ಎಲ್‌ಪಿಜಿ ಸಿಲಿಂಡರ್‌ಗಳಿಗೆ ಸಬ್ಸಿಡಿ ಹೊರತಾಗಿ ಪಡೆಯಿರಿ ಕ್ಯಾಶ್‌ಬ್ಯಾಕ್, ಇಲ್ಲಿದೆ ವಿಧಾನ

Thu, 26 Nov 2020-1:15 pm,

ನವದೆಹಲಿ: ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳಿಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. ಆದರೆ ಸಬ್ಸಿಡಿಯ ಹೊರತಾಗಿ ನೀವು ಗ್ಯಾಸ್ ಬುಕಿಂಗ್‌ನಲ್ಲಿ ಹೆಚ್ಚುವರಿ ಲಾಭವನ್ನು ಸಹ ಪಡೆಯಬಹುದು. ಗ್ಯಾಸ್ ಬುಕಿಂಗ್‌ನಲ್ಲಿ ನೀವು ಕ್ಯಾಶ್‌ಬ್ಯಾಕ್ ಪಡೆಯುತ್ತೀರಿ. ಇದಕ್ಕಾಗಿ ನಿಮ್ಮ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ಅಮೆಜಾನ್‌ನಿಂದ ಕಾಯ್ದಿರಿಸಬೇಕು.

ಮೊದಲನೆಯದಾಗಿ ನೀವು ಅಮೆಜಾನ್ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು. ನಿಮ್ಮ ಮೊಬೈಲ್ ಈಗಾಗಲೇ ಈ ಅಪ್ಲಿಕೇಶನ್ ಅನ್ನು ಹೊಂದಿದ್ದರೆ ನಂತರ ಅದರ ಅಮೆಜಾನ್ ಪೇ ಆಯ್ಕೆಗೆ ಹೋಗಿ. ನಂತರ ಬಿಲ್ ಪಾವತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅದರಲ್ಲಿ ಗ್ಯಾಸ್ ಸಿಲಿಂಡರ್ ಆಯ್ಕೆಯನ್ನು ಕ್ಲಿಕ್ ಮಾಡಿ. ಇದರ ನಂತರ, ಆಪರೇಟರ್ ಅನ್ನು ಆಯ್ಕೆ ಮಾಡಿ ಭಾರತ್ ಗ್ಯಾಸ್, ಎಚ್ಪಿ ಗ್ಯಾಸ್, ಇಂಡೇನ್ ಗ್ಯಾಸ್ ಆಪರೇಟರ್ ಗಳಲ್ಲಿ ನಿಮ್ಮ ಗ್ಯಾಸ್ ಸಿಲಿಂಡರ್ ಯಾವುದೆಂದು ಆರಿಸಿ. ನಂತರ ಮೊಬೈಲ್ ಸಂಖ್ಯೆ ಅಥವಾ ಎಲ್ಪಿಜಿ ಐಡಿ ನಮೂದಿಸಿ. ಗ್ಯಾಸ್ ಬುಕಿಂಗ್ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ ಮತ್ತು ನಿಮ್ಮ ಬುಕಿಂಗ್ ವಿವರಗಳು ಬರುತ್ತವೆ.

ನೀವು ಅಮೆಜಾನ್‌ನಿಂದ ಗ್ಯಾಸ್ ಬುಕ್ ಮಾಡಿದರೆ, ನಿಮಗೆ 50 ರೂಪಾಯಿಗಳ ಕ್ಯಾಶ್‌ಬ್ಯಾಕ್ ಸಿಗುತ್ತದೆ. ಈ ಕ್ಯಾಶ್‌ಬ್ಯಾಕ್ ಸರ್ಕಾರದ ಸಬ್ಸಿಡಿಗೆ ಹೆಚ್ಚುವರಿಯಾಗಿರುತ್ತದೆ. ನೀವು ಇಂಡೇನ್, ಭಾರತ್ ಗ್ಯಾಸ್ ಮತ್ತು ಎಚ್‌ಪಿ ಗ್ಯಾಸ್‌ಗಾಗಿ ಅಮೆಜಾನ್ ಪೇ ಮೂಲಕ ಸಿಲಿಂಡರ್ ಅನ್ನು ಕಾಯ್ದಿರಿಸಬಹುದು. ನೀವು ಈ ಮೂರು ಕಂಪನಿಗಳಲ್ಲಿ ಯಾವುದೇ ಕಂಪನಿಯ ಗ್ರಾಹಕರಾಗಿದ್ದರೆ ನೀವು ಅಮೆಜಾನ್ ಗ್ಯಾಸ್ ಬುಕಿಂಗ್‌ನಲ್ಲಿ ಕ್ಯಾಶ್‌ಬ್ಯಾಕ್ ಲಾಭವನ್ನು ನೀಡಬಹುದು.  

ಅದೇ ಸಮಯದಲ್ಲಿ ನೀವು ಅಮೆಜಾನ್‌ನಿಂದ ಬುಕಿಂಗ್ ಮಾಡುವಾಗಲೇ ನೀವು ಪಾವತಿಸಬೇಕಾಗುತ್ತದೆ. ಪಾವತಿಗಳನ್ನು ಮಾಡಲು ನಿಮಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ಯುಪಿಐ ಆಯ್ಕೆಗಳು ಲಭ್ಯವಿದೆ. ಅಮೆಜಾನ್ ಪೇ ಖಾತೆಯಲ್ಲಿ ನಿಮ್ಮ ಬಳಿ ಹಣವಿದ್ದರೆ ನೀವು ಅದನ್ನು ಗ್ಯಾಸ್ ಬುಕಿಂಗ್‌ನಲ್ಲಿಯೂ ಬಳಸಬಹುದು.

ನೀವು ಅಮೆಜಾನ್ ಮೂಲಕ ಪಾವತಿಸಿದ ತಕ್ಷಣ ನೀವು ದೃಢೀಕರಣವನ್ನು ಪಡೆಯುತ್ತೀರಿ. ಗ್ಯಾಸ್ ಬುಕಿಂಗ್ ಆದ ಕೂಡಲೇ ಗ್ಯಾಸ್ ವಿತರಕರು ಬುಕಿಂಗ್ ಐಡಿಯನ್ನು ಸಹ ಗ್ರಾಹಕರಿಗೆ ಕಳುಹಿಸುತ್ತಾರೆ. ಈ ರೀತಿಯಾಗಿ ಗ್ಯಾಸ್ ಸಿಲಿಂಡರ್ ಅನ್ನು ಕಾಯ್ದಿರಿಸಿದ ನಂತರ ನೀವು ಕ್ಯಾಶ್ಬ್ಯಾಕ್ ಪಡೆಯುತ್ತೀರಿ. ಆದರೆ ಇದಕ್ಕಾಗಿ ನೀವು 3 ದಿನಗಳವರೆಗೆ ಕಾಯಬೇಕಾಗಬಹುದು. ಈ ಕ್ಯಾಶ್‌ಬ್ಯಾಕ್ ಯೋಜನೆಯನ್ನು ನೀವು ಡಿಸೆಂಬರ್ 1 ರವರೆಗೆ ಮಾತ್ರ ಪಡೆಯಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link