Ashika Ranganath : ಹೇಳಿಬಿಡು ಹುಡುಗಿ, ನಿನ್ನ ಅಪರೂಪದ ಸೌಂದರ್ಯ ಸಿರಿಗೆ ಕಾರಣವೇನು..!
ಆಶಿಕಾ ರಂಗನಾಥ್ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಇರುವ ಬೆಡಗಿ. ತಮ್ಮ ಅಭಿಮಾನಿಗಳಿಗಾಗಿ ಚೆಂದ ಫೋಟೋ ಹಾಕುವ ಅಂದಗಾರ್ತಿ.
ಇತ್ತೀಚಿಗೆ ಆಶಿಕಾ ಕುಡಿದು ತೂರಾಡೋ ವಿಡಿಯೋ ಒಂದು ವೈರಲ್ ಆಗಿತ್ತು. ಅದನ್ನು ನೋಡಿದ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದರು. ಆದ್ರೆ ಅದು ರೇಮೋ ಸಿನಿಮಾದ ದೃಶ್ಯ ಅಂತ ಗೊತ್ತಾಗಿ ಕೂಲ್ ಆಗಿದ್ದರು.
ಸದ್ಯ ಆಶಿಕಾ ರಂಗನಾಥ್ ಅವರು ʼರೇಮೊ’ ಚಿತ್ರದ ಯಶಸ್ಸಿನಲ್ಲಿದ್ದಾರೆ. ಅಲ್ಲದೆ ತಮಿಳು ಸಿನಿರಂಗದಲ್ಲೂ ಬ್ಯುಸಿಯಾಗಿದ್ದಾರೆ. ಟಾಲಿವುಡ್ ಸಿನಿಮಾಗಳಲ್ಲೂ ನಟಿಸಲಿದ್ದಾರೆ.
ನಟನೆ ಹೊರತು ಪಡಿಸಿ ಆಶಿಕಾ ಮುಗ್ದ ಸೌಂದರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ.
ಇದೀಗ ತಮಿಳಿನ ಖ್ಯಾತ ನಟ ಸಿದ್ದಾರ್ಥ್ ಜೊತೆ ಸಿನಿಮಾ ಒಂದನ್ನು ಮಾಡುತ್ತಿದ್ದಾರೆ. ಅಲ್ಲದೆ, ಟಾಲಿವುಡ್ ಸ್ಟಾರ್ ಕಲ್ಯಾಣ್ ರಾಮ್ ಅವರ ಜೊತೆ ನಟಿಸಲಿದ್ದಾರೆ.
ಆಶಿಕಾ ರಂಗನಾಥ್, ಕನ್ನಡದ ʼO2ʼ ಹಾಗೂ ʼಗತವೈಭವʼ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.