ಈಗ ಲಕ್ಷಗಳಲ್ಲಿ ವೇತನ ಪಡೆಯುವ ಅನುಶ್ರೀಯ ಮೊದಲ ಸಂಭಾವನೆ ಎಷ್ಟು ಗೊತ್ತಾ? ಅದು ಟಿವಿ ನಿರೂಪಣೆಗಾಗಿ ಅಲ್ಲ !

Fri, 19 Apr 2024-4:57 pm,

ಅನುಶ್ರೀ ಇಂದು ಇಷ್ಟೊಂದು ಖ್ಯಾತಿ ಪಡೆದಿರಬಹುದು. ಆದರೆ ಅವರ ಜೀವನ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ.ಕಡು ಬಡತನವನ್ನು ಕಂಡು ಎಲ್ಲ ರೀತಿಯ ಕಷ್ಟಗಳನ್ನು ಈಜಿ ಗೆದ್ದಿ ಬಂದಿದ್ದಾರೆ.   

ಇಂದು ಟಿವಿ ಜಗತ್ತಿನಲ್ಲಿ ಅನುಶ್ರೀ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಿರೂಪಕಿ ಎಂದೇ ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಅನುಶ್ರೀ ಲಕ್ಷಗಳಲ್ಲಿ  ಸಂಭಾವನೆ ಪಡೆಯುತ್ತಾರೆಯಂತೆ.   

ಆದರೆ ಈ ಮಟ್ಟಕ್ಕೆ ಬೆಳೆಯಲು ಅನುಶ್ರೀ ಬಹಳ ಕಷ್ಟಪಟ್ಟಿದ್ದಾರೆ. ಅವರು ಕೆಲಸಕ್ಕೆ ಸೇರಿದಾಗಲೇ ಇಷ್ಟೋ ದೊಡ್ಡ ಮಟ್ಟದಲ್ಲಿ ವೇತನ ಪಡೆದವರಲ್ಲ.ತನ್ನ ಶ್ರಮ, ಪ್ರತಿಭೆಯ ಮೂಲಕ ಜನಪ್ರಿಯತೆ ಗಳಿಸಿದ ನಂತರವೇ ಇಂದು ಈ ಮಟ್ಟಕ್ಕೆ ಬಂದು ನಿಂತಿದ್ದಾರೆ.   

ಗೇಮ್ ಶೋ ಕಾರ್ಯಕ್ರಮವೊಂದರಲ್ಲಿ ಅನುಶ್ರೀ ತನ್ನ ಮೊದಲ ವೇತನದ ಬಗ್ಗೆ ಮಾತನಾಡಿದ್ದಾರೆ.ಅನುಶ್ರೀ ತನ್ನ ಕೆಲಸಕ್ಕೆ ಮೊದಲು ಪಡೆದ ಸಂಭಾವನೆ 250 ರೂಪಾಯಿಯಂತೆ. ತಾನು ಮೊದಲ ಸಂಭಾವನೆಯಾಗಿ ಪಡೆದ 250 ರೂಪಾಯಿಯನ್ನು ಅವರು ಇಂದಿಗೂ ಹಾಗೆಯೇ ಇಟ್ಟುಕೊಂಡಿದ್ದಾರೆಯಂತೆ. 

ಅನುಶ್ರೀಯವರ ಈ ಸಂಭಾವನೆ ಯಾವುದೋ ಟಿವಿ ಕಾರ್ಯಕ್ರಮದ್ದಲ್ಲ. ಬದಲಾಗಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ತಾನು ನಡೆಸಿದ ನಿರೂಪಣೆಗಾಗಿ ಪಡೆದಿದ್ದು.ಈ ಮೊದಲ ಪೇಮೆಂಟ್ ಬಗ್ಗೆ ಮಾತನಾಡುವಾಗ ಅನುಶ್ರೀ ಭಾವುಕರಾಗುತ್ತಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link