Ashika Ranganath: ‘ರೇಮೊ’ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ ನಟಿ ಆಶಿಕಾ ರಂಗನಾಥ್

Mon, 21 Nov 2022-7:03 pm,

ಸ್ಯಾಂಡಲ್‍ವುಡ್ ನಟಿ ಆಶಿಕಾ ರಂಗನಾಥ್ ಅವರು ತಮ್ಮ ‘ರೇಮೊ’ ಸಿನಿಮಾದ ಬಗ್ಗೆ ಬಿಗ್ ಅಪ್‍ಡೇಟ್‍ ನೀಡಿದ್ದಾರೆ. ತಮ್ಮ ಇನ್‍ಸ್ಟಾಗ್ರಾಮ್‍ ಸ್ಟೋರಿಯಲ್ಲಿ ಚಿತ್ರದ ಬಗ್ಗೆ ನಟಿ ಮಾಹಿತಿ ಹಂಚಿಕೊಂಡಿದ್ದಾರೆ.

ಸ್ಯಾಂಡಲ್‍ವುಡ್‍ ಯುವ ನಟ ಇಶಾನ್ ಮತ್ತು ಕ್ಯೂಟ್ ಹುಡುಗಿ ಆಶಿಕಾ ರಂಗನಾಥ್ ನಟಿಸಿರುವ ‘ರೇಮೊ’ ಸಿನಿಮಾ ನವೆಂಬರ್ 25ರಂದು ಬಿಡುಗಡೆಯಾಗಲಿದೆ. ಇದೊಂದು ಬ್ಯೂಟಿಫುಲ್‌ ಮ್ಯೂಸಿಕಲ್ ಲವ್ ಸ್ಟೋರಿಯಾಗಿದೆ.

ಈ ಚಿತ್ರದಲ್ಲಿ ನಟಿ ಆಶಿಕಾ ರಂಗನಾಥ್ ಖ್ಯಾತ ಸಿಂಗರ್ ಪಾತ್ರ ಮಾಡುತ್ತಿದ್ದಾರೆ. ‘ಗೂಗ್ಲಿ’ ಖ್ಯಾತಿಯ ಪವನ್ ಒಡೆಯರ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ.  

ನಟಿ ಆಶಿಕಾ ರಂಗನಾಥ್ ಸದ್ಯ ಸ್ಯಾಂಡಲ್‍ವುಡ್‍ನ ಬೇಡಿಕೆಯ ನಟಿಯಾಗಿದ್ದಾರೆ. ದೊಡ್ಡ ಮಟ್ಟದ ಬೆಡಿಕೆ ಸೃಷ್ಟಿಸಿಕೊಂಡಿರುವ ಈ ನಟಿಯ ಕೈಯಲ್ಲಿ ಸದ್ಯ ಹಲವು ಆಫರ್​ಗಳಿವೆ. ಕಳೆದ ವರ್ಷ ಇವರ ನಟನೆಯ ‘ಮದಗಜ’ ಚಿತ್ರ ರಿಲೀಸ್ ಆಗಿತ್ತು.

ಸಿ.ಆರ್. ಮನೋಹರ್ ಬಂಡವಾಳ ಹೂಡಿರುವ ಈ ಸಿನಿಮಾಗೆ ಸಿ.ಆರ್.ಗೋಪಿ ಸಹ ನಿರ್ಮಾಪಕರಾಗಿದ್ದಾರೆ. ಮ್ಯಾಜಿಕಲ್‌ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿರುವ 6 ಅದ್ಭುತ ಹಾಡುಗಳು ಈ ಚಿತ್ರದಲ್ಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link