ತೆಂಗಿನೆಣ್ಣೆಗೆ ಈ ಒಂದು ವಸ್ತುವನ್ನು ಸೇರಿಸಿ ಹಚ್ಚಿದರೆ ದೂರವಾಗುವುದು ತ್ವಚೆಯ ನಾಲ್ಕು ಸಮಸ್ಯೆಗಳು
ತೆಂಗಿನೆಣ್ಣೆಯಲ್ಲಿ ಲವಂಗವನ್ನು ಪುಡಿಮಾಡಿ ಅಥವಾ ಲವಂಗದ ಎಣ್ಣೆಯನ್ನು ಮಿಶ್ರಣ ಮಾಡಿ ಅಗತ್ಯಕ್ಕೆ ಅನುಗುಣವಾಗಿ ಚರ್ಮದ ಮೇಲೆ ಬಳಸಿ. ಇದು ಚರ್ಮವನ್ನು ಆರೋಗ್ಯಕರವಾಗಿರಿಸಲು ಮಾತ್ರವಲ್ಲದೆ ಅನೇಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಮೊಡವೆಗಳಿಂದ ತೊಂದರೆಗೊಳಗಾಗಿದ್ದರೆ ಒಮ್ಮೆ ಈ ಮನೆಮದ್ದನ್ನು ಪ್ರಯತ್ನಿಸಿ. ತೆಂಗಿನೆಣ್ಣೆ ಮತ್ತು ಲವಂಗ ಎಣ್ಣೆಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಮತ್ತು ಬೆಳಿಗ್ಗೆ ಮತ್ತು ಸಂಜೆ ಮೊಡವೆಗಳ ಮೇಲೆ ಬಳಸಿ. ಕೆಲವೇ ದಿನಗಳಲ್ಲಿ ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ.
ತೆಂಗಿನೆಣ್ಣೆ ಮತ್ತು ಲವಂಗದ ಎಣ್ಣೆ ಎರಡರಲ್ಲೂ ಅನೇಕ ರೀತಿಯ ಚರ್ಮದ ಸೋಂಕುಗಳು ಮತ್ತು ಅಲರ್ಜಿಗಳನ್ನು ಗುಣಪಡಿಸುವ ಅಂಶಗಳು ಕಂಡು ಬರುತ್ತವೆ. ತೆಂಗಿನೆಣ್ಣೆಯು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಲವಂಗ ಎಣ್ಣೆಯು ಚರ್ಮಕ್ಕೆ ಉರಿಯೂತ ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.
ತೆಂಗಿನಕಾಯಿ ಮತ್ತು ಲವಂಗ ಎಣ್ಣೆಯ ಮಿಶ್ರಣವು ಚರ್ಮದ ಮೇಲಿನ ನಸುಕಂದು ಮಚ್ಚೆಗಳು ಅಥವಾ ಇತರ ಶಾಶ್ವತ ಗುರುತುಗಳನ್ನು ತೆಗೆದುಹಾಕುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ.
ತೆಂಗಿನ ಎಣ್ಣೆಯನ್ನು ಸುಕ್ಕು ಕಡಿಮೆ ಮಾಡುವ ಎಣ್ಣೆ ಎಂದೂ ಕರೆಯುತ್ತಾರೆ. ಲವಂಗ ಮತ್ತು ಕೊಬ್ಬರಿ ಎಣ್ಣೆಯನ್ನು ಬೆರೆಸಿ ಚರ್ಮಕ್ಕೆ ಬಳಸುವುದರಿಂದ ಚರ್ಮವು ಬಿಗಿಯಾಗುತ್ತದೆ. ಸುಕ್ಕಿನ ಸಮಸ್ಯೆಗಳನ್ನು ನಿವಾರಿಸುತ್ತದೆ.