ಮಾತಿನಲ್ಲೂ ಟಕ್ಕರ್,ರೂಪದಲ್ಲಿಯೂ ಸಖತ್ ಕಾಂಪಿಟೆಶನ್ !ಜೀ ಟಿವಿ ಮೂಲಕವೇ ಎಂಟ್ರಿಯಾದ ಈ ಪ್ರತಿಭೆ ಜ್ಯೂನಿಯರ್ ಅನುಶ್ರೀ

Thu, 15 Aug 2024-8:33 am,

ಅನುಶ್ರೀ ಎಂದ ಕೂಡಲೇ ಕಣ್ಣ ಮುಂದೆ ಬರುವುದು ಅವರ ನಗು ಮುಖ, ಪಟ ಪಟನೆ ಮಾತನಾಡುವ ಶೈಲಿ.   

ಕನ್ನಡ ಮಾಧ್ಯಮದಲ್ಲಿ ಅನುಶ್ರೀಗೆ ಸರಿಸಾಟಿಯಾದ ನಿರೂಪಕಿ ಅಥವಾ ನಿರೂಪಕ ಯಾರೂ ಇಲ್ಲ ಎನ್ನುವ ಮಾತಿದೆ. ನಿರೂಪಣೆ ಮೂಲಕವೇ ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ಪ್ರತಿಭೆ ಅನುಶ್ರೀ.   

ಒಂದು ಕಾರ್ಯಕ್ರಮದಲ್ಲಿ ಖ್ಯಾತ ತಮಿಳು ನಟ ಚಿಯಾನ್ ವಿಕ್ರಂ ಕೂಡಾ ಅನುಶ್ರೀ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದ್ದರು.ನಾನು ಕೂಡಾ ಆನುಶ್ರೀ ಅಭಿಮಾನಿ ಎಂದಿದ್ದರು. 

ಅಂಥಹ ಅನುಶ್ರೀಯನ್ನೇ ಹೋಲುವ ಪ್ರತಿಭೆಯೊಂದಿದೆ.ರೂಪದಲ್ಲಿಯೂ ಅನುಶ್ರೀಗೆ ಟಕ್ಕರ್ ನೀಡುತ್ತಾರೆ. ಬಾಯಿ ತೆರೆದರೆ ಅನುಶ್ರೀ ರೀತಿಯೇ ಪಟ ಪಟನೆ ಎನ್ನುವ ನಿರರ್ಗಳ ಮಾತು.   

ಈಗಾಗಲೇ ಸಿನಿಮಾ,ಆಲ್ಬಂ ಸಾಂಗ್ ಗಳಲ್ಲಿ ನಟಿಸಿ  ಸೈ ಎನಿಸಿಕೊಂಡಿರುವ ಆರಾಧನಾ ಭಟ್  ನಿರೂಪಕಿ ಕೂಡಾ ಹೌದು. ಜೀ ವಾಹಿನಿಯಲ್ಲಿ ಪ್ರಸಾರವಾದ ಮಾಹಾ ನಟಿಯಲ್ಲಿ ಮಿಂಚಿ ತನ್ನ ನಟನಾ ಸಾಮರ್ಥ್ಯವನ್ನು ಪರಿಚಯಿಸಿದವರು. 

ಅಂದ ಹಾಗೆ ದಕ್ಷಿಣ ಕನ್ನಡದ ಮೂಡಬಿದಿರೆಯ ಈ ಚೆಲುವೆ ಜ್ಯೂ.ಅನುಶ್ರೀ ಎಂದೇ ಹೆಸರಾಗಿದ್ದಾರೆ. ಈ ಮಾತನ್ನು ಅನುಶ್ರೀ ಕೂಡಾ ಒಪ್ಪಿದ್ದು, ಅರಾಧಾನಾಳನ್ನು ಜ್ಯೂನಿಯರ್ ಎಂದೇ ಕರೆಯುತ್ತಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link