“ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ” - ಆ್ಯಂಕರ್ ಅನುಶ್ರೀ ರಿಯಲ್‌ ತಂದೆ ಯಾರು ಗೊತ್ತೇ?

Fri, 18 Oct 2024-7:57 am,

ಅಮ್ಮ ನನ್ನ ಜೀವನದ ಬಹುದೊಡ್ಡ ಹಿರೋ. ನಾವು ಯಾವ ನೆಂಟರ ಮನೆಯಲ್ಲೂ ಅಲ್ಲ, ನಮ್ಮದೇ ಬಾಡಿಗೆ ಮನೆಯಲ್ಲಿ ಇದ್ದೆವು ಎಂದು ಹೇಳಿದ್ದಾರೆ.

ಅನುಶ್ರೀ ಕಷ್ಟದ ದಿನಗಳನ್ನು ನೆನೆಯುತ್ತ, ಅಮ್ಮನ ಬಳಿ ಕೇವಲ 4 ಸೀರೆ ಇತ್ತು. ನನ್ನ ತಮ್ಮ ಅಂಗನವಾಡಿಗೆ ಹೋಗುತ್ತಿದ್ದ. ಅಲ್ಲಿ ಪೌಷ್ಟಿಕ ಆಹಾರದ 2 ಪ್ಯಾಕೇಟ್‌ ಕೊಡುತ್ತಿದ್ದರು. ನಾನು ಅಂಗನವಾಡಿ ಅವರ ಬಳಿ ಮನವಿ ಮಾಡಿ ಎರಡು ಪ್ಯಾಕೆಟ್‌ ಹೆಚ್ಚಿಗೆ ತರುತ್ತಿದೆ. ಮನೆಯಲ್ಲಿ ಎಷ್ಟೋ ಬಾರಿ ಊಟ ಇರುತ್ತಿರಲಿಲ್ಲ. 

ಪೌಷ್ಟಿಕ ಆಹಾರದ ಪುಡಿಯನ್ನ ನೀರಿನಲ್ಲಿ ಕಲಸಿ ರೊಟ್ಟಿ ತರ ಮಾಡಿ ಮೂವರೂ ತಿನ್ನುತ್ತಿದ್ದೆವು. ನಾವು ಇಷ್ಟೆಲ್ಲ ಕಷ್ಟ ಪಡುವ ಸಮಯದಲ್ಲಿ ಬರದವರು, ಈಗ ಬಂದು ನಾನು ನಿಮ್ಮ ಅಪ್ಪ ಎಂದರೆ ಹೇಗೆ ಸಾಧ್ಯ.. ಅದನ್ನು ಒಪ್ಪಿಕೊಳ್ಳಲು ನಾನು ರೆಡಿ ಇಲ್ಲ ಎಂದು ಅನುಶ್ರೀ ಹೇಳಿದ್ದಾರೆ.

ನನ್ನ ಅಮ್ಮನೇ ನನಗೆ ಅಪ್ಪ.. ಹುಟ್ಟಿಸಿದಿರಿ ಅನ್ನುವ ಕಾರಣಕ್ಕೆ ಅಪ್ಪ-ಅಮ್ಮ ಆಗಿಬಿಟ್ಟಂತಲ್ಲ. ಮಕ್ಕಳ ಭವಿಷ್ಯದ ಬೆಳವಣಿಗೆ ಪೋಷಕರ ಬಹುದೊಡ್ಡ ಜವಾಬ್ದಾರಿ ಎಂದಿದ್ದಾರೆ. 

ಒಂದು ಹೆಣ್ಣು ನಿಮ್ಮನ್ನು ನಂಬಿ ಬಂದಿರುತ್ತಾಳೆ. ತವರಮನೆ ಬಿಟ್ಟು ಬರುತ್ತಾಳೆ. ಯಾವ ಸಂದರ್ಭದಲ್ಲೂ ಅವಳ ಕೈ ಬಿಡಬಾರದು. ಮಕ್ಕಳನ್ನು ಹುಟ್ಟಿಸಿ, ನಾನು ಮಕ್ಕಳನ್ನು ನೋಡಿಕೊಳ್ಳಲು ತಯಾರಿಲ್ಲ ಎಂದರೆ ಆಕೆ ಏನು ಮಾಡಬೇಕು ಎಂದಿದ್ದಾರೆ ಅನುಶ್ರೀ. 

ಒಬ್ಬ ತಂದೆ ಹಿರೋ ತರ ಇರಬೇಕು. ಆದ್ರೆ ನಮ್ಮ ಅಪ್ಪ ಹಿರೋ ತರ ಇರಲಿಲ್ಲ.. ನನ್ನ ಅಮ್ಮನಿಗೆ ಒಳ್ಳೆಯ ಗಂಡನಂತೆ ಇದ್ರಾ ಇಲ್ವಾ ಅದು ನನಗೆ ಗೊತ್ತಿಲ್ಲ. ತಂದೆ ಬಿಟ್ಟು ಹೋದಾಗ ತಾಯಿ ಕಷ್ಟ ಪಟ್ಟ ದಿನಗಳ ಬಗ್ಗೆ ನನೆದು ಅನುಶ್ರೀ ಕಣ್ಣೀರು ಹಾಕಿದ್ದಾರೆ. 

ಇದೇ ಮೊದಲ ಬಾರಿ ಅನುಶ್ರೀ ತನ್ನ ತಂದೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಆದರೆ ಎಲ್ಲಿಯೂ ತಮ್ಮ ತಂದೆಯ ಹೆಸರು ಮತ್ತು ಗುರುತನ್ನು ಅನುಶ್ರೀ ಬಹಿರಂಗ ಪಡಿಸಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link