ಆಶಿಕಾ ಎಂಬ ಸೌಂದರ್ಯದ ಗಣಿಯ ಅಂದಕ್ಕೆ ಮನಸೋತ ಫ್ಯಾನ್ಸ್..!
ಸೌಂದರ್ಯ ಸಿರಿ, ಅದ್ಭುತ ನಟನೆಯ ಮೂಲಕ ಆಶಿಕಾ ರಂಗನಾಥ್ ಸ್ಯಾಂಡಲ್ವುಡ್ನಲ್ಲಿ ಸಖತ್ ಫೇಮಸ್. ಈ ನಡುವೆ ಅವರಿಗೆ ಟಾಲಿವುಡ್ ಮತ್ತು ಕಾಲಿವುಡ್‌ನಿಂದ ಸಾಕಷ್ಟು ಆಫರ್ಗಳು ಬರುತ್ತಿವೆ.
ಸದ್ಯ ತಮಿಳು ಸಿನಿಮಾದಲ್ಲಿ ಆಶಿಕಾ ಬ್ಯುಸಿಯಾಗಿದ್ದಾರೆ. ನಟ ಸಿದ್ಧಾರ್ಥ ಜೊತೆ ನಟಿಸಲಿದ್ದಾರೆ. ಚಿತ್ರದ ಮೂಹೂರ್ತ ದಿನ ಪಿಂಕ್ ಮತ್ತು ಬಿಳಿ ಬಣ್ಣದ ಲೆಹೆಂಗಾದಲ್ಲಿ ಮಿಂಚಿದ್ದಾರೆ.
ಆಶಿಕಾ ಬೋಲ್ಡ್ ಲುಕ್ ಫ್ಯಾನ್ಸ್ಗೆ ಸಖತ್ ಇಷ್ಟ ಆಗಿದ್ದು, ಕ್ಯೂಟ್ ಗೊಂಬೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಪಿಂಕ್ ಮತ್ತು ಬಿಳಿ ಕಲರ್ ಲೆಹೆಂಗಾ ತೊಟ್ಟು ಕ್ಯೂಟ್ ಸ್ಮೈಲ್ ನೀಡಿರುವ ಆಶಿಕಾ ಫೋಟೋಸ್ ಸದ್ಯ ಪಡ್ಡೆಹುಡುಗರ ನಿದ್ದೆ ಕದ್ದಿದೆ. ಆಶಿಕಾ ರಂಗನಾಥ್ ಅವರಿಗೆ ಇತ್ತೀಚೆಗೆ ‘ಸೈಮಾ’ ಪ್ರಶಸ್ತಿ ಸಿಕ್ಕಿದೆ. ‘ಮದಗಜ’ ಸಿನಿಮಾದಲ್ಲಿನ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ.