ಕೊಹ್ಲಿ ಜೊತೆಗಿನ ಮದುವೆಗೂ ಮುನ್ನ ನಾನು ತಾಯಿಯಾಗಿದ್ದೆ... ಇದಕ್ಕೆಲ್ಲಾ ಕಾರಣವಾಗಿದ್ದು ಆ ನಟ! ಅನುಷ್ಕಾ ಶರ್ಮಾ ಸೆನ್ಸೇಷನಲ್ ಹೇಳಿಕೆ ವೈರಲ್
ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆ ಅನುಷ್ಕಾ ಶರ್ಮಾ ಸುಮಾರು 7 ವರ್ಷಗಳ ಕಾಲ ಡೇಟಿಂಗ್ ಮಾಡಿ ಮದುವೆಯಾಗಿದ್ರು. ನಂತರ 2021ರಲ್ಲಿ ಅನುಷ್ಕಾ ಹೆಣ್ಣು ಮಗವಿಗೆ ಜನ್ಮ ನೀಡಿದರು. ಅದಲ್ಲದೆ, ಇತ್ತೀಚೆಗೆಯಷ್ಟೇ ಗಂಡು ಮಗುವಿಗೆ ಎರಡನೇ ಬಾರಿ ಜನ್ಮ ನೀಡಿದ ಅನುಷ್ಕಾ, ವಿರಾಟ್ ಜೊತೆ ಸುಖಸಂಸಾರ ನಡೆಸುತ್ತಿದ್ದಾರೆ.
ಅನುಷ್ಕಾ ಶರ್ಮಾ ಒಂದೊಮ್ಮೆ ಸಂದರ್ಶನದಲ್ಲಿ, ತಾನೊಬ್ಬಳು ಉತ್ತಮ ತಾಯಿಯಾಗಲು ಕಾರಣವೇನೆಂಬುದನ್ನು ಬಹಿರಂಗಪಡಿಸಿದ್ದಾರೆ.
"ಮದುವೆಗೆ ಮುಂಚೆಯೇ ನಾನು ತಾಯಿಯಾಗಿದ್ದೆ, ಇದಕ್ಕೆಲ್ಲ ಕಾರಣ ರಣಬೀರ್ ಕಪೂರ್. ಆತನನ್ನು ಮಗುವಂತೆ ನೋಡಿಕೊಂಡಿದ್ದೇ ಇದಕ್ಕೆ ಕಾರಣ. ನನ್ನಲ್ಲಿ ಒಬ್ಬ ಒಳ್ಳೆಯ ತಾಯಿ ಇದ್ದಾಳೆ ಎಂಬುದನ್ನು ಪರಿಗಣಿಸಿದ್ದೇ ಆತನ ಚೇಷ್ಠ ಸಹಿಸಿಕೊಂಡಾಗಿನಿಂದ" ಎಂದು ಅನುಷ್ಕಾ ಹೇಳಿಕೆ ನೀಡಿದ್ದರು.
ಅನುಷ್ಕಾ ಶರ್ಮಾ ಮತ್ತು ರಣಬೀರ್ ಕಪೂರ್ ಇಬ್ಬರೂ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 2015 ರಲ್ಲಿ ಬಿಡುಗಡೆಯಾದ ಬಾಂಬೆ ವೆಲ್ವೆಟ್ʼನಲ್ಲಿ ಅವರು ಮೊದಲು ಒಟ್ಟಿಗೆ ಕಾಣಿಸಿಕೊಂಡಿದ್ದರು. ಅದೇ ಚಿತ್ರದ ಪ್ರಚಾರದ ಸಂದರ್ಭದಲ್ಲಿ, ರಣಬೀರ್ ಕಪೂರ್ ಮಗುವಿನಂತೆ ಇದ್ದ, ನಾನು ಆತನಿಗೆ ತಾಯಿಯಂತೆ ಇದ್ದೆ ಎಂದು ಅನುಷ್ಕಾ ಬಹಿರಂಗಪಡಿಸಿದ್ದರು.
ಮೇಕಪ್ ರೂಂನಲ್ಲಿ ಬಂದು ಎಲ್ಲಾಕಡೆ ಓಡಾಡುತ್ತಾನೆ. ನನ್ನ ಬ್ಯಾಗ್ʼನಲ್ಲಿ ಏನಿದೆ ಎಂದು ನೋಡುತ್ತಾನೆ. ಫೋನ್ʼನಲ್ಲಿ ಏನಾದ್ರೂ ಮಾಡುತ್ತಿದ್ದರೆ ಅಲ್ಲಿಗೆ ಬಂದು ಚೇಷ್ಟೆ ಮಾಡುತ್ತಾನೆ. ಆತನ ಈ ತುಂಟಾಟ ಸಹಿಸಿಕೊಂಡೇ ನಾನೊಬ್ಬಳು ಉತ್ತಮ ತಾಯಿಯಾದೆ ಎಂದು ಹೇಳಿದ್ದಾರೆ.