APJ Abdul Kalam death anniversary : ಎಪಿಜೆ ಅಬ್ದುಲ್ ಕಲಾಂ ಪುಣ್ಯತಿಥಿ: ನಿಮಗೆಷ್ಟು ಗೊತ್ತು `ಮಿಸೈಲ್ ಮ್ಯಾನ್ ಆಫ್ ಇಂಡಿಯಾ` ಬಗ್ಗೆ!
ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿ : ನಿಮಗೆ ಗೊತ್ತಿಲ್ಲದ ಸಂಗತಿಗಳು : ಡಾ ಎಪಿಜೆ ಅಬ್ದುಲ್ ಕಲಾಂ ಅವರು ಭಾರತದ ಮಿಸೈಲ್ ಮ್ಯಾನ್ ಏಕೆ? ಇವರು ರೋಹಿಣಿ ಉಪಗ್ರಹವನ್ನು ಭೂಮಿಯ ಸುತ್ತ ಕಕ್ಷೆಗೆ ಸೇರಿಸುವ ಮೊದಲ ಉಪಗ್ರಹ ಉಡಾವಣಾ ವಾಹನವಾದ SLV-III ನಲ್ಲಿ ಕೆಲಸ ಮಾಡಿದರು. ಇಂಟಿಗ್ರೇಟೆಡ್ ಗೈಡೆಡ್ ಮಿಸೈಲ್ ಡೆವಲಪ್‌ಮೆಂಟ್ ಪ್ರೋಗ್ರಾಮ್‌ನ ಹಿಂದೆ ಅವರು ಪ್ರಮುಖ ವ್ಯಕ್ತಿಯಾಗಿದ್ದರು, ನಂತರ ಅವರನ್ನು ಭಾರತದ ಮಿಸೈಲ್ ಮ್ಯಾನ್ ಎಂದು ಕರೆಯಲಾಯಿತು. (ಫೈಲ್ ಫೋಟೋ)
ಎಪಿಜೆ ಅಬ್ದುಲ್ ಕಲಾಂ ಅವರ ಪೂರ್ಣ ಹೆಸರೇನು? : ಇವರ ಹೆಸರು ಎಪಿಜೆ ಅಬ್ದುಲ್ ಕಲಾಂ ಎಂಬುವುದು ಗೊತ್ತು, ಅವರ ಪೂರ್ಣ ಹೆಸರು ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಎಂದು ಅನೇಕರಿಗೆ ಗೊತ್ತಿಲ್ಲ. (ಫೈಲ್ ಫೋಟೋ)
ಎಪಿಜೆ ಅಬ್ದುಲ್ ಕಲಾಂ ಅವರ ಕಷ್ಟದ ಬಾಲ್ಯ ಜೀವನ : ಕಲಾಂ ಅವರ ಪೂರ್ವಜರು ಶ್ರೀಮಂತರಾಗಿದ್ದರೂ, ಡಾ. ಕಲಾಂ ಅವರು ತಮ್ಮ ಯುವ ಜೀವನದುದ್ದಕ್ಕೂ ಅದು ಇದು ಅಂತ ಕೆಲಸಗಳನ್ನು ಮಾಡಲು ಹೋಗಿ ವ್ಯಾಪಾರದಲ್ಲಿ ಭಾರಿ ನಷ್ಟ ಅನುಭವಿಸಿದರು ನಂತರ ಅವರ ಕುಟುಂಬವನ್ನು ಆರ್ಥಿಕವಾಗಿ ದುರ್ಬಲಗೊಂಡರು.
ಭಾರತದ ಪರಮಾಣು ಶಕ್ತಿಗೆ ಕಲಾಂ ಜಿ ಕೊಡುಗೆ : ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಭಾರತದ ಪರಮಾಣು ಶಕ್ತಿ ಅನೇಕ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ, ಮುಖ್ಯವಾಗಿ 1988 ರಲ್ಲಿ ನಡೆಸಲಾದ ಐತಿಹಾಸಿಕ ಪೋಖ್ರಾನ್ -2 ಪರಮಾಣು ಪರೀಕ್ಷೆಗೆ ಇವರ ಕೊಡುಗೆ ತುಂಬಾ ಇದೆ.
ಭಾರತೀಯ ವಾಯುಪಡೆ ಸೇರಲು ಬಯಸಿದ ಡಾ ಕಲಾಂ : ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಅತ್ಯಂತ ಪ್ರಸಿದ್ಧ ವಿಜ್ಞಾನಿಯಾಗಿದ್ದರು, ಆದರೆ ಅವರು ತಮ್ಮ ಜೀವನದ ಆರಂಭದಲ್ಲಿ ಭಾರತೀಯ ವಾಯುಪಡೆಗೆ ಸೇರುವ ಅವಕಾಶವನ್ನು ಕಳೆದುಕೊಂಡರು ಎಂದು ಅನೇಕ ಜನರಿಗೆ ತಿಳಿದಿಲ್ಲ, ಏಕೆಂದರೆ ಅವರು ಕೇವಲ ಅಂಕದಿಂದ ಸ್ಥಾನದಿಂದ ಶಾರ್ಟ್‌ಲಿಸ್ಟ್ ಅನ್ನು ಕಳೆದುಕೊಂಡರು.