ನಿಮಗಿದು ಗೊತ್ತಾ? ದೇಹದ ಈ ಭಾಗಕ್ಕೆ ತೆಂಗಿನೆಣ್ಣೆ ಹಚ್ಚಿದ್ರೆ ಬಿಳುಪಾಗಿದ್ದ ಕೂದಲು ಕಪ್ಪಾಗುತ್ತೆ! ಅದೂ ಪರ್ಮನೆಂಟ್ ಆಗಿ…
ಬಿಳಿ ಕೂದಲು ವಯಸ್ಸಾದ ಸಂಕೇತ ಎಂದು ಹೇಳಲಾಗುತ್ತದೆ. ಆದರೆ ಈಗಿನ ಕಾಲದಲ್ಲಿ ವಯಸ್ಸಿನ ಲೆಕ್ಕವಿಲ್ಲದೆ, ಕೂದಲು ಬಿಳಿಯಾಗುತ್ತಿವೆ. ಇದಲ್ಲೆ ಕೂದಲಿನ ಅಸಮರ್ಪಕ ಆರೈಕೆ ಅಥವಾ ರಾಸಾಯನಿಕ ಉತ್ಪನ್ನಗಳ ಬಳಕೆಯೂ ಕಾರಣವಾಗಿರಬಹುದು.
ಕೂದಲು ಬಿಳಿಯಾದರೆ ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಅನೇಕ ಉತ್ಪನ್ನಗಳು ದೊರಕುತ್ತವೆ. ಅವುಗಳ ಸಹಾಯದಿಂದ ಬಿಳಿಕೂದಲನ್ನು ಕಪ್ಪಾಗಿಸಬಹುದು. ಆದರೆ ಅವೆಲ್ಲವೂ ಹೆಚ್ಚು ಕಾಲ ಇರುವುದಿಲ್ಲ. ಜೊತೆಗೆ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ.
ಹೀಗಿರುವಾಗ ಬಿಳಿಕೂದಲು ಕಪ್ಪು ಬಣ್ಣಕ್ಕೆ ತಿರುಗಬೇಕೆಂದರೆ, ಕೆಲವು ನೈಸರ್ಗಿಕ ಪರಿಹಾರಗಳನ್ನು ಪ್ರಯತ್ನಿಸುವುದು ಪ್ರಯೋಜನಕಾರಿ. ಅದರಲ್ಲೂ ತೆಂಗಿನ ಎಣ್ಣೆಯಂತಹ ಮನೆಮದ್ದನ್ನು ಈ ವಿಧಾನದಲ್ಲಿ ಬಳಸಿದರೆ ಬಿಳಿ ಕೂದಲಿನ ಬಣ್ಣವನ್ನು ಕಡುಕಪ್ಪು ಬಣ್ಣಕ್ಕೆ ತಿರುಗಿಸಬಹುದು.
ತೆಂಗಿನ ಎಣ್ಣೆಯನ್ನು ಆಯುರ್ವೇದ ತೈಲಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಎಣ್ಣೆಯನ್ನು ಬಳಸುವುದರಿಂದ ಕೂದಲಿಗೆ ಬೇರುಗಳಿಂದ ತುದಿಯವರೆಗೆ ಪ್ರಯೋಜನವಾಗುತ್ತದೆ. ಈ ಎಣ್ಣೆಯಲ್ಲಿ ಉತ್ತಮ ಪ್ರಮಾಣದ ಆ್ಯಂಟಿ ಆಕ್ಸಿಡೆಂಟ್‌ಗಳಿದ್ದು, ಸೂರ್ಯನ ಬೆಳಕಿನ ಹಾನಿಕಾರಕ ಕಿರಣಗಳಿಂದ ಕೂದಲನ್ನು ರಕ್ಷಿಸುತ್ತದೆ ಮತ್ತು ಹಾನಿಕಾರಕ ಸ್ವತಂತ್ರ ರಾಡಿಕಲ್ಗಳನ್ನು ನಿವಾರಿಸುತ್ತದೆ.
ಅಂದಹಾಗೆ ತೆಂಗಿನೆಣ್ಣೆಯನ್ನು ನಿಂಬೆ, ಮೆಹೆಂದಿ ಅಥವಾ ಇತರ ಕೂದಲಿಗೆ ಉಪಕಾರಿ ಎನಿಸುವ ವಸ್ತುಗಳ ಜೊತೆ ಮಿಶ್ರಣ ಮಾಡಿ ಬಳಕೆ ಮಾಡಲು ಹೇಳಲಾಗುತ್ತದೆ. ಆದರೆ ಈ ವಿಧಾನದಲ್ಲಿ ತೆಂಗಿನೆಣ್ಣೆ ಬಳಸಿದರೆ ಕೂದಲು ಕಪ್ಪಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ?
ರಾತ್ರಿ ಮಲಗುವ ಮುನ್ನ ಒಂದು ಚಮಚ ತೆಂಗಿನೆಣ್ಣೆಯನ್ನು ಪಾದಗಳಿಗೆ ಹಚ್ಚಿ ಮಸಾಜ್ ಮಾಡಿ. ಪಾದಕ್ಕೆ ನೀಡುವ ಮಸಾಜ್ ದೇಹದಲ್ಲಿ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ದೇಹದಲ್ಲಿ ರಕ್ತದ ಹರಿವು ಹೆಚ್ಚಾಗುವುದಲ್ಲದೆ, ನೆತ್ತಿಯಲ್ಲಿ ರಕ್ತ ಪರಿಚಲನೆಗೆ ಪ್ರಯೋಜನಕಾರಿ. ಹೀಗಿರುವಾಗ ಕೂದಲಿನ ಆರೈಕೆ ವೃದ್ಧಿಸುತ್ತದೆ.
ನಿಯಮಿತವಾಗಿ ಈ ವಿಧಾನವನ್ನು ಅನುಸರಿಸಿದರೆ ಬಿಳುಪಾದ ಕೂದಲು ಶಾಶ್ವತವಾಗಿ, ನೈಸರ್ಗಿಕ ರೀತಿಯಲ್ಲಿ ಕಪ್ಪಾಗುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.