ಕೊಬ್ಬರಿ ಎಣ್ಣೆಯಲ್ಲಿ ಈ ಎಲೆ ಬೆರೆಸಿಟ್ಟು ಹಚ್ಚಿದ್ರೆ ಕೂದಲು ಬೆಳ್ಳಗಾಗುವುದೇ ಇಲ್ಲ..!
ಅತಿ ಹೆಚ್ಚು ಜನರನ್ನು ಬಾಧಿಸುತ್ತಿರುವ ಸಾಮಾನ್ಯ ಸಮಸ್ಯೆ ಎಂದರೆ ಅಕಾಲಿಕ ಬಿಳಿ ಕೂದಲಿನ ಸಮಸ್ಯೆ.
ಬಿಳಿ ಕೂದಲನ್ನು ನಿವಾರಿಸುವುದಕ್ಕಿಂತ ಕೂದಲಿನ ಆರೈಕೆ ಸರಿಯಾಗಿ ಮಾಡುವ ಮೂಲಕ ಬಿಳಿ ಕೂದಲು ಬರದಂತೆ ತಡೆಯುವುದು ಹೆಚ್ಚು ಪರಿಣಾಮಕಾರಿ.
ನಿಯಮಿತ ಕೂದಲಿನ ಆರೈಕೆಯಿಂದ ಕೂದಲು ಬೆಳ್ಳಗಾಗುವುದನ್ನು ತಡೆಯುವುದಷ್ಟೇ ಅಲ್ಲ, ಕೂದಲು ಉದುರುವಿಕೆ, ಡ್ಯಾಂಡ್ರಫ್ ನಿವಾರಿಸಿ ಬುಡದಿಂದಲೂ ಕೂದಲನ್ನು ಬಲಗೊಳಿಸಬಹುದು.
ಕೂದಲಿನ ಆರೈಕೆಗೆ ಎಲ್ಲಾ ಎಣ್ಣೆಗಳಿಗಿಂತ ಕೊಬ್ಬರಿ ಎಣ್ಣೆ ತುಂಬಾ ಲಾಭದಾಯಕವಾದ ತೈಲ. ಈ ಎಣ್ಣೆಯಲ್ಲಿ ಒಂದು ವಿಶೇಷ ಎಲೆ ಬೆರೆಸಿಟ್ಟು ಹಚ್ಚಿದರೆ ಕೂದಲು ಬೆಳ್ಳಗಾಗುವುದಿಲ್ಲ.
ತಾಜಾ ಕರಿಬೇವಿನ ಎಲೆಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿಟ್ಟು ವಾರದಲ್ಲಿ 2-3 ಬಾರಿ ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ. ಈ ಅಭ್ಯಾಸ ರೂಢಿಸಿಕೊಂಡರೆ ಕೂದಲಿನ ಸರ್ವ ಸಮಸ್ಯೆಯಿಂದಲೂ ಪರಿಹಾರ ಪಡೆಯಬಹುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೇಳಿಕೊಳ್ಳುವುದಿಲ್ಲ.