ಒಂದು ಲೋಟ ನೀರಿಗೆ ಈ ಪುಡಿಯನ್ನು ಮಿಕ್ಸ್ ಮಾಡಿ ಕುಡಿಯಿರು.. ಬೊಜ್ಜು ಕರಗಿ ನಿಮ್ಮ ಹೊಟ್ಟೆ ಫ್ಲಾಟ್ ಆಗುತ್ತದೆ..!
Asafoetida For Belly Fat: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಹಾರ ಪದ್ಧತಿ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಆಹಾರ ಪದ್ಧತಿಯಿಂದಾಗಿ ಜನರು ಅಧಿಕ ತೂಕ ಮತ್ತು ಹೊಟ್ಟೆಯ ಕೊಬ್ಬಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಹೊಟ್ಟೆಯ ಕೊಬ್ಬು ಎಂದರೆ ಹೊಟ್ಟೆಯ ಸುತ್ತ ಕೊಬ್ಬಿನ ಶೇಖರಣೆ. ಇದರಿಂದ ಹೊಟ್ಟೆಯು ದುಂಡಾಗಿ ಕಾಣುತ್ತದೆ. ಇದರಿಂದಾಗಿ ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕಡಿಮೆ ಮಾಡಲು ವ್ಯಾಯಾಮ ಮತ್ತು ಆಹಾರ ಕ್ರಮವನ್ನು ಅನುಸರಿಸುತ್ತಿದ್ದಾರೆ.
ತೂಕ ಇಳಿಸಿಕೊಳ್ಳಲು ಬಯಸುವವರಿಗೆ, ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದು ಸಾಕಾಗುವುದಿಲ್ಲ. ದೇಹದ ಒಟ್ಟು ಕೊಬ್ಬನ್ನು ಕಡಿಮೆ ಮಾಡಿ. ವ್ಯಾಯಾಮದ ಜೊತೆಗೆ, ಕೆಲವು ಮನೆ ಸಲಹೆಗಳನ್ನು ಸಹ ಅನುಸರಿಸಬೇಕು.
ದೇಹದ ಕೊಬ್ಬನ್ನು ತೊಡೆದುಹಾಕಿ. ನೈಸರ್ಗಿಕವಾಗಿ ದೇಹದ ಕೊಬ್ಬನ್ನು ಕಳೆದುಕೊಳ್ಳಲು ಬಯಸುವವರಿಗೆ ಯಾವುದೇ ವ್ಯಯಾಮ ಅಥವಾ ಡಯಟ್ ಬೇಕಾಗಿಲ್ಲ. ಕೇವಲ ಈ ಪಪುಡಿಯನ್ನು ಬೆರೆಸಿದ ನೀರನ್ನು ಕುಡಿಯುವುದರಿಂದ ನೀವು, ನಿಮ್ಮ ಹೊಟ್ಟೆಯ ಕೊಬ್ಬನ್ನು ಕೆಲವೇ ದಿನಗಳಲ್ಲಿ ಕರಗಿಸಬಹುದು.
ಭಾರತೀಯ ಪಾಕಪದ್ಧತಿಯಲ್ಲಿ ಪರಿಮಳವನ್ನು ಹೆಚ್ಚಿಸಲು ಇಂಗುವನ್ನು ಸಾಮಾನ್ಯವಾಗಿ ಎಲ್ಲಾ ಅಡುಗೆಗಳಲ್ಲು ಬಳಸಲಾಗುತ್ತದೆ. ಅದರಲ್ಲೂ ಸಾಂಬಾರ್ ಗೆ ಇಂಗು ಹಾಕಿದರೆ ಅದರ ರುಚಿಯೇ ಬೇರೆ.
ಅಂತಹ ಇಂಗುದಿಂದ ನೀವು ತೂಕವನ್ನು ಕಳೆದುಕೊಳ್ಳಬಹುದು. ಹೊಟ್ಟೆಯ ಕೊಬ್ಬು ಮತ್ತು ಸೊಂಟದ ಗಾತ್ರವು ಏಕಕಾಲದಲ್ಲಿ ಕಡಿಮೆಯಾಗುತ್ತದೆ ಎನ್ನುತ್ತವೆ ಸಂಶೋಧನೆಗಳು.
ಇಂಗುವನ್ನು ಸಾಮಾನ್ಯವಾಗಿ ಭಕ್ಷ್ಯಗಳ ಸುವಾಸನೆ ಹೆಚ್ಚಿಸಲು ಬಳಸಲಾಗುತ್ತದೆ. ಇಂಗುವನ್ನು ಪ್ರತಿದಿನ ಸೇವಿಸುವುದರಿಂದ ಚಯಾಪಚಯವು ಸುಧಾರಿಸುತ್ತದೆ. ಜೀರ್ಣಕಾರಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಅದ್ಭುತ ಔಷಧವಾಗಿದೆ.
ಇಂಗು ಅಧಿಕ ತೂಕದ ಜನರಿಗೆ ಬಹಳ ಪರಿಣಾಮಕಾರಿ. ಇದು ಹಸಿವನ್ನು ನಿಯಂತ್ರಿಸಿ, ಅತಿಯಾಗಿ ತಿನ್ನುವ ಬಯಕೆಯನ್ನು ಕಡಿಮೆ ಮಾಡುತ್ತದೆ.
ಇಂಗು ಸೇವಿಸುವುದರಿಂದ ದೇಹದಲ್ಲಿರುವ ಕೊಳೆ ಜೊತೆಗೆ ಕೊಬ್ಬು ಕಡಿಮೆಯಾಗುತ್ತದೆ. ದಿನನಿತ್ಯದ ವ್ಯಾಯಾಮದ ಜೊತೆಗೆ ಇಂಗುವನ್ನು ಬೆರಸಿದ ನೀರನ್ನು ಸೇವಿಸುವುದರಿಂದ ನಿಮ್ಮ ಹೊಟ್ಟೆಯ ಕೊಬ್ಬು ಕರಗಿ ಹೋಗುತ್ತದೆ.
ಒಂದು ಲೋಟ ನೀರನ್ನು ಪಾತ್ರೆಯಲ್ಲಿ ಸುರಿದು ಚೆನ್ನಾಗಿ ಕುದಿಯಲು ಇಡಿ. ಈ ನೀರಿಗೆ ಒಂದು ಚಿಟಿಕೆ ಇಂಗು ಪುಡಿಯನ್ನು ಸೇರಿಸಿ, ಇದಕ್ಕೆ ಬ್ಲಾಕ್ ಸಾಲ್ಟ್ ಹಾಕಿ ನೀರನ್ನು ಸೋಸಿಕೊಂಡು ನಿಂಬೆ ರಸವನ್ನು ಬೆರಸಿ ಸೇವಿಸಿ.
ಈ ರೀತಿ ಖಾಲಿ ಹೊಟ್ಟೆಯಲ್ಲಿ ವಾರಕ್ಕೆ ಮೂರು ಭಾರಿ ಈ ನೀರನ್ನು ಕುಡಿಯುವುದರಿಂದ ನೀವು ಉತ್ತಮ ಫಲಿತಾಂಶವನ್ನು ಕಾಣಬಹುದು. ನಿಮಗೆ ಇನ್ನೂ ರುಚಿಯಾಗಿ ಎನಿಸಬEಕು ಎಂದುಕೊಂಡರೆ, ಇದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಸಹ ಸೇರಿಸಿಕೊಳ್ಳಬಹುದು.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.