ನೀವು ದುಡಿದ ದುಡ್ಡು ನಿಮ್ಮ ಕೈಯಲ್ಲಿ ಉಳಿಯುತ್ತಿಲ್ಲವೇ? ಹಾಗಾದ್ರೆ ಈ ನಿಯಮಗಳನ್ನ ತಪ್ಪದೇ ಪಾಲಿಸಿರಿ!!
ಮನೆಯ ಈಶಾನ್ಯ ಮೂಲೆಯನ್ನು ಯಾವಾಗಲೂ ಶುಚಿಯಾಗಿಟ್ಟುಕೊಳ್ಳಿರಿ. ಅಲ್ಲಿ ಗೊಂದಲವಾಗುವಂತೆ ವಸ್ತುಗಳನ್ನು ಇಡದೆ ಅಚ್ಚುಕಟ್ಟಾಗಿ ಎಲ್ಲವನ್ನೂ ಜೋಡಿಸಿಕೊಳ್ಳಿರಿ. ಹಾಗೆಯೇ ಇನ್ನಷ್ಟು ಒಳ್ಳೆಯ ಪರಿಣಾಮ ಬೇಕೆಂದರೆ ಈಶಾನ್ಯ ದಿಕ್ಕಿನಲ್ಲಿ ಕುಬೇರ ಯಂತ್ರವನ್ನೂ ಇರಿಸಬಹುದಾಗಿದೆ.
ಮನೆಯ ಪಶ್ಚಿಮ ಅಥವಾ ಆಗ್ನೇಯ ದಿಕ್ಕಿನಲ್ಲಿ ಕಸದ ಬುಟ್ಟಿಯನ್ನು ಯಾವುದೇ ಕಾರಣಕ್ಕೂ ಇಡಬಾರದು. ಮನೆಯಲ್ಲಿ ಬೇಡವಾದ ವಸ್ತುಗಳು ಅಂದರೆ ಗುಜರಿಗೆ ಹಾಕುವ ವಸ್ತುಗಳನ್ನು ಈ ದಿಕ್ಕಿನಲ್ಲಿ ಇಡಬಾರದು. ಪಶ್ಚಿಮ ಮತ್ತು ಆಗ್ನೇಯ ದಿಕ್ಕುಗಳಲ್ಲಿ ಕಸವಿದ್ದರೆ ನಿಮಗೆ ಹಣ ಹರಿದು ಬರಲು ತೊಂದರೆಯಾಗುತ್ತದೆ.
ಮನೆಯಲ್ಲಿ ನೀರಿನ ಸೋರಿಕೆಯಾಗುವುದನ್ನು ಆರ್ಥಿಕ ನಷ್ಟದ ಸಂಕೇತವೆಂದು ಹೇಳಲಾಗುತ್ತದೆ. ಹೀಗಾಗಿ ಇದರ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಮನೆಯ ನಲ್ಲಿಯಿಂದ ನೀರು ಸೋರುತ್ತಿದ್ದರೆ ತಕ್ಷಣವೇ ಅದನ್ನು ಸರಿಪಡಿಸಬೇಕು.
ಈಶಾನ್ಯ ದಿಕ್ಕಿನಲ್ಲಿ ನೀರಿನ ಕಾರಂಜಿ ನಿರ್ಮಿಸುವುದು ಒಳ್ಳೆಯದು. ಇಲ್ಲವೇ ಈಶಾನ್ಯ ದಿಕ್ಕಿನಲ್ಲಿ ನೀರಿಗೆ ಸಂಬಂಧಿಸಿದ ಬೇರೆ ವಸ್ತುಗಳನ್ನು ಇಡಬಹುದು.
ಮನೆಯ ಈಶಾನ್ಯ ಮೂಲೆಯು ವಾಸ್ತು ಶಾಸ್ತ್ರದಲ್ಲಿ ಬಹಳ ಮಹತ್ವದ್ದಾಗಿದ್ದು, ಇದು ದೇವರ ದಿಕ್ಕಾಗಿರುತ್ತದೆ. ಇದು ತುಂಬಾ ಧನಾತ್ಮಕ ಮತ್ತು ಶುದ್ಧವಾಗಿದೆ. ಈ ಪ್ರದೇಶವು ಪ್ರಬಲ ಮತ್ತು ಹೆಚ್ಚು ಪ್ರಯೋಜನಕಾರಿ ಶಕ್ತಿಯನ್ನು ಹೊಂದಿರುತ್ತದೆ.