ಬಿಳಿಕೂದಲನ್ನು ಕಡುಕಪ್ಪಾಗಿಸಲು ಮೊಸರಿಗೆ ಈ ಹಣ್ಣಿನ ರಸ ಬೆರೆಸಿ ಹಚ್ಚಿ.. ವಾರಗಟ್ಟಲೇ ಮತ್ತೆ ಬಿಳಿ ಆಗೋದೇ ಇಲ್ಲ!
ಮೊಸರು ಮತ್ತು ನಿಂಬೆಯನ್ನು ಕೂದಲಿನ ಆರೈಕೆಗಾಗಿ ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಇವುಗಳಲ್ಲಿರುವ ನೈಸರ್ಗಿಕ ಅಂಶಗಳು ಕೂದಲನ್ನು ಆರೋಗ್ಯಕರವಾಗಿ, ಮೃದುವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.
ಮೊಸರು ಒಣ ಕೂದಲನ್ನು ಮೃದು ಮತ್ತು ನಯವಾಗಿ ಮಾಡಬಹುದು. ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ನಿಂಬೆ ರಸದಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ಮೊಸರಿನಲ್ಲಿ ಇರುವ ಪ್ರೋಟೀನ್ ಮತ್ತು ನಿಂಬೆ ರಸದಲ್ಲಿರುವ ವಿಟಮಿನ್ ಸಿ ಕೂದಲನ್ನು ಪುನಃ ಕಪ್ಪಾಗುವಂತೆ ಮಾಡುತ್ತವೆ. ಈ ಮಿಶ್ರಣವು ಬಿಳಿ ಕೂದಲಿಗೆ ಹಚ್ಚಿದರೆ ಅದು ಮತ್ತೆ ಕಪ್ಪಾಗಲು ಆರಂಭಿಸುತ್ತದೆ.
ಚಳಿಗಾಲದಲ್ಲಿ ಕಾಡುವ ತಲೆಹೊಟ್ಟು ಸಮಸ್ಯೆಯಿಂದ ಮುಕ್ತಿ ಪಡೆಯಲು ಶಾಂಪೂ ಜೊತೆಗೆ ಮೊಸರು ಮತ್ತು ನಿಂಬೆಯನ್ನು ಬೆರೆಸಿ ಹಚ್ಚುವುದು ಪ್ರಯೋಜನಕಾರಿ. ಮೊಸರು ಮತ್ತು ನಿಂಬೆ ನೆತ್ತಿಯ ಮೇಲೆ ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮೊಸರು ಕೂದಲಿನ ಬೇರುಗಳನ್ನು ಪೋಷಿಸುತ್ತದೆ. ನಿಂಬೆಯ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ತುರಿಕೆಯನ್ನು ಕಡಿಮೆಮಾಡುತ್ತದೆ. ಇದರಿಂದಾಗಿ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ.
ಬಿಳಿ ಕೂದಲನ್ನು ಮನೆಯಲ್ಲೇ ಮರಳಿ ಕಪ್ಪಾಗಿಸಲು ಬಯಸಿದರೆ, ಅರ್ಧ ಚಮಚ ನಿಂಬೆ ರಸ ಮತ್ತು 1 ಚಮಚ ಮೊಸರು ಬೆರೆಸಿ ಇದಕ್ಕೆ ಸ್ವಲ್ಪ ಕಾಫಿ ಪುಡಿ ಹಾಕಿ ಕೂದಲಿನ ಬೇರುಗಳಿಂದ ತುದಿಯವರೆಗೆ ಹಚ್ಚಿ.
ಈ ಹೇರ್ ಮಾಸ್ಕ್ ಹಾಕಿದ ಬಳಿಕ ಅರ್ಧ ಗಂಟೆ ಬಿಟ್ಟು ತಲೆ ಸ್ನಾನ ಮಾಡಿ. ಇದರಿಂದ ಬಿಳಿ ಕೂದಲು ಕಪ್ಪಾಗುತ್ತದೆ. ಅಲ್ಲದೇ ವಾರಗಟ್ಟಲೇ ಕೂದಲು ಪುನಃ ಬಿಳಿ ಆಗುವುದಿಲ್ಲ.
ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.