ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದೆ ಭರಚುಕ್ಕಿ: ಕಾವೇರಿ ಜಲ ವೈಯ್ಯಾರ ಸೃಷ್ಟಿ

Fri, 26 Jul 2024-3:45 pm,

ಚಾಮರಾಜನಗರ: ಕಾವೇರಿ ಹೊರಹರಿವು ಹೆಚ್ಚಾದಂತೆ ಕೊಳ್ಳೇಗಾಲ ತಾಲೂಕಿನ‌ ಭರಚುಕ್ಕಿ ಜಲಪಾತದಲ್ಲಿ ರುದ್ರ ರಮಣೀಯ ದೃಶ್ಯ ಸೃಷ್ಟಿಯಾಗಿದ್ದು ಹಾಲ್ನೊರೆಯಂತೆ ನೀರು ಧುಮ್ಮಿಕ್ಕುತ್ತಿದ್ದೆ.

ಕೊಳ್ಳೇಗಾಲದ  ಭರಚುಕ್ಕಿ ಜಲಪಾತದ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು ಕಾವೇರಿ ಜಲ ವೈಯ್ಯಾರ ಸೃಷ್ಟಿಯಾಗಿದೆ.

ಕಬಿನಿ ಮತ್ತು ಕೆ‌ಆರ್‌ಎಸ್  ಜಲಾಶಯಗಳಿಂದ ಹೊರಹರಿವು ಹೆಚ್ಚಾದ ಹಿನ್ನೆಲೆ ಭರಚುಕ್ಕಿ ಜಲಪಾತವು ಭೋರ್ಗರೆದು ಧುಮ್ಮಿಕ್ಕುತ್ತಿದೆ.

ಜಲಾಶಯಗಳಿಂದ ಹೊರಬಿದ್ದ ಹೆಚ್ಚುವರಿ ನೀರು ಕಾವೇರಿ ನದಿಯಲ್ಲಿ ಮೈದುಂಬಿ ಹರಿಯುತ್ತಿದ್ದು  ವೆಸ್ಲಿ ಸೇತುವೆಯ ಬಳಿ ಕಾವೇರಿಯ ವಿಹಂಗಮ ನೋಟ ಕಾಣಸಿಗುತ್ತಿದೆ.

ಹಸಿರಿನ ನಡುವೆ ಹಾಲ್ನೊರೆಯಂತೆ  ಧುಮ್ಮಿಕ್ಕುತ್ತಿರುವ ಜಲಧಾರೆಯನ್ನು ಕಣ್ತುಂಬಿಕೊಳ್ಳಲು ಬೆಂಗಳೂರು, ಮೈಸೂರು ಸೇರಿದಂತೆ ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link