ಸಾಸಿವೆ ಎಣ್ಣೆಯಲ್ಲಿ ʼಈʼ ಪುಡಿ ಬೆರೆಸಿ ಹಚ್ಚಿದ್ರೆ ಹತ್ತೇ ನಿಮಿಷದಲ್ಲಿ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತೆ! ತಲೆಹೊಟ್ಟಿನ ಸಮಸ್ಯೆ ಕೂಡ ಇರಲ್ಲ!!
ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಬಣ್ಣಗಳನ್ನು ಹಚ್ಚುವುದನ್ನು ತಪ್ಪಿಸಲು ನೀವು ಬಯಸಿದರೆ, ನಿಮ್ಮ ಕೂದಲು ಮನೆಯಲ್ಲಿಯೇ ಕಪ್ಪು ಬಣ್ಣಕ್ಕೆ ತಿರುಗುವಂತೆ ಮಾಡಬಹುದು... ಹೌದು ಅದಕ್ಕಾಗಿಯೇ ಅರಿಶಿನ ಮತ್ತು ಸಾಸಿವೆ ಎಣ್ಣೆಯಿಂದ ಕೂದಲಿಗೆ ನೈಸರ್ಗಿಕ ಹೇರ್ ಡೈ ಮಾಡುವುದು ಹೇಗೆ ಎಂದು ಇಂದು ನಾವು ನಿಮಗೆ ಹೇಳುತ್ತಿದ್ದೇವೆ.
ಈ ವಿಧಾನದಿಂದ ಕೆಲವೇ ದಿನಗಳಲ್ಲಿ ನಿಮ್ಮ ಕೂದಲು ಸಂಪೂರ್ಣವಾಗಿ ಕಪ್ಪಾಗುತ್ತದೆ. ಜೊತೆಗೆ ಸಾಸಿವೆ ಎಣ್ಣೆ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ, ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.
ಹೇರ್ ಡೈ ಮಾಡುವ ವಿಧಾನ: ಹೇರ್ ಡೈ ಮಾಡಲು ನಿಮಗೆ 3-4 ಟೇಬಲ್ಸ್ಪೂನ್ ಸಾಸಿವೆ ಎಣ್ಣೆ ತೆಗೆದುಕೊಂಡು ಅದನ್ನು ಕಬ್ಬಿಣದ ಪ್ಯಾನ್ ಅಥವಾ ಬಾಣಲೆಯಲ್ಲಿ ಹಾಕಿ, ಗ್ಯಾಸ್ ಮೇಲೆ ಬಿಸಿ ಮಾಡಿ. ಎಣ್ಣೆಯಲ್ಲಿ 2 ಚಮಚ ಅರಿಶಿನ ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಕುದಿಸಿ.. ಅರಿಶಿನವನ್ನು ಕಡಿಮೆ ಉರಿಯಲ್ಲಿಯೇ ಬೇಯಿಸಬೇಕು, ಇಲ್ಲದಿದ್ದರೆ ಅದು ಸುಟ್ಟು ಕಪ್ಪು ಕಪ್ಪಾಗುತ್ತದೆ.
ಅರಿಶಿನ ಮತ್ತು ಎಣ್ಣೆಯ ಬಣ್ಣವು ಕಪ್ಪು ಬಣ್ಣಕ್ಕೆ ತಿರುಗಿದಾಗ ಗ್ಯಾಸ್ ಆಫ್ ಮಾಡಿ.. ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಸಿದು ಸ್ವಲ್ಪ ತಣ್ಣಗಾಗಲು ಇಡಿ. ಬಳಿಕ ಅದಕ್ಕೆ ವಿಟಮಿನ್ ಇ 1 ಕ್ಯಾಪ್ಸುಲ್ ಸೇರಿಸಿ. ಇದು ಬಿಳಿ ಕೂದಲಿನ್ನು ಶಾಶ್ವತವಾಗಿ ಕಪ್ಪಾಗಿಡಲು ಸಹಕರಿಸುತ್ತದೆ..
ಇದನ್ನು 2 ಗಂಟೆಗಳ ಕಾಲ ಹಚ್ಚಿ.. ನಂತರ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ವಾರಕ್ಕೆ ಎರಡು ಬಾರಿಯಾದರೂ ಇದನ್ನು ಕೂದಲಿಗೆ ಹಚ್ಚಿದರೇ... ಕೆಲವೇ ದಿನಗಳಲ್ಲಿ ನಿಮ್ಮ ಕೂದಲು ಸಂಪೂರ್ಣವಾಗಿ ಕಪ್ಪಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.