ಇಂದು ಅನುಷ್ಕಾ ಶೆಟ್ಟಿ ಹುಟ್ಟುಹಬ್ಬ: ಈಗಲೂ ಸುರಸುಂದರಿಯಾಗಿಯೇ ಇರುವ ಈಕೆಯ ವಯಸ್ಸೆಷ್ಟು? ಮುಂದಿನ ಚಿತ್ರ ಯಾವುದು ಗೊತ್ತಾ?
ಅನುಷ್ಕಾ ಶೆಟ್ಟಿಗೆ 43 ವರ್ಷ ಎಂದರೆ ಸಾಧ್ಯವೇ? ಆದರೆ ನಿಜ; ಅವರಿಗೆ ನಲವತ್ತಾ ಮೂರು, ಸೌಂದರ್ಯ ಮಾತ್ರ ಮಾಸಿಲ್ಲ ಒಂಚೂರೂ… ಅದೇ ಅನುಷ್ಕಾ ಅದೇ ಸೌಂದರ್ಯ…
ಖ್ಯಾತ ನಿರ್ದೇಶಕ ರಾಜಮೌಳಿ ಅವರ ‘ಬಾಹುಬಲಿ’ಯ ಈ ದೇವಸೇನಾ (ಅನುಷ್ಕಾ ಶೆಟ್ಟಿ) ಈಗ ಸಿನಿಮಾಗಳನ್ನು ಒಪ್ಪಿಕೊಳ್ಳುವುದರಲ್ಲಿ ತುಂಬಾ ಚ್ಯೂಸಿ ಆದರೂ ಮೊದಲಿನಷ್ಟೇ ಬ್ಯುಸಿ…
ತೆಲುಗು ಬಳಿಕ ಮಲೆಯಾಳಂ ಚಿತ್ರರಂಗಕ್ಕೂ ಲಗ್ಗೆ ಇಟ್ಟಿರುವ ಅನುಷ್ಕಾ ಶೆಟ್ಟಿ 'Kathanar -The Wild Sorcerer' ಎಂಬ ಸಿನಿಮಾ ಪೂರ್ಣಗೊಳಿಸಿದ್ದಾರೆ. ಇದೇ ಡಿಸೆಂಬರ್ 24ಕ್ಕೆ ಈ ಚಿತ್ರ ಬಿಡುಗಡೆ.
ಸ್ವೀಟಿ ಎಂದೇ ಹೆಸರುವಾಸಿಯಾಗಿರುವ ಅನುಷ್ಕಾ ಶೆಟ್ಟಿ ಸದ್ಯ ‘ಘಾಟಿ’ ಎಂಬ ತೆಲುಗು ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ.
‘ಘಾಟಿ’ ಬಳಿಕ ತಕ್ಷಣಕ್ಕೆ ಅನುಷ್ಕಾ ಶೆಟ್ಟಿ ಮತ್ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಈ ನಡುವೆ ಅವರು ಮದುವೆಯಾಗಲಿದ್ದಾರೆ ಎನ್ನುವ ದಟ್ಟ ವದಂತಿ ಇದೆ.
ಚೆಂದುಳ್ಳಿ ಚೆಲುವೆ ಅನುಷ್ಕಾ ಶೆಟ್ಟಿ ಅವರನ್ನು ಮದುವೆಯಾಗುವ ಆ ಅದೃಷ್ಟವಂತ ಯಾರು ಎಂಬ ವಿಷಯ ಕೂಡ ಈಗಾಗಲೇ ಚರ್ಚೆಯಾಗುತ್ತಿದೆ.