ಡಿವೋರ್ಸ್ ಬಳಿಕ ಎಆರ್ ರೆಹಮಾನ್ ಪತ್ನಿಗೆ ಕೊಡ್ತಿರುವ ಜೀವನಾಂಶ ಎಷ್ಟು ಗೊತ್ತಾ!?
29 ವರ್ಷಗಳ ದಾಂಪತ್ಯಕ್ಕೆ ಎಆರ್ ರೆಹಮಾನ್ ಮತ್ತು ಪತ್ನಿ ಸೈರಾ ಬಾನು ಅಂತ್ಯ ಹಾಡಿದ್ದಾರೆ. ಸೈರಾ ಬಾನು ಜೊತೆ ರೆಹಮಾನ್ ವಿಚ್ಛೇದನ ಸುದ್ದಿ ಸಾಕಷ್ಟು ಚರ್ಚೆ ಆಗುತ್ತಿದೆ.
ರೆಹಮಾನ್ ಹಾಗೂ ಸೈರಾ 1995 ರಲ್ಲಿ ಮದುವೆ ಆದರು. 29 ವರ್ಷಗಳ ಬಳಿಕ ಈಗ ಡಿವೋರ್ಸ್ ಪಡೆದಿದ್ದಾರೆ.
ಈ ದಂಪತಿಗೆ ಮೂವರು ಮಕ್ಕಳು ಅದರಲ್ಲಿ ಇಬ್ಬರು ಹೆಣ್ಣು ಮಕ್ಕಳ ಹೆಸರು ಖತೀಜಾ ಮತ್ತು ರಹೀಮಾ. ಮಗನ ಹೆಸರು ಅಮೀನ್ ರೆಹಮಾನ್.
ಸೈರಾ ಬಾನು ಡಿವೋರ್ಸ್ ಪಡೆಯುವ ವಿಚಾರವನ್ನು ಪತ್ರಿಕಾ ಪ್ರಕಟಣೆ ಮೂಲಕ ಜನರಿಗೆ ತಿಳಿಸಿದ್ದಾರೆ. ಎಆರ್ ರೆಹಮಾನ್ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದ್ದು ಪತ್ನಿಗೆ ನೀಡುತ್ತಿರುವ ಜೀವನಾಂಶ ಎಷ್ಟು ಎಂಬ ಚರ್ಚೆ ನಡೆಯುತ್ತಿದೆ.
ರೆಹಮಾನ್ ಒಂದು ಹಾಡಿಗೆ ಸುಮಾರು 3 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಾರೆ. ರೆಹಮಾನ್ ಹೆಸರಲ್ಲಿರುವ ಒಟ್ಟು ಸಂಪತ್ತು 2100 ಕೋಟಿ ಎನ್ನಲಾಗ್ತಿದೆ.
ಸುಪ್ರೀಂ ಕೋರ್ಟ್ 10 ಜುಲೈ 2024 ರ ಐತಿಹಾಸಿಕ ತೀರ್ಪಿನಲ್ಲಿ ಮುಸ್ಲಿಂ ಮಹಿಳೆ ತನ್ನ ಪತಿಯಿಂದ ಜೀವನಾಂಶವನ್ನು ಪಡೆಯಲು ಅರ್ಹಳು ಎಂದು ಒತ್ತಿ ಹೇಳಿದೆ.
ಜೀವನಾಂಶದ ಮೊತ್ತವನ್ನು ಲೆಕ್ಕಾಚಾರ ಮಾಡುವಾಗ ಅನೇಕ ಅಂಶಗಳನ್ನು ಕೋರ್ಟ್ ಪರಿಗಣಿಸುತ್ತದೆ. ಡಿವೋರ್ಸ್‌ಬಳಿಕ ಹೆಂಡತಿಗೆ ಪತಿಯ ನಿವ್ವಳ ಮಾಸಿಕ ವೇತನದ 25 ಪ್ರತಿಶತವನ್ನು ನೀಡಬೇಕಾಗುತ್ತದೆ.
ಸೈರಾ ಬಾನು ಅವರು ರೆಹಮಾನ್ ಅವರಿಂದ ಎಷ್ಟು ಜೀವನಂಶವನ್ನು ಪಡೆಯುತ್ತಿದ್ದಾರೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ವರದಿಗಳ ಪ್ರಕಾರ, ಕೋಟಿ ಕೋಟಿ ಜೀವನಂಶ ಸೈರಾ ಬಾನು ಪಾಲಾಗಲಿದೆ ಎನ್ನಲಾಗಿದೆ.