Aradhana Ram: ಬ್ಲ್ಯಾಕ್‌ ಡ್ರೆಸ್‌ನಲ್ಲಿ ಕಾಟೇರ ಚೆಲುವೆಯ ಹಾಟ್‌ ಫೋಟೋಶೂಟ್!

Sun, 03 Mar 2024-10:11 pm,

ಜೂನಿಯರ್‌ ಮಾಲಾಶ್ರೀ ನಟಿ ಆರಾಧನಾ ರಾಮ್‌ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವರು ಆಗಾಗ ಗ್ಲಾಮರಸ್ ಫೋಟೋಶೂಟ್‌ ಮಾಡಿಸಿ ಮಿಂಚುತ್ತಿದ್ದಾರೆ.

ಜೂನಿಯರ್‌ ಆಕ್ಷನ್‌ ಕ್ವೀನ್‌ ಆರಾಧನಾ ರಾಮ್‌  ಇತ್ತೀಚೆಗೆ ಬ್ಲ್ಯಾಕ್ ಕಲರ್ ಡ್ರೆಸ್ ತೊಟ್ಟ ಫೋಟೋಶೂಟ್‌ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುವುದರ ಮೂಲಕ ಮತ್ತೆ ಫ್ಯಾನ್ಸ್‌ ಗಮನ ಸೆಳೆದಿದ್ದಾರೆ.

ನಟಿ ಆರಾಧನಾ ರಾಮ್‌ ಬ್ಲ್ಯಾಕ್‌ ಕಲರ್‌ ಡ್ರೆಸ್‌ನಲ್ಲಿರುವ ಮಾರ್ಡನ್‌ ಲುಕ್‌ನ ಚೆಂದದ ಫೋಟೋಗಳಿಗೆ ಸಾವಿರಾರು ಲೈಕ್ಸ್‌ ಬರುವುದರ ಜೊತೆಗೆ ಸಾಲು ಸಾಲು ಕಮೆಂಟ್‌ಗಳು ಹರಿದಿವೆ.

ಜೂನಿಯರ್‌ ಕನಸಿನ ರಾಣಿ ಆರಾಧನಾ ರಾಮ್‌ ಸೌಂದರ್ಯ ತನ್ನ ತಾಯಿಯನ್ನೇ ಮೀರಿಸುವಂತೆ ಇದ್ದು, ಈಗಾಗಲೇ ಈಕೆಯ ಅಂದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಆರಾಧನಾ ರಾಮ್‌ ಮುಂಬೈನಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆದು, ಬಳಿಕ ಕಾಟೇರ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ನಟಿ ಮೊದಲ ಸಿನಿಮಾದಿಂದಲೇ ಕನ್ನಡಿಗರ ಮನಗೆದ್ದಿದಾರೆ.

ನಟಿ ಆರಾಧನಾ ರಾಮ್‌ ಕಾಟೇರ ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿ, ಇಂದು ಕನ್ನಡದ ಭರವಸೆಯ ನಟಿಯಾಗಿದ್ದಾರೆ. ಹಾಗೇ ಈ ನಟಿಗೆ ಸದ್ಯ ಸಾಲು ಸಾಲು ಸಿನಿಮಾ ಆಫರ್ ಕೂಡ ಬರ್ತಿವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link