ಪ್ರತಿನಿತ್ಯ ಈ ಹಣ್ಣನ್ನು ಸೇವಿಸುವುದರಿಂದ ದಿನವಿಡೀ ಕಂಟ್ರೋಲ್‌ನಲ್ಲಿರುತ್ತೆ ಬ್ಲಡ್ ಶುಗರ್..!
Diabetes: ʻಆನ್ ಆಪಲ್ ಎ ಡೆ ಕೀಪ್ಸ್ ಆ ಡಾಕ್ಟರ್ ಅವೇʼ ಎಂಬ ಗಾದೆ ಮಾತನ್ನು ನೀವು ಕೇಳಿರಬಹುದು. ಸೇಬಿನಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದ ಹಲವಾರು ಪೋಷಕಾಂಶಗಳಿವೆ. ಇದನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನೆಗಲು ಸಿಗುತ್ತೆ ಎಂಬುದು ಗೊತ್ತಿರುವ ವಿಚಾರ. ಆದರೆ, ಇದೇ ಸೇಬು ಹಣ್ಣನ್ನು ಸೇವಿಸುವುದರಿಂದ ನಿಮ್ಮ ಬ್ಲಡ್ ಶುಗರ್ ಅನ್ನು ಕಂಟ್ರೋಲ್‌ನಲ್ಲಿ ಇಡಬಹುದು.
ಮಧ್ಯಮ ಗಾತ್ರದ ಸೇಬು 5 ಗ್ರಾಂ ಫೈಬರ್ ಅನ್ನು ನಮ್ಮ ದೇಹಕ್ಕೆ ಒದಗಿಸುತ್ತದೆ, ಇದು ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.
ಸೇಬು ಫೈಬರ್ ಅನ್ನು ಹೊಂದಿರುವುದಷ್ಟೆ ಅಲ್ಲದೆ,ರಕ್ತದಲ್ಲಿನ ಲಿಪಿಡ್ ಮಟ್ಟವನ್ನು ಕಡಿಮೆ ಮಾಡಿ, ಶುಗರ್ ಅನ್ನು ಕಂಟ್ರೋಲ್ ಮಾಡುವಲ್ಲಿ ಸಹಾಯ ಮಾಡುತ್ತದೆ. ಟೈಪ್ 2 ಮಧುಮೇಹ ಹೊಂದಿರುವ ಜನರಿಗೆ ಸೇಬು ತುಂಬಾ ಸಹಾಯ ಮಾಡುತ್ತದೆ.
ಸೇಬನ್ನು ಸೇವಿಸುವುದರಿಂದ ದುರ್ಬಲ ರಕ್ತದ ಸಕ್ಕರೆ ನಿಯಂತ್ರಣವನ್ನು ಮಾಡುವಲ್ಲಿ ಸಹಾಯ ಮಾಡುತ್ತದೆ.
ಊಟಕ್ಕೂ ಮೊದಲು ಸೇಬನ್ನು ಸೇವಿಸುವುದರಿಂದ ದುರ್ಬಲಗೊಂಡ ಗ್ಲೂಕೋಸ್ ಸಹಿಷ್ಣುತೆ ಹೊಂದಿರುವ ಜನರಲ್ಲಿ ಆಹಾರದ ನಂತರದ ರಕ್ತದಲ್ಲಿನ ಸಕ್ಕರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.