ತುಪ್ಪವನ್ನು ದೇಹದ ಈ ಭಾಗಕ್ಕೆ ಹಚ್ಚಿದರೆ ಶಾಶ್ವತವಾಗಿ ನಿವಾರಣೆಯಾಗುವುದು ಬಿಳಿ ಕೂದಲಿನ ಸಮಸ್ಯೆ
ಪ್ರಕೃತಿಚಿಕಿತ್ಸೆಯು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ನಡೆಯುತ್ತಾ ಬಂದಿದೆ. ಕ್ರಮೇಣ ಈ ಚಿಕಿತ್ಸಾ ವಿಧಾನಗಳು ಮನೆಮದ್ದುಗಳ ರೂಪದಲ್ಲಿ ಜನಪ್ರಿಯವಾಗಿದೆ. ಇತ್ತೀಚಿನ ದಿನಗಳಲ್ಲಿ ವೈದ್ಯರು, ಸಂಶೋಧನೆ, ಅಧ್ಯಯನ ಮತ್ತು ಅನುಭವದ ಆಧಾರದ ಮೇಲೆ ಪ್ರಕೃತಿ ಚಿಕಿತ್ಸೆ ಮತ್ತೆ ಜನಸಾಮಾನ್ಯರನ್ನು ತಲುಪುತ್ತಿದೆ.
ಹಸುವಿನ ತುಪ್ಪವನ್ನು ಕಣ್ಣುಗಳಿಗೆ ನೈಸರ್ಗಿಕ ಪರಿಹಾರವಾಗಿ ಬಳಸಲಾಗುತ್ತದೆ. ತುಪ್ಪವು ಕ್ಷಾರೀಯ ಸ್ವಭಾವವನ್ನು ಹೊಂದಿದೆ. ಆದ್ದರಿಂದ ಇದನ್ನು ಯಾವುದೇ ಋತುವಿನಲ್ಲಿ ಬಳಸಬಹುದು.
ಪ್ರತಿದಿನ ರಾತ್ರಿ ಮಲಗುವ ಮುನ್ನ ಹೊಕ್ಕಳಿಗೆ ಎರಡರಿಂದ ಮೂರು ಹನಿ ಹಸುವಿನ ತುಪ್ಪವನ್ನು ಹಚ್ಚುವುದರಿಂದ ಕಣ್ಣುಗಳಿಗೆ ಮಾತ್ರವಲ್ಲದೇ ದೇಹದ ಎಲ್ಲಾ ನರಗಳಿಗೂ ಪೋಷಣೆ ಸಿಗುತ್ತದೆ.
ಹೀಗೆ ಮಾಡುವುದರಿಂದ ದೃಷ್ಟಿ ವೃದ್ಧಿಯಾಗುವುದಲ್ಲದೆ, ಕಣ್ಣಿನ ದೌರ್ಬಲ್ಯವೂ ದೂರವಾಗುತ್ತದೆ. ಕೆಲವೊಮ್ಮೆ ಕಣ್ಣಿನಲ್ಲಿರುವ ಧೂಳು ಕೂಡಾ ನಿವಾರಣೆಯಾಗುತ್ತದೆ.
ಹೊಕ್ಕಳಿಗೆ ತುಪ್ಪವನ್ನು ಹಚ್ಚುವುದರಿಂದ ಕಣ್ಣುಗಳು ಉತ್ತಮಗೊಳ್ಳುತ್ತವೆ. ಕಿರಿ ವಯಸ್ಸಿನಲ್ಲಿಯೇ ಬೆಳೆಯುವ ಬಿಳಿ ಕೂದಲು ಕಪ್ಪಾಗಲು ಪ್ರಾರಂಭಿಸುತ್ತದೆ. ಹೊಕ್ಕಳಿಗೆ ತುಪ್ಪವನ್ನು ಹಚ್ಚುವುದರಿಂದ ಕಣ್ಣು ಮತ್ತು ಕೂದಲಿನ ಪ್ರಯೋಜನಗಳನ್ನು ಪಡೆದ ಅನೇಕ ರೋಗಿಗಳಿದ್ದಾರೆ.
ತುಪ್ಪವನ್ನು 6 ತಿಂಗಳ ಕಾಲ ನಿರಂತರವಾಗಿ ಬಳಸಬೇಕು. ಆರು ತಿಂಗಳು ನಿರಂತರ ಬಳಸಿದ ನಂತರ ಎರಡು ದಿನ ಈ ಪ್ರಕ್ರಿಯೆ ನಿಲ್ಲಿಸಬೇಕು. ನಂತರ ಮತ್ತೆ ತುಪ್ಪದ ಬಳಕೆಯನ್ನು ಮುಂದುವರೆಸಬೇಕು. 3 ತಿಂಗಳ ನಂತರ ಫಲಿತಾಂಶ ಕಾಣಿಸುತ್ತದೆ.
( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)