ಅನುಶ್ರೀಗೆ ಟಕ್ಕರ್ ಕೊಡುವ ನಿರೂಪಕಿ ಜೀ ಕನ್ನಡದ ಮೂಲಕವೇ ಎಂಟ್ರಿ!ಮಾತಿನಲ್ಲೂ, ಸೌಂದರ್ಯದಲ್ಲೂ ಅನುಶ್ರೀ ಪ್ರತಿರೂಪ ಈ ಕರಾವಳಿ ಬೆಡಗಿ
ನಟನೆ, ನಿರೂಪಣೆ, ಡಾನ್ಸ್ ಹೀಗೆ ಬಹು ಮುಖ ಪ್ರತಿಭೆಯನ್ನು ಹೊಂದಿರುವ ಬೆಡಗಿ ಈ ಮಾತಿನ ಮಲ್ಲಿ ಅನುಶ್ರೀ. ನಿರೂಪಣೆಯಲ್ಲಿ ಅನುಶ್ರೀಯನ್ನು ಮೀರಿಸುವವರು ಯಾರೂ ಇಲ್ಲ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ.
ಇದೇ ಕಾರಣಕ್ಕೆ ಅನುಶ್ರೀ ಬಹು ಬೇಡಿಕೆಯ ನಿರೂಪಕಿ, ಮಾತ್ರವಲ್ಲ ತನ್ನ ನಿರೂಪಣೆಗೆ ಅತಿ ಹೆಚ್ಚು ಸಂಭಾವನೆ ಪಡೆಯುವ ಆ್ಯಂಕರ್ ಕೂಡಾ.
ಸಿನಿಮಾ ರಿಲೀಸ್ ಆಗಿರಲಿ, ಸಾಂಗ್ ರಿಲೀಸ್ ಆಗಿರಲಿ,ಧಾರಾವಾಹಿಗಳ ಯಾವುದೇ ಕಾರ್ಯಕ್ರಮವೇ ಇರಲಿ ಅಲ್ಲಿ ಕಳೆ ಕಟ್ಟುವುದೇ ಪಟ್ ಪಟ್ ಮಾತನಾಡುವ ಅನುಶ್ರೀ ನಿರೂಪಣೆ.
ಇವರಿಗಿರುವ ಅಭಿಮಾನಿ ಬಳಗವೂ ದೊಡ್ಡದು. ಇನ್ನು ಹೊಸತಾಗಿ ಆ್ಯಂಕರಿಂಗ್ ಮಾಡುವವರು ಇವರನ್ನು ಬಹಳವಾಗಿ ಅನುಕರಣೆ ಮಾಡುತ್ತಾರೆ. ಆದರೆ ಇದುವರೆಗೆ ಇವರನ್ನು ಮ್ಯಾಚ್ ಮಾಡುವ ನಿರೂಪಕಿ ಸಿಕ್ಕಿರಲಿಲ್ಲ.
ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮಹಾ ನಟಿ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಬಂದಿರುವ ಆರಾಧನಾ ವೇದಿಕೆಯಲ್ಲಿಯೇ ಅನುಶ್ರೀಗೆ ಟಕ್ಕರ್ ನೀಡಿದ್ದಾರೆ.
ಆರಾಧನಾ ನಿರೂಪಣಾ ಶೈಲಿ ಕಂಡು ಅನುಶ್ರೀ ಕೂಡಾ ಬೆರಗಾಗಿದ್ದಾರೆ.ಅಂದ ಹಾಗೆ ರೂಪದಲ್ಲಿಯೂ ತುಸು ಅನುಶ್ರೀಯನ್ನೇ ಹೋಲುವ ಈ ಪ್ರತಿಭೆ ಕೂಡಾ ಮಂಗಳೂರು ಮೂಲದವರೇ.