ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳು ಜೀತದಾಳಿನಂತೆ, ಈ ಶೋ ನಡೆಸೋದು ಆ ಫಾರಿನ್ ಕಂಪನಿ: ಆರ್ಯವರ್ಧನ್ ಆರೋಪ

Tue, 09 Jan 2024-9:34 pm,

ಬಿಗ್ ಬಾಸ್‌ ಮೇಲೆ ನನಗೆ ಸಿಟ್ಟು ಇದೆ. ನಾನು ಬರಲ್ಲ ಅಂದ್ರೂ, ಕರೆಸಿಕೊಂಡ್ರು. ನಾನು ಒಬ್ಬ ಸ್ಟಾರ್‌ ರೀತಿ ಬದುಕೋದು. ನನ್ನನ್ನು ಅಲ್ಲಿಗೆ ಕರೆಸಿ ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಆರ್ಯವರ್ಧನ್ ಗುರೂಜಿ ಆರೋಪಿಸಿದರು.

ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ಮುಗಿದ ಮೇಲೆ ನಮ್ಮನ್ನು ಕೂಡಿ ಹಾಕಿದ್ದರು. ಓಟಿಟಿ ಆದ್ಮೇಲೆ ಮನೆಗೆ ಬಿಟ್ಟಿಲ್ಲ. ನಮ್ಮನ್ನು ಬಿಗ್ ಬಾಸ್ ಸರಿಯಾಗಿ ಬಳಸಿಕೊಂಡಿಲ್ಲ. ಆ ನೋವು ಕಾಡುತ್ತಿತ್ತು ಎಂದು ಹೇಳಿದ್ದಾರೆ.

ನಾನು ತೆಂಡುಲ್ಕರ್ ಹಾಗೆ, ನಾನು ಫಾರ್ಮ್‌ನಲ್ಲಿ ಇರುವೆ. ಪ್ಲೇಯರ್ ಆಗಿರುತ್ತೀನಿ. ನಾವು ಜಮೀನ್ದಾರ್ರು. ಜೀತದ ಪದ್ಧತಿ ತುಂಬಾ ಹಿಂದೆ ಇತ್ತು, ಆದರೆ ಬಿಗ್‌ ಬಾಸ್‌ನಲ್ಲಿ ಆ ರೀತಿ ದುಡಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಿದ್ದಾರೆ. 

ಬಿಗ್ ಬಾಸ್‌ ಮನೆಯಲ್ಲಿ ನಾನು ಚೆನ್ನಾಗಿ ಅಡುಗೆ ಮಾಡಿ ಎಲ್ಲರಿಗೂ ತಿನಿಸಿದ್ದೇನೆ. ಅದಕ್ಕೆ ಅವಾರ್ಡ್ ಕೊಡಿ ಅಂತನೂ ಕೇಳಿದ್ದೆ. ಅವರಿಗೆ ಕೃತ್ಞತೆ ಇಲ್ಲ ಎಂದು ಆರ್ಯವರ್ಧನ್‌ ಕಿಡಿ ಕಾರಿದ್ದಾರೆ. 

ಬಿಗ್ ಬಾಸ್‌ ನಡೆಸುವುದು ಒಂದು ಫಾರಿನ್ ಕಂಪನಿ. ಆ ವ್ಯಕ್ತಿಗಳಿಗೆ ಇದರ ಬಗ್ಗೆ ಐಡಿಯಾ ಇಲ್ಲವೇ ಇಲ್ಲ ಎಂದಿದ್ದಾರೆ. 

ಬಿಗ್‌ ಬಾಸ್‌ ಬಗ್ಗೆ ಆರ್ಯವರ್ಧನ್‌ ಹಲವು ಬಾರಿ ನೆಗೆಟಿವ್‌ ಆಗಿ ಮಾತನಾಡಿದ್ದಾರೆ. ಈ ಬಾರಿ ಮತ್ತೊಮ್ಮೆ ಕಿರಿಕ್‌ ಕೀರ್ತಿ ಅವರ ಸಂದರ್ಶನದಲ್ಲಿ ಆರ್ಯವರ್ಧನ್‌ ಹೀಗೆ ಮಾತನಾಡಿದ್ದು, ಬಿಗ್‌ ಬಾಸ್‌ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link