ವಾರಕ್ಕೆ ಎರಡು ಬಾರಿ ಈ ನೀರನ್ನು ಕೂದಲಿಗೆ ಹಚ್ಚಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುವುದು!
ಈ ಪರಿಹಾರವೆಂದರೆ ಪೇರಳೆ ಎಲೆಗಳು.ಪೇರಳೆ ಎಲೆಗಳಲ್ಲಿ ಅನೇಕ ಪೋಷಕಾಂಶಗಳಿವೆ. ಇದು ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಅನ್ನು ಹೊಂದಿರುತ್ತದೆ.ಇದು ಕೂದಲು ಮತ್ತು ಚರ್ಮಕ್ಕೆ ಬೆಸ್ಟ್ ಔಷಧಿ.
ಕೂದಲಿಗೆ ಹೇಗೆ ಬಳಸುತ್ತಾರೆ ಮತ್ತು ಅದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳೋಣ.
ಕೆಲವು ಪೇರಳೆ ಎಲೆಗಳನ್ನು ತೊಳೆದು ಬ್ಲೆಂಡರ್‌ನಲ್ಲಿ ಹಾಕಿ ದಪ್ಪ ಪೇಸ್ಟ್ ತಯಾರಿಸಿ. ಅದಕ್ಕೆ ಚಿಕ್ಕ ಈರುಳ್ಳಿ ಹಾಕಿ ಪ್ಯೂರಿ ಮಾಡಿಕೊಂಡು ರಸ ತೆಗೆದುಕೊಳ್ಳಿ. ಈರುಳ್ಳಿ ರಸದಲ್ಲಿ ಪೇರಳೆ ಎಲೆಗಳ ಪೇಸ್ಟ್ ಮತ್ತು ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ, ಕೂದಲಿಗೆ ಹಚ್ಚಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡಿದರೆ ಸಾಕು.
15 ರಿಂದ 20 ಪೇರಳೆ ಎಲೆಗಳನ್ನು ತೊಳೆದು ಒಣಗಿಸಿ. ನಂತರ ಒಣಗಿದ ಎಲೆಗಳನ್ನು ಮಿಕ್ಸಿಯಲ್ಲಿ ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ. ಈ ರೀತಿ ಪೇರಳೆ ಎಳೆಗಳ ಪೇಸ್ಟ್ ಬಳಸುವುದಾದರೆ ಕೂಡಾ ವಾರಕ್ಕೆ ಎರಡು ಸಾರಿ ಮಾಡಿದರೆ ಸಾಕು.
15 ರಿಂದ 20 ನಿಮಿಷಗಳ ಕಾಲ ಕುದಿಸಿದ ನಂತರ, ಅದನ್ನು ತಣ್ಣಗಾಗಿಸಿ. ಹೀಗೆ ತಣ್ಣಗಾದ ನೀರನ್ನು ಫಿಲ್ಟರ್ ಮಾಡಿ ಬಾಟಲಿಯಲ್ಲಿ ಸಂಗ್ರಹಿಸಿ. ಸ್ಪ್ರೇ ಬಾಟಲಿಯ ಸಹಾಯದಿಂದ ಕೂದಲಿನ ಬೇರುಗಳಿಗೆ ಹಚ್ಚಿ ಮಸಾಜ್ ಮಾಡಿ.