಮೂಲಕ ನಿರ್ಮಾಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರ ಸಹೋದರಿ ಅನುಷ್ಕಾ ಶರ್ಮಾ ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಪಾತಾಳ ಲೋಕ’ ಎಂಬ ವೆಬ್ ಸೀರೀಸ್ ಕೂಡ ಮಾಡಿದ್ದಾರೆ. 

ಕರ್ಣೇಶ್ ಶರ್ಮಾ ನಿರ್ಮಾಪಕರಾಗುವ ಮೊದಲು ಮರ್ಚೆಂಟ್ ನೇವಿಯಲ್ಲಿದ್ದರು. ಬಾಲ್ಯದಲ್ಲಿ ಕ್ರಿಕೆಟ್‌ ಕೂಡ ಆಡಿದ್ದರು. ಕರ್ಣೇಶ್ ಕರ್ನಾಟಕ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದರು. 

ಕರ್ಣೇಶ್ ಶರ್ಮಾ ಅವರು 'ಅನಿಮಲ್' ಸಿನಿಮಾ ನಟಿ ತೃಪ್ತಿ ದಿಮ್ರಿ ಅವರೊಂದಿಗೆ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಯಿದೆ. 

ಕರ್ಣೇಶ್ ಶರ್ಮಾ ಮತ್ತು ನಟಿ ತೃಪ್ತಿ ದಿಮ್ರಿ ಪ್ರೇಮ ಸಂಬಂಧದ ವಿಚಾರದಲ್ಲಿ ಮೌನ ವಹಿಸಿದ್ದಾರೆ. ಇತ್ತೀಚೆಗೆ ಇವರಿಬ್ಬರ ಲವ್‌ ಬ್ರೇಕಪ್‌ ಆಗಿದೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link