ಬೆಳ್ಳಿ ಉಂಗುರ ಧರಿಸುವುದು ಈ 3 ರಾಶಿಯವರಿಗೆ ಅಶುಭ: ಒಳಿತಿಗಿಂತ ಕೆಡುಕೇ ಹೆಚ್ಚು; ಕಡಗ, ಉಂಗುರವಾಗಿ ಧರಿಸಿದರಂತೂ ತಪ್ಪಿದ್ದಲ್ಲ ಕಷ್ಟ!

Fri, 23 Aug 2024-5:37 pm,

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿಯೊಂದು ಲೋಹಗಳನ್ನು ಕೆಲವು ಗ್ರಹಗಳಿಗೆ ಸಮಾನ ಎಂದು ಹೇಳಲಾಗುತ್ತದೆ. ಉದಾಹರಣೆಗೆ ಕಬ್ಬಿಣವನ್ನು ಶನಿ ಪ್ರಿಯ ಲೋಹವೆಂದರೆ, ಚಿನ್ನವನ್ನು ಗುರುವಿನ ಲೋಹವೆಂದು ಪರಿಗಣಿಸಲಾಗುತ್ತದೆ. ಅದೇ ರೀತಿಯಲ್ಲಿ ಬೆಳ್ಳಿಯನ್ನು ಚಂದ್ರ ಪ್ರಿಯ ಎನ್ನಲಾಗುತ್ತದೆ.

 

ಅಂದಹಾಗೆ ಚಂದ್ರ ಎಂದರೆ ತಂಪು ಮತ್ತು ಶಾಂತವಾಗಿರುವ ಅಂಶ ಎಂದರ್ಥ. ಇನ್ನು 12 ರಾಶಿಗಳಲ್ಲಿ ಕೆಲವರು ತಂಪಾದ ಭಾವನೆ ಹೊಂದಿದ್ದರೆ, ಇನ್ನೂ ಕೆಲವು ಉಗ್ರ ಅಂಶಗಳನ್ನು ಹೊಂದಿರುತ್ತದೆ. ಹೀಗಿರುವಾಗ ಉಗ್ರ ಅಂಶವನ್ನು ಹೊಂದಿರುವ ರಾಶಿಯ ಜನರು ಬೆಳ್ಳಿ ಧರಿಸಬಾರದು ಎನ್ನಲಾಗುತ್ತದೆ.

 

ಈ ಮೂರು ರಾಶಿಗಳ ಜನರು ಬೆಳ್ಳಿಯಿಂದ ಮಾಡಿದ ವಸ್ತುಗಳನ್ನು ಧರಿಸಿದರೆ, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಷ್ಟಕ್ಕೂ ಆ ರಾಶಿಗಳು ಯಾವುವು? ಬೆಳ್ಳಿ ಧರಿಸಿದರೆ ಏನಾಗುತ್ತದೆ? ಎಂಬುದನ್ನು ಮುಂದೆ ತಿಳಿಯೋಣ.

 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ, ಧನು ಮತ್ತು ಸಿಂಹ ರಾಶಿಯ ಜನರು ಬೆಳ್ಳಿ ವಸ್ತುಗಳನ್ನು ಧರಿಸಬಾರದು. ಈ ಮೂರು ರಾಶಿಗಳು ಬೆಂಕಿ ಅಥವಾ ಉಗ್ರ ಅಂಶಕ್ಕೆ ಸೇರಿವೆ. ಬೆಳ್ಳಿಯ ಆಡಳಿತ ಗ್ರಹವಾದ ಚಂದ್ರನು ತಂಪಾದ ಅಂಶಕ್ಕೆ ಸಂಬಂಧಿಸಿದೆ. ಈ ಎರಡೂ ಅಂಶಗಳು ಒಂದಕ್ಕೊಂದು ವಿರುದ್ಧವಾಗಿರುತ್ತವೆ. ಒಟ್ಟಿಗೆ ಸೇರಿದರೆ ನಷ್ಟವನ್ನು ಅನುಭವಿಸಬೇಕಾಗಬಹುದು ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.

 

ಜ್ಯೋತಿಷ್ಯದ ಪ್ರಕಾರ, ಮೇಷ ರಾಶಿಯ ಆಡಳಿತ ಗ್ರಹ ಮಂಗಳ. ಈ ಜನರು ಬೆಳ್ಳಿ ಉಂಗುರವನ್ನು ಧರಿಸುವುದರಿಂದ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗಬಹುದು.

 

ಇನ್ನು ಸಿಂಹ ರಾಶಿಯ ಆಡಳಿತ ಗ್ರಹವನ್ನು ಸೂರ್ಯ. ಸೂರ್ಯನನ್ನು ಶಾಖಗ್ರಹವೆಂದು ಪರಿಗಣಿಸಲಾಗುತ್ತದೆ ಮತ್ತು ಚಂದ್ರನು ತಂಪಾಗಿರುವ ಗ್ರಹವಾಗಿದೆ. ಈ ಕಾರಣಕ್ಕಾಗಿ, ಈ ರಾಶಿಯ ಜನರು ಬೆಳ್ಳಿಯನ್ನು ಧರಿಸುವುದರಿಂದ ನಷ್ಟವನ್ನು ಅನುಭವಿಸಬಹುದು. ಕೆಲಸವು ಹಾಳಾಗುವ ಸಾಧ್ಯತೆಗಳು ಹೆಚ್ಚಾಗಬಹುದು.

 

ಧನು ರಾಶಿಯ ಆಡಳಿತ ಗ್ರಹ ಗುರು. ಈ ಗ್ರಹದ ಲೋಹವು ಚಿನ್ನವಾಗಿದೆ. ಜ್ಯೋತಿಷ್ಯದ ಪ್ರಕಾರ, ಈ ರಾಶಿಯ ಜನರಿಗೆ ಬೆಳ್ಳಿಯನ್ನು ಉತ್ತಮ ಲೋಹವೆಂದು ಪರಿಗಣಿಸಲಾಗುವುದಿಲ್ಲ. ಈ ರಾಶಿಯ ಜನರು ಬೆಳ್ಳಿಯ ಉಂಗುರ ಅಥವಾ ಯಾವುದೇ ಆಭರಣವನ್ನು ಧರಿಸಿದರೆ, ಅಪಘಾತ ಸಂಭವಿಸುವ ಸಾಧ್ಯತೆಯಿರುತ್ತದೆ.

 

 ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯವನ್ನು ಆಧರಿಸಿದೆ ಮತ್ತು ಮಾಹಿತಿಗಾಗಿ ಮಾತ್ರ ನೀಡಲಾಗುತ್ತಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಯಾವುದೇ ಪರಿಹಾರವನ್ನು ತೆಗೆದುಕೊಳ್ಳುವ ಮೊದಲು, ಖಂಡಿತವಾಗಿಯೂ ಸಂಬಂಧಪಟ್ಟ ವಿಷಯದ ತಜ್ಞರನ್ನು ಸಂಪರ್ಕಿಸಿ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link