ಮಗು ಜನಿಸಿದ ಕೂಡಲೇ ನಿಮ್ಮ ಖಾತೆಗೆ ಬೀಳುತ್ತೆ ಹಣ! ಕೇಂದ್ರದ ಈ ಯೋಜನೆ ಪಡೆಯಲು ನೀವು ಮಾಡಬೇಕಿರೋದು ಇಷ್ಟೇ
ಕೇಂದ್ರ ಸರ್ಕಾರ ನಡೆಸುತ್ತಿರುವ ಈ ಯೋಜನೆಯ ಹೆಸರು 'ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ-ಪಿಎಂಎಂವಿವೈ'. ಇದರ ಅಡಿಯಲ್ಲಿ ನವಜಾತ ಶಿಶುವಿನ ತಾಯಿಗೆ 5000 ರೂ ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಯನ್ನು ಸರ್ಕಾರವು 1 ಜನವರಿ 2017 ರಂದು ಪ್ರಾರಂಭಿಸಿದೆ.
‘ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ' ಅಡಿಯಲ್ಲಿ, ಮೊದಲ ಬಾರಿಗೆ ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಯನ್ನು 'ಪ್ರಧಾನ ಮಂತ್ರಿ ಗರ್ಭಾವಸ್ಥೆಯ ಸಹಾಯ ಯೋಜನೆ' ಎಂದೂ ಕರೆಯಲಾಗುತ್ತದೆ. ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮತ್ತು ಅವರಿಗೆ ಪೌಷ್ಟಿಕ ಆಹಾರ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ಯೋಜನೆಯ ಲಾಭ ಪಡೆಯಲು ಕೆಲವು ನಿಯಮಗಳಿವೆ. ಮೊದಲ ಬಾರಿಗೆ ಗರ್ಭಿಣಿಯಾಗಿರುವ ಮಹಿಳೆಯು, ತನ್ನ ಮತ್ತು ಪತಿಯ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್, ಫೋಟೋಗಳ ಮೂಲಕ ನೋಂದಣಿ ಮಾಡಿಸಬೇಕು. ಬ್ಯಾಂಕ್ ಖಾತೆ ಜಂಟಿಯಾಗಿರಬಾರದು. ಇನ್ನು ಮಗು ಜನಿಸಿದ ಬಳಿಕ ಈ ಯೋಜನೆಯಡಿ ಗರ್ಭಿಣಿಯರಿಗೆ ಮೂರು ಕಂತುಗಳಲ್ಲಿ 5000 ರೂ.
ಮೊದಲ ಬಾರಿಗೆ ತಾಯಂದಿರಿಗೆ ಪೌಷ್ಟಿಕಾಂಶ ನೀಡುವುದು ಯೋಜನೆಯ ಉದ್ದೇಶವಾಗಿದೆ. 5000 ರೂಪಾಯಿಗಳಲ್ಲಿ ಮೊದಲ ಕಂತು 1000 ರೂಪಾಯಿಗಳು, ಎರಡನೇ ಕಂತು 2000 ರೂಪಾಯಿಗಳು ಮತ್ತು ಮೂರನೇ ಕಂತು 2000 ರೂಪಾಯಿಗಳು. ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯರು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ. ಸರ್ಕಾರದಿಂದ ನೇರವಾಗಿ ಮಹಿಳೆಯ ಖಾತೆಗೆ ಮೊತ್ತವನ್ನು ವರ್ಗಾಯಿಸಲಾಗುತ್ತದೆ.
ನೀವು ASHA ಅಥವಾ ANM ಮೂಲಕ PM Matritva Vandana Yojana ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಯೋಜನೆಯ ಲಾಭವನ್ನು ಎಲ್ಲಾ ಮಹಿಳೆಯರಿಗೆ ಒದಗಿಸಲಾಗಿದೆ. ಅವರ ಹೆರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಆಗಲಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಆಗಲಿ ಈ ಯೋಜನೆಯ ಫಲ ಸಿಗಲಿದೆ.