ತನ್ನ ಜೀವನದ ಬೆಸ್ಟ್ ಪರ್ಸನ್ ಎಂದು ಮೊದಲ ಬಾರಿಗೆ ಕ್ಯಾಮರಾ ಮುಂದೆ ಪರಿಚಯಿಸಿದ ಅನುಶ್ರೀ!ಈತನಿಲ್ಲದೆ ಸಂದರ್ಶನ ಅಪೂರ್ಣ ಎಂದ ಬೆಡಗಿ
ಅನುಶ್ರೀ ಇದೇ ಮೊದಲ ಬಾರಿಗೆ ತುಳುವಿನಲ್ಲಿ ಸಂದರ್ಶನ ನೀಡಿದ್ದಾರೆ. ಚಿಲ್ಲಿಂಗ್ ವಿಥ್ ಚಿಲಿಂಬಿ ಪಾಡ್ ಕಾಸ್ಟ್ ನಲ್ಲಿ ಅನುಶ್ರೀ ತನ್ನ ಜೀವನದ ಬಗ್ಗೆ ಇಲ್ಲಿಯವರೆಗೆ ಹಂಚಿಕೊಳ್ಳದ ಕೆಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಇಂದು ಪಟ ಪಟ ಎಂದು ಮಾತಿನ ಮುತ್ತು ಉದುರಿಸುವ ಅನುಶ್ರೀಗೆ ಆರಂಭದ ದಿನಗಳಲ್ಲಿ ನಿಮ್ಮ ಕನ್ನಡ ಸರಿಯಿಲ್ಲ ಎಂದಿದ್ದರಂತೆ.ನಂತರ ಅನುಶ್ರೀ ತನ್ನ ಭಾಷೆಯ ಮೇಲೆ ಹಿಡಿತ ಕಂಡು ಕೊಂಡ ಬಗೆಯ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.
ಕೆಲಸಕ್ಕೆ ಸೇರಿಕೊಂಡ ಮೇಲೂ ತಾನು ಅನುಭವಿಸಿದ ಕಷ್ಟಗಳು. ಹಣ ಇಲ್ಲ ಎಂದು ಪಿಜಿಯಿಂದ ಹೊರ ಹಾಕಿದ ಓನರ್.ಆಗ ಸಹಾಯಕ್ಕೆ ಬಂದ ಗೆಳೆಯ ಹೀಗೆ ಎಲ್ಲಾ ವಿಷಯಗಳ ಬಗ್ಗೆ ಮುಚ್ಚು ಮರೆಯಿಲ್ಲದೆ ಹೇಳಿದ್ದಾರೆ.
ಸದಾ ಅಮ್ಮ, ತಮ್ಮನ ಬಗ್ಗೆ ಹೇಳಿಕೊಳ್ಳುವ ಅನುಶ್ರೀ ಈ ಸಂದರ್ಶನದಲ್ಲಿ ತನ್ನ ಜೀವನದ ಬೆಸ್ಟ್ ಪರ್ಸನ್ ಅನ್ನು ಪರಿಚಯಿಸಿದ್ದಾರೆ. ತಾನು ಅತ್ತರೆ ತನಗಿಂತ ಹೆಚ್ಚು ಈ ವ್ಯಕ್ತಿ ಅಳುತ್ತಾರೆ ಎಂದಿದ್ದಾರೆ.
ತಾನು ಸಹಾಯ ಕೇಳಲಿ, ಕೇಳದಿರಲಿ, ತನ್ನ ಮನಸ್ಸಿನ ಮಾತು ಹೇಳಲಿ ಹೇಳದಿರಲಿ ಸದಾ ನನ್ನ ಜೊತೆ ನಿಲ್ಲುವ ವ್ಯಕ್ತಿ ಇವರು ಎಂದು ಆ ವ್ಯಕ್ತಿಯನ್ನು ಕ್ಯಾಮೆರಾ ಮುಂದೆ ಪರಿಚಯಿಸಿದ್ದಾರೆ.
ಅನುಶ್ರೀ ಜೀವನದ ಬಹು ಮುಖ್ಯ ವ್ಯಕ್ತಿಗಳಲ್ಲಿ ಒಬ್ಬರು ಖ್ಯಾತ ಕೊರಿಯೋಗ್ರಾಫಾರ್ ಪ್ರಮೋದ್ ಆಳ್ವಾ. ಮಂಗಳೂರು ಭಾಗದ ಬಹುತೇಕ ಮಂದಿಗೆ ನೃತ್ಯ ಗುರುವಾಗಿರುವ ಇವರು ಅನುಶ್ರೀಯ ಗುರು ಕೂಡಾ. ಅನುಶ್ರೀಗೆ ಇವರ ಬಗ್ಗೆ ಅಪಾರ ಹೆಮ್ಮೆ, ಗೌರವ.