ಮಲಗುವ ಮುನ್ನ ಈ ಫೇಸ್ ಪ್ಯಾಕ್ ಗಳನ್ನು ಹಚ್ಚಿದರೆ ಮಿರ ಮಿರನೆ ಮಿಂಚುವುದು ತ್ವಚೆ
ರಾತ್ರಿ ವೇಳೆ ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಚರ್ಮವು ಹೊಳೆಯಳು ಆರಂಭಿಸುತ್ತದೆ. ಮುಖದ ಕಲೆಗಳನ್ನು ತೆಗೆದು ಹಾಕಲು ಇದು ಸಹಾಯ ಮಾಡುತ್ತದೆ.
ಅಲೋವೆರಾ ಜೆಲ್ ಜೊತೆಗೆ ನಿಂಬೆ ರಸವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಅದನ್ನು ಮುಖಕ್ಕೆ ಹಚ್ಚಿ. ಹೀಗೆ ಮಾಡುತ್ತಾ ಬಂದರೆ ತ್ವಚೆಯು ಹೊಳೆಯುತ್ತದೆ.
ಮುಖಕ್ಕೆ ಅರಿಶಿನ ಮತ್ತು ಹಾಲಿನ ಫೇಸ್ ಪ್ಯಾಕ್ ಅನ್ನು ಹಚ್ಚಿದರೆ ಚರ್ಮದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತದೆ. ಅರಿಶಿನ ಮತ್ತು ಹಾಲನ್ನು ಮಿಶ್ರಣ ಮಾಡಿ, ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆ ಭಾಗಕ್ಕೆ ಹಚ್ಚಬೇಕು. ಹೀಗೆ ಮಾಡುವುದರಿಂದ ಮುಖವು ಹೊಳೆಯುತ್ತದೆ.
ನಿಂಬೆ ಮತ್ತು ಜೇನು ತುಪ್ಪ ಬೆರೆಸಿ ತಯಾರಿಸುವ ಫೇಸ್ ಪ್ಯಾಕ್ ತ್ವಚೆಗೆ ಹೊಸ ಹೊಳಪು ನೀಡುತ್ತದೆ. ಇದಕ್ಕಾಗಿ ನಿಂಬೆ ರಸ ಮತ್ತು ಜೇನುತುಪ್ಪವನ್ನು ಬೆರೆಸಿ ಮಿಶ್ರಣವನ್ನು ತಯಾರಿಸಿ. ಈಗ ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಬೇಕು.
ಈ ಫೇಸ್ ಪ್ಯಾಕ್ ಮಾಡಲು, ಒಂದು ಬಟ್ಟಲಿನಲ್ಲಿ ಹಾಲಿನ ಕೆನೆ ಮತ್ತು ರೋಸ್ ವಾಟರ್ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣದಿಂದ ಮುಖ ಮತ್ತು ಕುತ್ತಿಗೆ ಭಾಗಕ್ಕೆ ಲಘುವಾಗಿ ಮಸಾಜ್ ಮಾಡಿ. ಹೀಗೆ ಮಾಡುತ್ತಾ ಬಂದರೆ ಮುಖದ ಕಾಂತಿ ದಿನೇ ದಿನೇ ಹೆಚ್ಚುತ್ತಾ ಹೋಗುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)