ರಾತ್ರಿ ವೇಳೆ ದೇಹದ ಈ ಭಾಗಕ್ಕೆ ತುಪ್ಪ ಹಚ್ಚಿ ಮಲಗಿ… ಬೆಳಗಾಗುವಷ್ಟರಲ್ಲಿ ಪವಾಡದಂತೆ ಬೆಳ್ಳಗಾದ ಕೂದಲು ಮರಳಿ ಕಪ್ಪಾಗುತ್ತೆ!
ಹೆಚ್ಚುತ್ತಿರುವ ಮಾಲಿನ್ಯ ಮತ್ತು ತಪ್ಪು ಆಹಾರ ಪದ್ಧತಿಗಳಿಂದ ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಸರಿಯಾದ ಕಾಳಜಿ ವಹಿಸಿದರೆ ಮನೆಯಲ್ಲಿಯೇ ಯಾವುದೇ ಡೈ, ಕಲರಿಂಗ್ ಬಳಸದೆ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
ದೇಸಿ ತುಪ್ಪದಿಂದ ಮಸಾಜ್ ಮಾಡಲು ಪ್ರಾರಂಭಿಸಿದರೆ ಬಿಳಿಕೂದಲನ್ನು ಸುಲಭವಾಗಿ ಕಪ್ಪಾಗಿಸಬಹುದು. ಆದರೆ ಅದರ ಬಳಕೆ ಹೇಗೆ ಎಂಬುದನ್ನು ಗಮನವಿಟ್ಟು ತಿಳಿದುಕೊಳ್ಳಿ
ತುಪ್ಪವನ್ನು ಬೆಚ್ಚಗಾಗಿಸಿ, 20 ನಿಮಿಷಗಳ ಕಾಲ ನೆತ್ತಿಗೆ ಮಸಾಜ್ ಮಾಡಿ. ತುಪ್ಪಕ್ಕೆ ನಿಂಬೆ ರಸವನ್ನೂ ಸಹ ಬೆರೆಸಬಹುದು. ಇದಾದ ಬಳಿಕ ಶುದ್ಧ ನೀರಿನಿಂದ ಕೂದಲನ್ನು ತೊಳೆಯಿರಿ. ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ನಿಮ್ಮ ಕೂದಲು ಕಪ್ಪಾಗಲು ಪ್ರಾರಂಭಿಸುತ್ತದೆ.
ಇನ್ನೊಂದು ವಿಧಾನದ ಪ್ರಕಾರ, ರಾತ್ರಿ ವೇಳೆ ಒಂದೆರಡು ಹನಿ ತುಪ್ಪವನ್ನು ತೆಗೆದುಕೊಂಡು ನೆತ್ತಿಗೆ ಚೆನ್ನಾಗಿ ಮಸಾಜ್ ಮಾಡಬೇಕು. ಮುಂಜಾನೆ ಎದ್ದಂತೆ ಕೂದಲನ್ನು ತೊಳೆಯಿರಿ. ಹೀಗೆ ಮಾಡಿದರೆ ರಕ್ತಸಂಚಾರ ಸರಿಯಾಗಿ ನಡೆದು, ಹೊಸ ಮತ್ತು ಕಪ್ಪು ಕೂದಲು ಬೆಳೆಯಲು ಸಹಾಯ ಮಾಡುತ್ತದೆ.
ಶುಷ್ಕತೆಯಿಂದ ತಲೆಹೊಟ್ಟು ಉಂಟಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತುಪ್ಪದ ಬಳಕೆ ಪ್ರಯೋಜನಕಾರಿಯಾಗಿದೆ. ತುಪ್ಪ ಮತ್ತು ಬಾದಾಮಿ ಎಣ್ಣೆಯನ್ನು ಬೆರೆಸಿ 15 ನಿಮಿಷಗಳ ಮಸಾಜ್ ಮಾಡಿ. ಇದಕ್ಕೆ ರೋಸ್ ವಾಟರ್ ಕೂಡ ಬೆರೆಸಬಹುದು. ನಿಯಮಿತವಾಗಿ ಹೀಗೆ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.
ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಇಂದಿನಿಂದಲೇ ಶುದ್ಧ ದೇಸಿ ತುಪ್ಪವನ್ನು ಬಳಸಲು ಪ್ರಾರಂಭಿಸಿ. ತುಪ್ಪವನ್ನು ಬಳಸುವುದರಿಂದ ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ. ಅಷ್ಟೇ ಅಲ್ಲದೆ, ಕೂದಲು ದಟ್ಟವಾಗಿ ಹೊಳೆಯುತ್ತದೆ.
ಕೂದಲಿನ ತುದಿ ಸೀಳುವ ಸಮಸ್ಯೆ ಇದ್ದರೆ ಖಂಡಿತಾ ಒಮ್ಮೆ ತುಪ್ಪವನ್ನು ಟ್ರೈ ಮಾಡಿ. ತುಪ್ಪವನ್ನು ಒಡೆದ ತುದಿಗೆ 15 ದಿನಗಳವರೆಗೆ ಮಸಾಜ್ ಮಾಡಿ. ನಿಮ್ಮ ಸಮಸ್ಯೆ ಕ್ರಮೇಣ ಕಣ್ಮರೆಯಾಗುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)