White Hair Remedy : ಈ ಕಾಳನ್ನು ಅರೆದು ಕೂದಲಿಗೆ ಹಚ್ಚಿ ಹತ್ತೇ ನಿಮಿಷ ಬಿಟ್ಟರೆ ಸಾಕು ಬಿಳಿ ಕೂದಲು ನೈಸರ್ಗಿಕವಾಗಿ, ಶಾಶ್ವತವಾಗಿ ಕಪ್ಪಾಗುವುದು !
ಕೂದಲಿಗೆ ಸಾಸಿವೆ ಕಾಳುಗಳನ್ನು ಬಳಸುವ ಮೂಲಕ ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಬಹುದು.ಸಾಸಿವೆ ಕಾಳು ಕೂದಲನ್ನು ಬೇರುಗಳಿಂದ ಬಲಪಡಿಸುತ್ತದೆ. ಇದರಿಂದ ಕೂದಲು ಉದುರುವ ಮತ್ತು ತಲೆ ಹೊಟ್ಟಿನ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.
ಸಾಸಿವೆಯಲ್ಲಿ ವಿಟಮಿನ್ ಎ ಹೇರಳ ಪ್ರಮಾಣದಲ್ಲಿದ್ದು, ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಲ್ಲದೆ ಬುಡದಿಂದಲೇ ಕೂದಲನ್ನು ಬಲಪಡಿಸುತ್ತದೆ.
ಸಾಸಿವೆ ಕಾಳುಗಳಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಒಮೆಗಾ -3 ಮತ್ತು ವಿಟಮಿನ್ ಇ ನಂತಹ ಪ್ರಮುಖ ಪೋಷಕಾಂಶಗಳು ಕೂಡಾ ಕಂಡುಬರುತ್ತವೆ. ಇದು ಕೂದಲನ್ನು ಬಲಪಡಿಸುವುದಲ್ಲದೆ, ಕೂದಲಿನ ಕಪ್ಪು ಬಣ್ಣವನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ.
ಸಾಸಿವೆ ಕಾಳುಗಳಿಂದ ಮಾಡಿದ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಕೂದಲು ಮತ್ತು ನೆತ್ತಿಯ ಮೇಲೆ ಮಸಾಜ್ ಮಾಡಬೇಕು. ಇದರಿಂದ ಕೂದಲಿನ ಬೇರುಗಳಲ್ಲಿ ರಕ್ತ ಪರಿಚಲನೆಗೆ ಸಹಾಯವಾಗುತ್ತದೆ. ಇದು ಕೂದಲು ಕ್ರಮೇಣ ಕಪ್ಪು ಬಣ್ಣಕ್ಕೆ ತಿರುಗಲು ಸಹಾಯ ಮಾಡುತ್ತದೆ.
ಸಾಸಿವೆ ಕಾಳುಗಳನ್ನು ಒಣಗಿಸಿ ಪುಡಿ ಮಾಡಿಕೊಳ್ಳಬೇಕು. ನಂತರ ಈ ಪುಡಿಯನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಒಂದು ಮೊಟ್ಟೆಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ಈಗ ಈ ಮಿಶ್ರಣಕ್ಕೆ ಕ್ಯಾಸ್ಟರ್ ಆಯಿಲ್ ಅಥವಾ ತೆಂಗಿನೆಣ್ಣೆಯನ್ನು ಬೆರೆಸಿ ಹೇರ್ ಮಾಸ್ಕ್ ಅನ್ನು ತಯಾರಿಸಿಕೊಳ್ಳಿ. ಹೀಗೆ ತಯಾರಿಸಿದ ಹೇರ್ ಮಾಸ್ಕ್ ಅನ್ನು ಕೂದಲಿನ ಬೇರುಗಳಿಗೆ ಹಚ್ಚಿ. ಸ್ವಲ್ಪ ಸಮಯದ ನಂತರ ಕೂದಲನ್ನು ಶಾಂಪೂ ಹಾಕಿ ತೊಳೆಯಿರಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.