2 ಚಮಚ ಮೊಸರಿಗೆ ಈ ಹಣ್ಣಿನ ರಸ ಬೆರೆಸಿ ಬಿಳಿಕೂದಲಿಗೆ ಹಚ್ಚಿ: ತಕ್ಷಣವೇ ಗಾಢ ಕಪ್ಪಾಗುವುದಲ್ಲದೆ ರೇಷ್ಮೆಯಂತೆ ಶೈನ್ ಆಗುತ್ತೆ!
ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ವೈದ್ಯಕೀಯ ಭಾಷೆಯಲ್ಲಿ ಕಯಾನೈಟಿಸ್ ಎಂದು ಕರೆಯಲಾಗುವ ರೋಗ. ಇದಲ್ಲದೆ, ಕೂದಲು ಬಿಳಿಯಾಗಲು ಹಲವು ಕಾರಣಗಳಿರಬಹುದು. ಮುಖ್ಯವಾದವು ಕಡಿಮೆ ಹಿಮೋಗ್ಲೋಬಿನ್, ರಕ್ತಹೀನತೆ, ಥೈರಾಯ್ಡ್ ಸಮಸ್ಯೆ, ಪ್ರೋಟೀನ್ ಕೊರತೆ, ಆನುವಂಶಿಕ ಅಸ್ವಸ್ಥತೆ.
ಆದರೆ ಕೂದಲನ್ನು ಯೌವನವಾಗಿಡಲು ಹಲವು ಮನೆಮದ್ದುಗಳಿವೆ. ಅದರಲ್ಲಿ ಮೊಸರಿನ ಬಳಕೆ ಕೂಡ ಒಂದು. ಮೊಸರು ಕೂದಲಿಗೆ ಹೇಗೆ ಪ್ರಯೋಜನಕಾರಿ ಎಂಬುದನ್ನು ಮುಂದೆ ತಿಳಿಯೋಣ.
ಮೊಸರು ಪ್ರತಿಯೊಂದು ಮನೆಯಲ್ಲೂ ಬಳಕೆ ಮಾಡುವ ಸಾಮಾನ್ಯ ಆಹಾರ ವಸ್ತು. ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ವಿಟಮಿನ್ ಮತ್ತು ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಮೊಸರು ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಇದಲ್ಲದೆ, ಮೊಸರು ಕ್ಯಾಲ್ಸಿಯಂ ಮತ್ತು ಪ್ರೋಟೀನ್’ನ ಉತ್ತಮ ಮೂಲವಾಗಿದೆ. ಇದು ಆರೋಗ್ಯ ಪ್ರಯೋಜನಗಳನ್ನು ಮಾತ್ರವಲ್ಲದೆ ಚರ್ಮ ಮತ್ತು ಕೂದಲಿಗೆ ಆರೋಗ್ಯವನ್ನು ನೀಡುತ್ತದೆ.
ಕರಿಮೆಣಸಿನ ಪುಡಿಯನ್ನು ಮೊಸರಿನೊಂದಿಗೆ ಬೆರೆಸಿ ಹಚ್ಚುವುದರಿಂದ ತಲೆಹೊಟ್ಟು ಸಮಸ್ಯೆಯೂ ದೂರವಾಗುತ್ತದೆ ಮತ್ತು ಕೂದಲು ಸ್ವಚ್ಛ, ಮೃದು, ಕಪ್ಪು ಮತ್ತು ದಪ್ಪವಾಗುತ್ತದೆ. ವಾರದಲ್ಲಿ ಮೂರ್ನಾಲ್ಕು ಬಾರಿ, ಅರ್ಧ ಕಪ್ ಮೊಸರಿಗೆ ಒಂದು ಚಿಟಿಕೆ ಕರಿಮೆಣಸು ಮತ್ತು ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಕೂದಲಿಗೆ ಹಚ್ಚಿ. 15 ನಿಮಿಷಗಳ ನಂತರ ಕೂದಲು ತೊಳೆಯಿರಿ. ಕೂದಲು ಬಿಳಿ ಬಣ್ಣದಿಂದ ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ.
ಈರುಳ್ಳಿ ರಸದಲ್ಲಿ ನಿಂಬೆ ಬೆರೆಸಿ ಕೂದಲಿನ ಬುಡಕ್ಕೆ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ. ಇದಲ್ಲದಿದ್ದರೆ, ಕೂದಲನ್ನು ಕಪ್ಪಾಗಿಡಲು, ನೀವು ವಾರಕ್ಕೆ ಎರಡು ಬಾರಿ ಚಹಾ ನೀರಿನಿಂದ ಕೂದಲನ್ನು ತೊಳೆಯಬಹುದು. ಆಲೂಗಡ್ಡೆ ಸಿಪ್ಪೆಯೂ ಸಹ ಬಿಳಿ ಕೂದಲಿಗೆ ಉಪಶಮನ ನೀಡುವಲ್ಲಿ ಸಹಕಾರಿ. ಕೆಲವು ಆಲೂಗಡ್ಡೆ ಸಿಪ್ಪೆಗಳನ್ನು ನೀರಿನಲ್ಲಿ 10 ನಿಮಿಷಗಳ ಕಾಲ ಕುದಿಸಿ. ತಣ್ಣಗಾಗಿಸಿ ನಂತರ ಕೂದಲಿಗೆ ಹಚ್ಚಿ.
ಬಿಳಿ ಕೂದಲು ಕಡಿಮೆ ಮಾಡಲು ನೆಲ್ಲಿಕಾಯಿ, ದಾಸವಾಳ ಮತ್ತು ಎಳ್ಳನ್ನು ಪೇಸ್ಟ್ ಮಾಡಿ. ಅದರಲ್ಲಿ ಕೆಲವು ಹನಿ ಕೊಬ್ಬರಿ ಎಣ್ಣೆಯನ್ನು ಬೆರೆಸಿ ತಲೆಗೆ ಮಸಾಜ್ ಮಾಡುವುದರಿಂದ ಕೂಡ ಪ್ರಯೋಜನಕಾರಿಯಾಗಿದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)