ಈ ಒಂದು ಎಣ್ಣೆ ತಲೆಗೆ ಹಚ್ಚಿ ಸಾಕು... ಬಿಳಿಕೂದಲು ಕಪ್ಪಾಗಿಸುವುದರ ಜೊತೆ ತಲೆಹೊಟ್ಟು ಸಹ ತೊಲಗಿ ಕಪ್ಪು ದಪ್ಪ ಹೊಳೆಯುವ ಕೇಶರಾಶಿ ನಿಮ್ಮದಾಗುತ್ತೆ!
ದಪ್ಪ ಮತ್ತು ಉದ್ದನೆಯ ಕೂದಲನ್ನು ಹೊಂದುವುದು ಅನೇಕರ ಕನಸು. ಕೂದಲಿಗೆ ಸರಿಯಾದ ಆರೈಕೆ ಮತ್ತು ಪೋಷಣೆಯನ್ನು ನೀಡದಿದ್ದರೆ ಕೂದಲು ಬೆಳೆಯುವುದಿಲ್ಲ.
ನೈಸರ್ಗಿಕ ಉತ್ಪನ್ನಗಳನ್ನು ಬಳಸುವುದು ಕೂದಲಿನ ಆರೈಕೆಗೆ ಉತ್ತಮ. ಈ ಎಣ್ಣೆಯನ್ನು ಹಚ್ಚುವುದರಿಂದ ಕೂದಲಿಗೆ ಒಂದಲ್ಲ ಅನೇಕ ರೀತಿಯ ಪ್ರಯೋಜನಗಳು ದೊರೆಯುತ್ತವೆ.
ಈರುಳ್ಳಿ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಕೂದಲಿಗೆ ಬೇರಿನಿಂದ ತುದಿಯವರೆಗೆ ಪೋಷಣೆ ಸಿಗುತ್ತದೆ. ಅಲ್ಲದೇ ಉದ್ದ ದಪ್ಪ ಕಪ್ಪು ಕೂದಲು ಬೆಳೆಯಲು ಸಹಕಾರಿಯಾಗುತ್ತದೆ.
ಈರುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇರಿಸಿ. ಈಗ ಬಾಣಲೆಗೆ ತೆಂಗಿನ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
ಬಿಸಿಯಾದ ತೆಂಗಿನೆಣ್ಣೆಗೆ ಕತ್ತರಿಸಿದ ಈರುಳ್ಳಿ ತುಂಡುಗಳನ್ನು ಸೇರಿಸಿ. ಈರುಳ್ಳಿ ಚೆನ್ನಾಗಿ ಬೇಯುವವರೆಗೆ ಕುದಿಸಿ. ಈ ಎಣ್ಣೆ ತಣ್ಣಗಾದ ನಂತರ ಬಾಟಲಿಯಲ್ಲಿ ತುಂಬಿ ಇಟ್ಟುಕೊಳ್ಳಿ.
ಈರುಳ್ಳಿ ಎಣ್ಣೆಯನ್ನು ಕೂದಲಿಗೆ ವಾರಕ್ಕೆ 2 ರಿಂದ 3 ಬಾರಿ ಹಚ್ಚಬೇಕು. ಈ ಎಣ್ಣೆಯನ್ನು ನಿಮ್ಮ ಅಂಗೈಯಲ್ಲಿ ತೆಗೆದುಕೊಂಡು ಅದನ್ನು ಮೊದಲು ನಿಮ್ಮ ನೆತ್ತಿಗೆ ಉಜ್ಜಿಕೊಳ್ಳಿ.
ಬಳಿಕ ಕೂದಲಿನ ಬೇರಿನಿಂದ ತುದಿಯವರೆಗೆ ಹಚ್ಚಿ, ಒಂದೂವರೆ ಗಂಟೆಗಳ ಕಾಲ ಬಿಟ್ಟು ತಲೆಸ್ನಾನ ಮಾಡಿ. (ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.)