ಸಾಸಿವೆ ಎಣ್ಣೆಗೆ ಈ ಹಣ್ಣಿನ ರಸ ಮತ್ತು ಈ ಪುಡಿ ಬೆರೆಸಿ ಹಚ್ಚಿದರೆ ಕಡು ಕಪ್ಪಾಗುವುದು ಬಿಳಿ ಕೂದಲು ! ಬಳಸುವ ವಿಧಾನ ಹೀಗೆಯೇ ಇರಲಿ !

Wed, 20 Mar 2024-9:52 am,

ನಿಯಮಿತವಾಗಿ ಸಾಸಿವೆ ಎಣ್ಣೆಯನ್ನು ಕೂದಲಿಗೆ ಹಚ್ಚುವವರ ಕೂದಲು ಬೇಗನೆ ಬಿಳಿಯಾಗುವುದಿಲ್ಲ. ಈ ಎಣ್ಣೆ ಕೂದಲು ಉದುರುವಿಕೆಯನ್ನು ಕೂಡಾ ತಡೆಯುತ್ತದೆ.   ಸಾಸಿವೆ ಎಣ್ಣೆಯಲ್ಲಿ ಕೆಲವು ವಸ್ತುಗಳನ್ನು ಬೆರೆಸಿ ಕೂದಲಿಗೆ ಹಚ್ಚಿದರೆ ಬಿಳಿ ಕೂದಲು ಕಪ್ಪಾಗುವುದು. 

ಸಾಸಿವೆ ಎಣ್ಣೆಯು ಮೆಗ್ನೀಸಿಯಮ್, ವಿಟಮಿನ್ ಎ, ಡಿ, ಇ ಮತ್ತು ಕೆ, ಕಬ್ಬಿಣ, ಕ್ಯಾಲ್ಸಿಯಂ ಸೇರಿದಂತೆ ಅನೇಕ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದರಲ್ಲಿರುವ ಎರುಸಿಕ್ ಆಮ್ಲವು ಕೂದಲನ್ನು ಬಲಪಡಿಸುತ್ತದೆ. ಹೀಗಾಗಿ ಕೂದಲು ಉದುರುವುದು ಕಡಿಮೆಯಾಗುತ್ತದೆ. ಸಾಸಿವೆ ಎಣ್ಣೆಯು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.ಇದು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ.ಇದು ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ತಲೆಹೊಟ್ಟು ಮತ್ತು ಇತರ ನೆತ್ತಿಯ ಸಮಸ್ಯೆಗಳನ್ನು ನಿವಾರಿಸುತ್ತದೆ.

ಈ 3 ವಸ್ತುಗಳನ್ನು ಸಾಸಿವೆ ಎಣ್ಣೆಯ ಜೊತೆ ಮಿಶ್ರಣ ಮಾಡುವ ಮೂಲಕ ಅದರ ಪೌಷ್ಟಿಕಾಂಶವನ್ನು ಇನ್ನಷ್ಟು ಹೆಚ್ಚಿಸಬಹುದು. ವಾಸ್ತವವಾಗಿ, ಸಾಸಿವೆ ಎಣ್ಣೆಯು ಕೂದಲಿಗೆ ತುಂಬಾ ಪೌಷ್ಟಿಕವಾಗಿದೆ.ಆದರೆ ಇದಕ್ಕೆ ಕೆಲವು ವಿಷಯಗಳನ್ನು ಸೇರಿಸುವ ಮೂಲಕ, ನೀವು ಈ ಎಣ್ಣೆಯ ಗುಣಗಳನ್ನು ಇನ್ನಷ್ಟು ಹೆಚ್ಚಿಸಬಹುದು.

ನಿಮ್ಮ ಕೂದಲನ್ನು ಯಾವಾಗಲೂ ಕಪ್ಪಾಗಿಯೇ ಕಾಣಬೇಕಾದರೆ ಸಾಸಿವೆ ಎಣ್ಣೆಯನ್ನು ಬೆಳ್ಳುಳ್ಳಿ ಮತ್ತು ಮೆಂತ್ಯೆಯೊಂದಿಗೆ ಬೆರೆಸಿ ಹಚ್ಚಬೇಕು. ಪಾತ್ರೆಯಲ್ಲಿ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಒಂದು ಚಮಚ ಮೆಂತ್ಯೆ ಕಾಳು ಮತ್ತು 4 ರಿಂದ 5 ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಬೇಕು. ಈಗ ಈ ಎಣ್ಣೆಯನ್ನು ಚೆನ್ನಾಗಿ ಬಿಸಿ ಮಾಡಬೇಕು. ಈ    ತಣ್ಣಗಾದ ಮೇಲೆ ಕೂದಲಿಗೆ ಬಳಸಬೇಕು. ಈ ಎಣ್ಣೆಯನ್ನು ವಾರಕ್ಕೆ 2 ಬಾರಿ ಹಚ್ಚುತ್ತಾ ಬಂದರೆ ತಲೆಯಲ್ಲಿ ಬಿಳಿ ಕೂದಲು ಕಾಣುವುದೇ ಇಲ್ಲ.   

ವಿಟಮಿನ್ ಸಿ ನಮ್ಮ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ನೆಲ್ಲಿಕಾಯಿ ಮತ್ತು ನಿಂಬೆ ಎರಡೂ ಇದರ ಉತ್ತಮ ಮೂಲಗಳಾಗಿವೆ. ಸಾಸಿವೆ ಎಣ್ಣೆ, ನೆಲ್ಲಿಕಾಯಿ ಮತ್ತು ನಿಂಬೆರಸದ ಮಿಶ್ರಣವು ಕೂದಲಿಗೆ ಗಾಢ ಕಪ್ಪು ಬಣ್ಣ ನೀಡುತ್ತದೆ. ಇದಲ್ಲದೇ ತಲೆಹೊಟ್ಟು ಸಮಸ್ಯೆಯೂ ದೂರವಾಗುತ್ತದೆ.ಇದಕ್ಕಾಗಿ, ಅರ್ಧ ಬೌಲ್ ಸಾಸಿವೆ ಎಣ್ಣೆಯಲ್ಲಿ ಒಂದು ಚಮಚ ನೆಲ್ಲಿಕಾಯಿ ರಸ ಮತ್ತು ಒಂದು ಚಮಚ ತಾಜಾ ನಿಂಬೆ ರಸವನ್ನು ಮಿಶ್ರಣ ಮಾಡಿ. ಕೂದಲಿಗೆ ಹಚ್ಚಿ ಮಸಾಜ್ ಮಾಡಬೇಕು. ಇದನ್ನೂ ಕೂಡಾ ವಾರಕ್ಕೆ ಕನಿಷ್ಠ ಎರಡು ಬಾರಿ ಬಳಸಬೇಕು.(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link