ಅಫೇರ್ ವದಂತಿಗಳ ಬಗ್ಗೆ ಅನುಷ್ಕಾ ಓಪನ್ ಕಾಮೆಂಟ್ಸ್, ಒಬ್ಬರಲ್ಲ, ಐವರೂ... ಯಾರು ಗೊತ್ತಾ?
ಅನುಷ್ಕಾ ಶೆಟ್ಟಿ ಚಿತ್ರರಂಗಕ್ಕೆ ಬಂದು ಎರಡು ದಶಕಗಳೇ ಕಳೆದಿವೆ. 2005 ರಿಂದ ಅನುಷ್ಕಾ ಶೆಟ್ಟಿ ಸಿನಿರಂಗದಲ್ಲಿದ್ದಾರೆ. ಅನುಷ್ಕಾ ಶೆಟ್ಟಿ ಮದುವೆ ಮತ್ತು ಡೇಟಿಂಗ್ ಬಗ್ಗೆ ಹಲವು ವದಂತಿಗಳು ಆಗಾಗ್ಗೆ ಹರಡುತ್ತಿರುತ್ತವೆ.
ಟಾಲಿವುಡ್‌ನ ಎಲ್ಲಾ ಟಾಪ್ ಸ್ಟಾರ್‌ಗಳ ಜೊತೆ ಅನುಷ್ಕಾ ಶೆಟ್ಟಿ ನಟಿಸಿದ್ದಾರೆ. ಬಾಹುಬಲಿ ಮತ್ತು ಬಾಹುಬಲಿ 2 ಅನುಷ್ಕಾ ಶೆಟ್ಟಿ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿದವು. ದೇವಸೇನಾ ಪಾತ್ರದಲ್ಲಿ ಅನುಷ್ಕಾ ಪ್ರೇಕ್ಷಕರ ಮನಗೆದ್ದಿದ್ದಾರೆ.
ಅನುಷ್ಕಾ ಶೆಟ್ಟಿ ಇಂಡಸ್ಟ್ರಿಯಲ್ಲಿ ಚಿರಪರಿಚಿತ ಹೆಸರು. ಅನುಷ್ಕಾ ಶೆಟ್ಟಿ ಬಗ್ಗೆ ಹಲವಾರು ವದಂತಿಗಳಿವೆ. ಅದರಲ್ಲೂ ನಾಯಕ ಪ್ರಭಾಸ್ ರನ್ನು ಪ್ರೀತಿಸುತ್ತಿರುವ ಅನುಷ್ಕಾ ಮದುವೆ ಆಗುತ್ತಿದ್ದಾರೆ ಎಂದು ಹಲವು ಬಾರಿ ವದಂತಿ ಹರಡಿತ್ತು.
ಬಾಹುಬಲಿ 2 ನಂತರ ಅನುಷ್ಕಾ-ಪ್ರಭಾಸ್ ಮದುವೆಯಾಗುತ್ತಿದ್ದಾರೆ ಎಂಬ ವದಂತಿ ಮುನ್ನೆಲೆಗೆ ಬಂದಿತ್ತು. ಈ ವದಂತಿಗಳನ್ನು ಪ್ರಭಾಸ್ ಮತ್ತು ಅನುಷ್ಕಾ ನಿರಾಕರಿಸಿದ್ದಾರೆ. ನಾವು ಕೇವಲ ಸ್ನೇಹಿತರಷ್ಟೇ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಇದ್ದ ಅಫೇರ್ ವದಂತಿಗಳ ಬಗ್ಗೆ ಅನುಷ್ಕಾ ಶೆಟ್ಟಿ ಮುಕ್ತವಾಗಿ ಮಾತನಾಡಿದ್ದಾರೆ. ಜಯಪ್ರದಾ ನಡೆಸಿಕೊಡುವ ಜಯಪ್ರದಂ ಟಾಕ್ ಶೋನಲ್ಲಿ ಅನುಷ್ಕಾ ಈ ಬಗ್ಗೆ ಮಾತನಾಡಿದ್ದಾರೆ. ನಿಮ್ಮ ಬಗ್ಗೆ ಇದ್ದ ಅತಿ ದೊಡ್ಡ ರೂಮರ್ ಯಾವುದು ಎಂದು ಜಯಪ್ರದಾ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಅನುಷ್ಕಾ ಉತ್ತರಿಸಿದ್ದಾರೆ.
ನಾನು ಐದು ಬಾರಿ ಮದುವೆಯಾಗಿದ್ದೇನೆ ಎಂದು ಅನುಷ್ಕಾ ಶೆಟ್ಟಿ ಹೇಳಿದ್ದಾರೆ. ಜಯಪ್ರದಾ ಶಾಕ್ ಆಗಿ ಯಾರ ಜೊತೆ ಎಂದಿದ್ದಾರೆ. ನನ್ನ ಜೊತೆ ಕೆಲಸ ಮಾಡಿದ ಸಹನಟರ ಜೊತೆ ಎಂದು ಅನುಷ್ಕಾ ಹೇಳಿದ್ದಾರೆ.
ಸುಮಂತ್, ಗೋಪಿಚಂದ್, ಪ್ರಭಾಸ್, ಸೆಂಥಿಲ್ ಮತ್ತು ನಾಗಾರ್ಜುನ ಅವರ ಜೊತೆ ನನ್ನ ಡೇಟಿಂಗ್ ವದಂತಿ ಹಬ್ಬಿತ್ತು ಎಂದು ಅನುಷ್ಕಾ ಬಹಿರಂಗಪಡಿಸಿದ್ದಾರೆ. ಅನುಷ್ಕಾ ತಮ್ಮ ವೃತ್ತಿಜೀವನದ ಆರಂಭದಲ್ಲಿ ಸುಮಂತ್ ಮತ್ತು ಗೋಪಿಚಂದ್ ಅವರೊಂದಿಗೆ ನಟಿಸಿದ್ದಾರೆ.
ಸಿನಿಮಾಟೋಗ್ರಾಫರ್ ಸೆಂಥಿಲ್ ಕುಮಾರ್ ಜೊತೆ ಸಹ ಅನುಷ್ಕಾ ಶೆಟ್ಟಿ ಮದುವೆ ಸುದ್ದಿ ಹರಡಿತ್ತು. ನಂತರ ಸೆಂಥಿಲ್ ಕುಮಾರ್ ಬೇರೆಯವರನ್ನು ವಿವಾಹವಾದರು. ಈ ಮದುವೆಯಲ್ಲಿ ಅನುಷ್ಕಾ ಕೂಡ ಭಾಗವಹಿಸಿದ್ದರು.
ಒಂದೊಮ್ಮೆ ನಾಗಾರ್ಜುನ ಜೊತೆಗೂ ಅನುಷ್ಕಾ ಶೆಟ್ಟಿ ಡೇಟಿಂಗ್ ವದಂತಿ ಹಬ್ಬಿತ್ತು. ಅನುಷ್ಕಾ ಶೆಟ್ಟಿ ಜೊತೆ ನನ್ನನ್ನಷ್ಟೇ ಅಲ್ಲ, ನನ್ನ ಮಗನಿಗೂ ಸಂಬಂಧ ಕಲ್ಪಿಸಿದ್ರು ಎಂದು ನಾಗಾರ್ಜುನ ಸಂದರ್ಶನದಲ್ಲಿ ಹೇಳಿದ್ದರು.
ಪ್ರಭಾಸ್ ಜೊತೆಯೂ ಹಲವು ಬಾರಿ ಅನುಷ್ಕಾ ಶೆಟ್ಟಿ ಡೇಟಿಂಗ್ ವದಂತಿ ಹಬ್ಬಿತ್ತು. ಅನೇಕ ಬಾರಿ ಇವರ ಮದುವೆ ವದಂತಿಯೂ ಹರಡಿತ್ತು. ಆದರೆ ಎಲ್ಲವೂ ಕೇವಲ ವದಂತಿ ಆಗಿತ್ತು.