ನಿಮ್ಮ ಫೋನ್‌ನಲ್ಲೂ ಗ್ರೀನ್ ಲೈಟ್ ಕಾಣುತ್ತಿದೆಯೇ? ಈಗಲೇ ಈ ಸೆಟ್ಟಿಂಗ್ ಬದಲಾಯಿಸಿ

Wed, 23 Aug 2023-2:20 pm,

ವಾಸ್ತವವಾಗಿ, ಫೋನ್‌ನಲ್ಲಿ ವೈಯಕ್ತಿಕ ಫೋಟೋಗಳು ಮತ್ತು ವಿಡಿಯೋಗಳಲ್ಲದೆ ಅಧಿಕೃತ ದಾಖಲೆಗಳನ್ನು  ಸೇವ್ ಮಾಡುವ ಪ್ರಮುಖ ಉದ್ದೇಶವೆಂದರೆ,  ಒಂದೇ ಕ್ಲಿಕ್‌ನಲ್ಲಿ ನಮ್ಮ ಕೆಲಸಗಳನ್ನು ಪೂರ್ಣಗೊಳಿಸಬಹುದು. ಆದರೆ, ನೀವು ಸ್ಮಾರ್ಟ್ಫೋನ್ ಬಳಸುತ್ತಿದ್ದರೆ ನಿಮ್ಮ ಫೋನ್‌ನಲ್ಲಿಯೂ ಈ ರೀತಿಯ ಗ್ರೀನ್ ಲೈಟ್ ಕಾಣುತ್ತಿದ್ದರೆ ಜಾಗರೂಕರಾಗಿದೆ. ಏಕೆಂದರೆ, ಈ ಗ್ರೀನ್ ಲೈಟ್ ನಿಮ್ಮ ಫೋನ್ ನಿಮ್ಮ ಮೇಲೆಯೇ ಬೇಹುಗಾರಿಕೆ ನಡೆಸುತ್ತಿದೆ ಎಂಬುದರ ಸೂಚಕವೂ ಆಗಿರಬಹುದು. 

ಇತ್ತೀಚಿನ ದಿನಗಳಲ್ಲಿ ಹ್ಯಾಕಿಂಗ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಫೋನ್ ಬಲಸುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ಸುರಕ್ಷಿತವಾಗಿರಲು ಏನು ಮಾಡಬೇಕು? ಹಗರಣವನ್ನು ತಪ್ಪಿಸುವುದು ಹೇಗೆ? ಫೋನ್ ಬಗ್ಗೆ ಯಾವಾಗಲೂ ಯಾವ ಅಂಶಗಳ ಬಗ್ಗೆ ಜಾಗರೂಕರಾಗಿರಬೇಕು ಎಂಬುದನ್ನೂ ತಿಳಿಯುವುದು ಬಹಳ ಅಗತ್ಯ. 

ಲಭ್ಯವಿರುವ ಮಾಹಿತಿಯ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಹ್ಯಾಕರ್‌ಗಳು ವಂಚನೆಗಾಗಿ ಹೊಸ ದಾರಿಯನ್ನು ಕಂಡು ಕೊಂಡಿದ್ದಾರೆ. ಅದುವೇ ಸ್ಕ್ರೀನ್ ರೆಕಾರ್ಡಿಂಗ್ . ಆಶ್ಚರ್ಯಕಾರ ಸಂಗತಿ ಎಂದರೆ ನಿಮ್ಮ ಸ್ಕ್ರೀನ್ ರೆಕಾರ್ಡಿಂಗ್ ಆಗುತ್ತಿದೆ ಎಂಬುದು ಸ್ವತಃ ಬಳಕೆದಾರರಿಗೆ ತಿಳಿದಿರುವುದಿಲ್ಲ. ಆದರೆ, ಇದನ್ನು ಬಳಸಿ ವಂಚಕರು ನಿಮ್ಮ ಮಾಹಿತಿಯನ್ನು ಕದಿಯಬಹುದು. 

ಸಾಮಾನ್ಯವಾಗಿ ಸ್ಮಾರ್ಟ್ಫೋನ್ ಜನರ ಜೀವನವನ್ನು ಸುಲಭವಾಗಿಸಿದ್ದು, ಬ್ಯಾಂಕಿಂಗ್ ವ್ಯವಹಾರಗಳನ್ನು ನಡೆಸಲು ಕೂಡ ಇದು ಪ್ರಯೋಜನಕಾರಿ ಆಗಿದೆ. ಆದರೆ ಫೋನ್ ಹ್ಯಾಕಿಂಗ್ ಸಂದರ್ಭದಲ್ಲಿ ನಿಮ್ಮ ಖಾತೆ ಕ್ಷಣಾರ್ಧದಲ್ಲಿ ಖಾಲಿ ಆಗಬಹುದು. ನಿಮ್ಮ ಫೋನ್  ಸ್ಕ್ರೀನ್ ರೆಕಾರ್ಡಿಂಗ್  ಆಗುತ್ತಿದ್ದರೆ ಫೋನ್‌ನಲ್ಲಿ ಈ ಗ್ರೀನ್ ಲೈಟ್ ಆನ್ ಇರುತ್ತದೆ. ಅರ್ಥಾತ್,  ಕ್ಯಾಮರಾ ಮತ್ತು ಮೈಕ್ ಅನ್ನು ಹಿನ್ನೆಲೆಯಲ್ಲಿ ಬಳಸಲಾಗುತ್ತಿದೆ. ಫೋನ್‌ನ ರೈಡ್ ಬದಿಯಲ್ಲಿ ಹಸಿರು ದೀಪ ಉರಿಯುತ್ತಿದ್ದರೆ ನಿಮ್ಮ ಫೋನ್ ಅಪಾಯದಲ್ಲಿದೆ ಎಂದು ಅರ್ಥ ಮಾಡಿಕೊಳ್ಳಿ. 

ನಿಮ್ಮ ಫೋನ್‌ನಲ್ಲೂ ಗ್ರೀನ್ ಲೈಟ್ ಕಾಣುತ್ತಿದ್ದರೆ ಮೊದಲು ಅದು ಯಾವ ಅಪ್ಲಿಕೇಷನ್ ರೆಕಾರ್ಡ್ ಮಾಡುತ್ತಿದೆ ಎಂಬುದನ್ನೂ ಪರಿಶೀಲಿಸಿ ಅದನ್ನು ಸ್ಟಾಪ್ ಮಾಡಿ. ಇದನ್ನು ಸರಿಪಡಿಸುವ ಇನ್ನೊಂದು ಮಾರ್ಗವೆಂದರೆ  ಸ್ಕ್ರೀನ್ ರೆಕಾರ್ಡ್ ಅಥವಾ ಮೈಕ್ ಆನ್ ಆಗಿರುವುದನ್ನು ನೀವು ಕಂಡುಕೊಂಡರೆ, ತಕ್ಷಣವೇ ಫೋನ್ ಅನ್ನು ರೀಸೆಟ್ ಮಾಡಿ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link