ಅನುಷ್ಕಾ ಶರ್ಮಾಗೆ ಇದೆಯಂತೆ ʼಈʼ ವಿಚಿತ್ರ ಕಾಯಿಲೆ.. ಇದು ಬಂದರೆ ಜೀವನ ತುಂಬಾ ಕಷ್ಟ..! ವಿರಾಟ್‌ ಕಥೆ ಅಯ್ಯೋ ಪಾಪ!!

Wed, 31 Jul 2024-1:47 pm,

ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಟಿವಿ ಜಾಹೀರಾತು ಒಂದರಲ್ಲಿ ಮೊದಲು ಭೇಟಿಯಾದರು.. ಇವರಿಬ್ಬರಿಗೆ ಮೊದಲ ಭೇಟಿಯಲ್ಲೇ ಪ್ರೀತಿಯಾಗದಿದ್ದರೂ ಶೂಟಿಂಗ್‌ ಬಳಿಕ ಒಬ್ಬರಿಗೊಬ್ಬರು ಕನೆಕ್ಟ್‌ ಆದರು..  

ವಿರಾಟ್‌ ಹಾಗೂ ಅನುಷ್ಕಾ ಮೊದಲ ಬಾರಿಗೆ ನವೆಂಬರ್ 2014 ರಲ್ಲಿ ಪುಣೆಯಲ್ಲಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡರು.. ಪಂದ್ಯದ ವೇಳೆ ಅರ್ಧ ಶತಕ ಗಳಿಸಿದ ನಂತರ, ವಿರಾಟ್ ಅನುಷ್ಕಾಗೆ ಬ್ಯಾಟ್‌ನಿಂದ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ಅವರ ಸಂಬಂಧವನ್ನು ಎಲ್ಲರಿಗೂ ಗೊತ್ತಾಗುವಂತೆ ಮಾಡಿದ್ದರು..   

ನಟಿ ಅನುಷ್ಕಾ ವಿರಾಟ್‌ ಕೊಹ್ಲಿ ಒಳ್ಳೆಯ ಪತಿ ಆಗಬಲ್ಲರು ಎಂದು ತಿಳಿದುಕೊಂಡಿದ್ದು ಹೇಗೆ? ಮತ್ತು ಅವರಿಗೆ ಒಂದು ಅಪರೂಪದ ಸಮಸ್ಯೆ ಇದೆ ಎಂದು ನಟಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.. ಇದೀಗ ಆ ಇಂಟ್ರೆಸ್ಟಿಂಗ್‌ ವಿಚಾರ ಏನೆಂದು ತಿಳಿಯೋಣ..  

"ನಾನು ವಿರಾಟ್‌ ಡೇಟಿಂಗ್‌ ಮಾಡುವಾಗ ಅವರು ತುಂಬಾ ಜವಾಬ್ದಾರಿಯುತ ಮನುಷ್ಯ ಎಂದು ತಿಳಿದುಕೊಂಡಿದ್ದೆ.. ಅವರು ಹಾಗೇ ಇದ್ದರು.. ನಾನು ಏನನ್ನೂ ಮರೆತರೂ ಅವರು ನನಗೆ ನೆನಪಿಸುತ್ತಿದ್ದರು.." ಎಂದಿದ್ದರು..  

ಅಲ್ಲದೇ "ನನಗೆ ಎಲ್ಲವನ್ನು ಮರೆಯುವ ಸಮಸ್ಯೆ ಇದೆ.. ಮೊಬೈಲ್‌ ಎಲ್ಲಿ ಇಟ್ಟಿರುತ್ತೇನೋ ಅಲ್ಲಿಯೇ ಬಿಟ್ಟುಬಿಡುತ್ತೇನೆ.. ನೆನೆಪೇ ಇರುವುದಿಲ್ಲ... ಆದರೆ ವಿರಾಟ್‌ ಹಾಗಲ್ಲ ಅವರಿಗೆ 3000 ವರ್ಷಗಳ ಹಳೆಯ ಕಥೆಗಳನ್ನು ಕೇಳಿದರೂ ಹೇಳುತ್ತಾರೆ" ಎಂದು ಹೇಳಿದ್ದರು..   

"ನನಗೆ ಮರೆಯುವುದು ಹೆಚ್ಚಾಗಿದ್ದರಿಂದ ನಾನು ಆಗ ಅರಿತುಕೊಂಡೆ ವಿರಾಟ್‌ ನನಗೆ ಉತ್ತಮ ಪತಿಯಾಗಬಲ್ಲರು ಎಂದು.. ಅಲ್ಲದೇ ನಾನಂದುಕೊಂಡಂತೆ ಅವರು ಜವಾಬ್ದಾರಿಯುತರು ಆಗಿದ್ದರು.. ಹಾಗಾಗಿ ನಾನು ಗ್ರೇಟ್‌ ಮ್ಯಾನ್‌ನ್ನು ಮದುವೆಯಾಗಿದ್ದೇನೆ" ಎಂದು ನಟಿ ಅನುಷ್ಕಾ ಹೇಳಿದ್ದರು..  

ಇನ್ನು ನಟಿ ಅನುಷ್ಕಾ ಹಾಗೂ ವಿರಾಟ್‌ ದೇಶದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.. ಇವರಿಬ್ಬರ ಪ್ರತಿಯೊಂದು ವಿಚಾರವನ್ನು ತಿಳಿದುಕೊಳ್ಳಲು ಫ್ಯಾನ್ಸ್‌ ಕುತೂಹಲ ವ್ಯಕ್ತಪಡಿಸುತ್ತಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link