ಪುರುಷರು ಕುಳ್ಳಗಿನ ಮಹಿಳೆಯರನ್ನೇ ಏಕೆ ಹೆಚ್ಚು ಇಷ್ಟಪಡುತ್ತಾರೆ ಗೊತ್ತಾ..?
ಕುಳ್ಳಗಿನ ಮಹಿಳೆಯರು ಹೆಚ್ಚಾಗಿ ಪುರುಷರ ಎದೆ ಮಟ್ಟಕ್ಕೆ ಬರುತ್ತಾರೆ. ಹೀಗಾಗಿ ಅವರು ತಮ್ಮ ಸಂಗಾತಿಯನ್ನು ತಬ್ಬಿಕೊಂಡಾಗ ಪುರುಷರು ತುಂಬಾ ಸಂತೋಷಪಡುತ್ತಾರಂತೆ.
ಕುಳ್ಳಗಿರುವ ಮಹಿಳೆಯರು ಸ್ವಭಾವತಃ ಹೆಚ್ಚು ರೋಮ್ಯಾಂಟಿಕ್ ಆಗಿ ಇರುತ್ತಾರಂತೆ. ಇದರರ್ಥ ಕುಳ್ಳಗಿನ ಮಹಿಳೆಯರು ಯಾವಾಗಲೂ ತಮ್ಮ ಸಂಗಾತಿಯನ್ನು ಸಂತೋಷವಾಗಿರಿಸುತ್ತಾರೆ & ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ ಯಾವಾಗಲೂ ಯಶಸ್ವಿಯಾಗುತ್ತಾರಂತೆ.
ಬೇರೆ ಹುಡುಗಿಯರಿಗೆ ಹೋಲಿಸಿದರೆ ಕುಳ್ಳಗಿನ ಹುಡುಗಿ ಮತ್ತು ಎತ್ತರ ಹುಡುಗನ ವೈವಾಹಿಕ ಜೀವನವು ತುಂಬಾ ಸಂತೋಷ ಹಾಗೂ ಬಲಿಷ್ಠವಾಗಿರುತ್ತದೆಯಂತೆ.
ಪತ್ನಿ ಎತ್ತರವಿದ್ದರೆ ಆಗ ಅವಳು ಹೆಚ್ಚು ಆತ್ಮವಿಶ್ವಾಸ ಹಾಗೂ ಸ್ವಲ್ಪ ಕೋಪಿಷ್ಠೆಯು ಆಗಿರುವಳು ಎನ್ನುವ ಅಸುರಕ್ಷಿತ ಭಾವನೆಯು ಪುರುಷರಲ್ಲಿ ಇರುತ್ತದೆಯಂತೆ.
ರೊಮ್ಯಾಂಟಿಕ್ ಆಗಿರುವುದರ ಜೊತೆಗೆ ಕುಳ್ಳಗಿರುವ ಮಹಿಳೆಯರು ಹೆಚ್ಚು ಕಾಳಜಿ ವಹಿಸುತ್ತಾರೆಂದು ಯುವಕರು ನಂಬುತ್ತಾರಂತೆ. ಎತ್ತರದ ಮಹಿಳೆಯರಿಗೆ ಹೋಲಿಸಿದರೆ ಕುಳ್ಳಗಿನ ಮಹಿಳೆಯರು ಸಂಬಂಧಗಳಲ್ಲಿ ಹೆಚ್ಚು ಗಂಭೀರವಾಗಿರುತ್ತಾರಂತೆ.
ಬ್ರೂನೆಲ್ ವಿಶ್ವವಿದ್ಯಾಲಯದ ವರದಿಯ ಪ್ರಕಾರ, ಯುವಕರು ಕುಳ್ಳಗಿದ್ದರೂ ಉದ್ದ ಕೂದಲು ಮತ್ತು ಉತ್ತಮ ಆಕಾರವನ್ನು ಹೊಂದಿರುವ ಮಹಿಳೆಯರನ್ನು ಬಯಸುತ್ತಾರಂತೆ. ಕುಳ್ಳಗಿರುವ ಮಹಿಳೆಯರ ಮಿದುಳು ಎತ್ತರದ ಮಹಿಳೆಯರಿಗಿಂತ ತೀಕ್ಷ್ಣವಾಗಿರುತ್ತದೆ.