ಮಾರಾಟದ ಮೊದಲ ದಿನವೇ ಬಿಗ್ ಡಿಸ್ಕೌಂಟ್ ! 18 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ iPhone 16 !

Fri, 20 Sep 2024-11:13 am,

ಭಾರತದಲ್ಲಿ ಇಂದು ಐಫೋನ್ 16 ಮಾರಾಟ ಪ್ರಾರಂಭವಾಗುತ್ತದೆ.  ಈ ಫೋನ್‌ಗಳನ್ನು  Apple ಸ್ಟೋರ್‌ಗಳಿಂದ ಅಥವಾ Amazon, Flipkart, Croma ಮುಂತಾದ ಸ್ಟೋರ್‌ಗಳಿಂದ ಖರೀದಿಸಬಹುದು. 

ಭಾರತದಲ್ಲಿ, iPhone 16 ಬೆಲೆ  79,900 ರೂ.  iPhone 16 Plus ಬೆಲೆ 89,900 ರೂಪಾಯಿ, iPhone 16 Pro ಬೆಲೆ 1,19,900 ರೂ.ಗಳಿಂದ ಪ್ರಾರಂಭವಾಗುತ್ತದೆ.iPhone 16 Pro Max ಬೆಲೆ 1,44,900 ರೂ.ಗೆ ಲಭ್ಯವಿದೆ. ಆದರೆ ಈ ಫೋನ್‌ಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.  

iPhone 16 ಅನ್ನು ಖರೀದಿಸಲು ಅಮೆರಿಕನ್ ಎಕ್ಸ್‌ಪ್ರೆಸ್,ಆಕ್ಸಿಸ್ ಬ್ಯಾಂಕ್ ಮತ್ತು ICICI ಬ್ಯಾಂಕ್ ಕಾರ್ಡ್ ಬಳಸಿದರೆ 5000 ರೂ.ವರೆಗಿನ ತ್ವರಿತ ರಿಯಾಯಿತಿ ಸಿಗುವುದು. ಹಳೆಯ ಐಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹೆಚ್ಚಿನ ರಿಯಾಯಿತಿ ಪಡೆಯಬಹುದು. ಹಳೆಯ iPhone 13ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ  25,000 ವರೆಗೆ ರಿಯಾಯಿತಿಯನ್ನು ಪಡೆಯಬಹುದು.ಹಳೆಯ ಫೋನ್‌ಗಳನ್ನು ವಿನಿಮಯ ಮಾಡಿಕೊಳ್ಳಲು ಆಪಲ್ 4000 ರಿಂದ 67,500 ರವರೆಗೆ ರಿಯಾಯಿತಿ ನೀಡುತ್ತಿದೆ.  

ಈ ಎಲ್ಲಾ  ರಿಯಾಯಿತಿಯನ್ನು ಸೇರಿಸಿದರೆ 72,500 ರೂಪಾಯಿ ಡಿಸ್ಕೌಂಟ್ ಸಿಗುತ್ತದೆ. ಅಂದರೆ  ಈ ರಿಯಾಯಿತಿ ಪಡೆಯುವುದು ಸಾಧ್ಯವಾದರೆ iPhone 16 ಬೆಲೆ 6, 500 ರಾದರೆ iPhone 16 Plus ಬೆಲೆ 17,400 ಆಗುವುದು.   

ಇಲ್ಲಿ ನೀವು ಎಕ್ಸ್ಚೇಂಜ್ ಮಾಡುವ ಫೋನ್ ಉತ್ತಮ ಸ್ಥಿತಿಯಲ್ಲಿದ್ದು ಸಂಪೂರ್ಣ ಡಿಸ್ಕೌಂಟ್ ನಿಮಗೆ ಸಿಕ್ಕಿದರೆ ಮಾತ್ರ  iPhone 16 ಸರಣಿಯ ಫೋನ್ ಗಳು ಕಡಿಮೆ ಬೆಲೆಗೆ ಸಿಗುತ್ತದೆ. ಇಲ್ಲವಾದರೆ ಅದರ ನಿಜ ಬೆಲೆಯನ್ನು ಕೊಟ್ಟೇ ಖರೀದಿಸಬೇಕಾಗುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link