ಚಹಾ ಪುಡಿಯನ್ನು ಇದರೊಂದಿಗೆ ಬೆರೆಸಿ ಹಚ್ಚಿದರೆ ಬಿಳಿ ಕೂದಲು ಕಪ್ಪಾಗುವುದು ಗ್ಯಾರಂಟಿ ! ಹೇಗೆ ಮತ್ತು ಎಷ್ಟು ಬಾರಿ ಹಚ್ಚಬೇಕು ಗೊತ್ತಿರಲಿ
ಯಾವುದೇ ಅಡ್ಡಪರಿಣಾಮಗಳಿಲ್ಲದೆ ಬಿಳಿ ಕೂದಲನ್ನು ಕಪ್ಪಾಗಿಸಬೇಕಾದರೆ ನೈಸರ್ಗಿಕ ವಸ್ತುಗಳನ್ನೇ ಬಳಸಬೇಕು. ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಚಹಾ ಪುಡಿಯನ್ನು ಹೀಗೆ ಬಳಸಬಹುದು.
ಚಹಾ ಎಲೆಗಳಲ್ಲಿ ಟ್ಯಾನಿಕ್ ಆಮ್ಲ ಕಂಡುಬರುತ್ತದೆ. ಇದು ಬಿಳಿ ಕೂದಲನ್ನು ಕಪ್ಪು ಮಾಡುವ ಕೆಲಸ ಮಾಡುತ್ತದೆ.ಇದರ ಬಳಕೆಯಿಂದ ಕೂದಲು ಮೃದುವಾಗಿ ಕಾಂತಿಯುತವಾಗುತ್ತದೆ.
ಬಿಳಿ ಕೂದಲನ್ನು ಕಪ್ಪಾಗಿಸಲು, ಬ್ಲಾಕ್ ಟೀ ಯಿಂದ ಕೂದಲಿಗೆ ಸ್ನಾನ ಮಾಡಬೇಕು. ಇದಕ್ಕಾಗಿ, 2 ಕಪ್ ನೀರು ತೆಗೆದುಕೊಂಡು ಅದರಲ್ಲಿ 4-5 ಚಮಚ ಟೀ ಪುಡಿ ಹಾಕಿ. ಈಗ ಈ ನೀರನ್ನು ಚೆನ್ನಾಗಿ ಕುದಿಸಿ. ಈ ನೀರನ್ನು ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಸರಳ ನೀರಿನಿಂದ ಕೂದಲನ್ನು ಸ್ವಚ್ಛಗೊಳಿಸಿ.
ಬಿಳಿ ಕೂದಲನ್ನು ಕಪ್ಪಾಗಿಸಲು, ಕಾಫಿಯೊಂದಿಗೆ ಬ್ಲಾಕ್ ಟೀ ಬಳಸಬಹುದು. ಇದಕ್ಕಾಗಿ, 2 ಕಪ್ ನೀರು ತೆಗೆದುಕೊಂಡು ಅದರಲ್ಲಿ 4 ಚಮಚ ಟೀ ಪುಡಿ, 2-3 ಚಮಚ ಕಾಫಿ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ. ಈ ನೀರು ತಣ್ಣಗಾದ ಬಳಿಕ ಬ್ರಷ್‌ನ ಸಹಾಯದಿಂದ ಅದನ್ನು ನಿಮ್ಮ ಕೂದಲಿಗೆ ಹಚ್ಚಿ. ಸುಮಾರು 1 ಗಂಟೆಗಳ ಕಾಲ ಕೂದಲಿನ ಮೇಲೆ ಇರಿಸಿ. ನಂತರ ಕೂದಲನ್ನು ನೀರಿನಿಂದ ತೊಳೆಯಿರಿ.
ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು, ಬ್ಲಾಕ್ ಟೀ ಮತ್ತು ಓಮ ಕಾಳನ್ನು ಬಳಸಬಹುದು. ಇದಕ್ಕಾಗಿ, 2 ಗ್ಲಾಸ್ ನೀರನ್ನು ಬಿಸಿ ಮಾಡಿ. ಅದರಲ್ಲಿ 2 ಚಮಚ ಚಹಾ ಪುಡಿ ಮತ್ತು 2 ಚಮಚ ಓಮಕಾಳು ಸೇರಿಸಿ ಚೆನ್ನಾಗಿ ಕುದಿಸಿ. ಈ ನೀರಿಗೆ 2 ಚಮಚ ಗೋರಂಟಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಈಗ ಅದನ್ನು ನಿಮ್ಮ ಕೂದಲಿಗೆ ಹಚ್ಚಿ ಮತ್ತು ಸುಮಾರು ಒಂದು ಗಂಟೆ ಬಿಡಿ.ನಂತರ ಕೂದಲನ್ನು ನೀರಿನಿಂದ ಸ್ವಚ್ಛಗೊಳಿಸಿ.
ಬಿಳಿ ಕೂದಲನ್ನು ಕಪ್ಪಾಗಿಸಲು ಚಹಾ ಎಲೆಗಳ ಬಳಕೆಯು ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಇದರಿಂದ ನಿಮಗೇನಾದರೂ ಸಮಸ್ಯೆ ಕಾಣಿಸಿಕೊಂಡರೆ ತಜ್ಞರನ್ನು ಸಂಪರ್ಕಿಸಿ.ಈ ಮೇಲಿನ ಮಾಹಿತಿಯನ್ನು ಸಾಮಾನ್ಯ ಜ್ಞಾನದ ಆಧಾರದ ಮೇಲೆ ನೀಡಲಾಗಿದೆ. ಇದನ್ನು ಜೀ ಮಿಡಿಯಾ ಅನುಮೋದಿಸುವುದಿಲ್ಲ.