Apple Peel Benefits: ಸೇಬು ಹಣ್ಣನ್ನು ತಿನ್ನುವಾಗ ಸಿಪ್ಪೆ ಸುಲಿಯಬೇಡಿ, ಇಲ್ಲಿವೆ ಅದರ 5 ಅದ್ಭುತ ಲಾಭಗಳು
ತೂಕ ಇಳಿಕೆಗೆ ಕಾರಣವಾಗುವ ಹಣ್ಣುಗಳಲ್ಲಿ ಸೇಬುಹಣ್ಣು ಕೂಡ ಒಂದು. ಸೇಬು ಹಣ್ಣಿನ ಸಿಪ್ಪೆ ಯುರ್ಸೋಲಿಕ್ ಆಮ್ಲದ ಆಗರವಾಗಿದೆ. ಇದು ಹೊಟ್ಟೆ ಭಾಗದಲ್ಲಿರುವ ಫ್ಯಾಟ್ ಇಳಿಕೆಗೆ ಕಾರಣವಾಗುತ್ತದೆ ಮತ್ತು ಇದರಿಂದ ಬೇಗ ತೂಕ ಇಳಿಕೆಯಾಗುತ್ತದೆ.
ಉಸಿರಾಟದ ತೊಂದರೆ ಇರುವವರು ಸೇಬು ಹಣ್ಣನ್ನು ಸಿಪ್ಪೆ ಸಮೇತ ಸೇವಿಸಬೇಕು. ಏಕೆಂದರೆ, ಸೇಬು ಹಣ್ಣಿನ ಸಿಪ್ಪೆಯಲ್ಲಿ ಕ್ಯೋರ್ಸೆಟಿನ್ ಹೆಸರಿನ ತತ್ವ ಕಂಡುಬರುತ್ತದೆ. ಇದು ಉಸಿರಾಟದ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಿದೆ.
ವೈದ್ಯರೂ ಕೂಡ ಸೇಬನ್ನು ಸಿಪ್ಪೆ ಸಮೇತ ಸೇವಿಸಬೇಕು ಎಂದು ಸಲಹೆ ನೀಡುತ್ತಾರೆ. ಏಕೆಂದರೆ, ಒಂದು ಸಂಪೂರ್ಣ ಸೇಬಿನಲ್ಲಿ 8.6 ಮಿ.ಗ್ರಾಂ.ವಿಟಮಿನ್ ಸಿ ಹಾಗೂ 98 ಇಂಟರ್ನ್ಯಾಷನಲ್ ಯುನಿಟ್ ಗಳಷ್ಟು ವಿಟಮಿನ್ ಎ ಇರುತ್ತದೆ. ಸಿಪ್ಪೆ ತೆಗೆದುಹಾಕಿದರೆ ಅವುಗಳ ಪ್ರಮಾಣ 6.5 ಮಿ.ಗ್ರಾಂ ಹಾಗೂ 60 ಐ.ಯುಗೆ ಬಂದು ನಿಲ್ಲುತ್ತದೆ.
ಮಧ್ಯಮ ಗಾತ್ರದ ಸೇಬು ಸುಮಾರು 4.5 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ, ಆದರೆ ಈ ಸೇಬಿನ ಸಿಪ್ಪೆಯನ್ನು ತೆಗೆದಾಗ, ಈ ಹಣ್ಣಿನಲ್ಲಿರುವ ಫೈಬರ್ ಪ್ರಮಾಣವು ಕೇವಲ 2 ಗ್ರಾಂ ಮಾತ್ರ ಉಳಿಯುತ್ತದೆ. ಅಂದರೆ ಸೇಬಿನ ಸಿಪ್ಪೆಯಲ್ಲಿ ತಿರುಳಿಗಿಂತ ಹೆಚ್ಚು ನಾರಿನಂಶವಿದೆ, ಇದು ಆರೋಗ್ಯಕ್ಕೆ ಅತ್ಯಗತ್ಯವಾಗಿದೆ.
ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾನಿಲಯದ ಸಂಶೋಧನೆಯಲ್ಲಿ, ಸಿಪ್ಪೆಯೊಂದಿಗೆ ಸೇಬುಗಳನ್ನು ತಿನ್ನುವುದು ಹೊಟ್ಟೆ, ಯಕೃತ್ತು ಮತ್ತು ಸ್ತನ ಕ್ಯಾನ್ಸರ್ ಕೋಶಗಳನ್ನು ಉತ್ಪಾದಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ.