ದೀರ್ಘಕಾಲ ಕುಳಿತುಕೊಳ್ಳುವುದರಿಂದ ಕಾಲು ನೋವಿನ ಸಮಸ್ಯೆಯೇ? ಈ ಮನೆಮದ್ದುಗಳನ್ನು ಟ್ರೈ ಮಾಡಿ
ಇತ್ತೀಚಿನ ದಿನಗಳಲ್ಲಿ ದಿನವಿಡೀ ಕಚೇರಿಯಲ್ಲಿ ದೀರ್ಘ ಸಮಯದವರೆಗೆ ಕುಳಿತು ಕೆಲಸ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದಾಗಿ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಪದೇ ಪದೇ ಕಾಣಿಸಿಕೊಳ್ಳುವ ಈ ನೋವನ್ನು ನಿರ್ಲಕ್ಷಿಸುವುದರಿಂದ ಅದು ಇತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಇದನ್ನು ತಪ್ಪಿಸಲು ಕೆಲವು ಮನೆಮದ್ದುಗಳು ತುಂಬಾ ಪ್ರಯೋಜನಕಾರಿ ಆಗಿದೆ. ಅಂತಹ ಮನೆಮದ್ದುಗಳೆಂದರೆ...
ದೇಹದಲ್ಲಿ ಕಬ್ಬಿಣದ ಕೊರತೆ ಉಂಟಾದಾಗಲೂ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದರಿಂದ ಪರಿಹಾರ ಪಡೆಯಲು ಐಸ್ ಪ್ಯಾಕಿಂಗ್ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ನಿಮ್ಮ ಪಾದಗಳಲ್ಲಿ ನೋವಿನ ಜೊತೆಗೆ ಐಸ್ ಪ್ಯಾಕಿಂಗ್ ಬಳಸಿ.
ಇದಲ್ಲದೆ. ಒಂದು ಬಕೆಟ್ ನಲ್ಲಿ ನಿಮ್ಮ ಚರ್ಮ ತಡೆಯುವಷ್ಟು ಬಿಸಿ ನೀರು ತೆಗೆದುಕೊಂಡು ಅದರಲ್ಲಿ ಉಪ್ಪು, ಅರಿಶಿನ ಬೆರೆಸಿ ನಿಮ್ಮ ಪಾದಗಳನ್ನು ಆ ನೀರಿನಲ್ಲಿ ಕೆಲವು ನಿಮಿಷಗಳವರೆಗೆ ನೆನೆಸಿ. ಇದು ನಿಮ್ಮ ಕಾಲುಗಳ ಸ್ನಾಯುಗಳಲ್ಲಿನ ಆಯಾಸದಿಂದ ಪರಿಹಾರವನ್ನು ನೀಡುತ್ತದೆ.
ರಕ್ತ ಪರಿಚಲನೆ ಸರಿಯಾಗಿ ಆಗದಿದ್ದಾಗಲೂ ಕೂಡ ಇಂತಹ ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಮಸಾಜ್ ಮಾಡುವುದು ಒಳ್ಳೆಯದು. ನೀವು ಆಲಿವ್ ಎಣ್ಣೆ ಅಥವಾ ಅರಳೆಣ್ಣೆಯನ್ನು ಬಳಸಿ ಮಸಾಜ್ ಮಾಡುವುದರಿಂದ ದೇಹದ ಎಲ್ಲಾ ನರಗಳನ್ನು ತೆರೆಯುತ್ತದೆ, ಇದು ನಿಮ್ಮ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.
ಶೀತ, ನೆಗಡಿಯಾದಾಗ ಇಲ್ಲವೇ ಗಂಟಲಿನ ನೋವಿನಿಂದ ಪರಿಹಾರ ಪಡೆಯಲು ಸಾಮಾನ್ಯವಾಗಿ ಅರಿಶಿನದ ಹಾಲನ್ನು ಸೇವಿಸುತ್ತೇವೆ. ಆದರೆ, ಅರಿಶಿನದ ಹಾಲಿನ ಸೇವನೆಯಿಂದ ಅದು ಪಾದಗಳಲ್ಲಿನ ನೋವಿನಿಂದಲೂ ಪರಿಯಾರವನ್ನು ನೀಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.