ನಟನೊಂದಿಗೆ ಈ ಜಾಗಕ್ಕೆ ಹೋಗುವುದೆಂದರೆ ತುಂಬಾ ಇಷ್ಟ!ಇದೇ ಮೊದಲ ಬಾರಿಗೆ ಗೆಳೆಯನೊಂದಿಗಿನ ಒಡನಾಟದ ಬಗ್ಗೆ ಮಾತನಾಡಿದ ಅನುಶ್ರೀ
ಸೊನ್ನೆಯಿಂದ ತನ್ನ ವೃತ್ತಿ ಬದುಕನ್ನು ಆರಂಭಿಸಿ ಇಂದು ತನಗೆ ಸರಿಸಾಟಿ ಯಾರೂ ಇಲ್ಲ ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತ ಛಲಗಾತಿ.
ಇಂದು ಅನುಶ್ರೀ ಬಳಿ ಹಣ, ಯಶಸ್ಸು,ಕೀರ್ತಿ ಎಲ್ಲವೂ ಇದೆ.ಎಲ್ಲವೂ ಅವರ ಪರಿಶ್ರಮದ ಫಲ.
ಅನುಶ್ರೀಗೆ ಚಿತ್ರರಂಗದಲ್ಲಿ ಬಹಳಷ್ಟು ಮಂದಿ ಗೆಳೆಯರಿದ್ದಾರೆ. ಅದರಲ್ಲಿ ರಾಜ್ ಬಿ ಶೆಟ್ಟಿ ಕೂಡಾ ಒಬ್ಬರು.
ರಾಜ್ ಬಿ ಶೆಟ್ಟಿ ತನ್ನ ಬದುಕಿನ ಯೋಚನೆಯನ್ನೇ ಬದಲಿಸಿದ ವ್ಯಕ್ತಿ ಎನ್ನುತ್ತಾರೆ ಅನುಶ್ರೀ. ತನ್ನ ಆಧ್ಯಾತ್ಮ ಗುರು ರಾಜ್ ಬಿ ಶೆಟ್ಟಿ ಎಂದು ಹೇಳುತ್ತಾರೆ.
ಮಂಗಳೂರಿಗೆ ಬಂದಾಗ ರಾಜ್ ಬಿ ಶೆಟ್ಟಿಯೊಂದಿಗೆ ಮೀನೂಟದ ಹೋಟೆಲ್ ಗೆ ಹೋಗುವುದು, ಅಲ್ಲಿಯ ಖಾದ್ಯಗಳ ರುಚಿಯನ್ನು ಟ್ರೈ ಮಾಡುವುದೆಂದರೆ ಅನುಶ್ರೀಗೆ ತುಂಬಾ ಇಷ್ಟವಂತೆ.
ಅದು ದೊಡ್ಡ ಹೋಟೆಲ್ ಆಗಬೇಕೆಂದಿಲ್ಲ. ರಸ್ತೆ ಬದಿಯ ಸಣ್ಣ ಪುಟ್ಟ ಹೋಟೆಲ್ ಗಳಲ್ಲಿಯೂ ಊಟ ಸವಿಯುತ್ತಾರೆಯಂತೆ.ಹೀಗೆ ಮಾತನಾಡುವಾಗ ಮಂಗಳೂರಿನ ಕೆಪಿಟಿ ಬಳಿಯ ಸಣ್ಣ ಹೋಟೆಲ್ ಬಗ್ಗೆಯೂ ಮಾತನಾಡಿದ್ದಾರೆ.
ನನಗೆ ಅಲ್ಲಿ ಸಿಗುವ ಪ್ರೀತಿ, ಆತಿಥ್ಯ ನೆಮ್ಮದಿ ಬಹಳ ಇಷ್ಟ ಎಂದು ಅನುಶ್ರೀ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಜಾಗವನ್ನು ಕೂಡಾ ಅನುಶ್ರೀಗೆ ಪರಿಚಯಿಸಿದ್ದು ರಾಜ್ ಅಂತೆ.