ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನದ ಬಿರುಗಾಳಿ.. ಖ್ಯಾತ ನಟಿಯ ದಾಂಪತ್ಯದಲ್ಲಿ ಬಿರುಕು!ಡಿವೋರ್ಸ್ ನಿಜಾನಾ?
Mayuri Kyatari Divorce Rumors: ಸ್ಯಾಂಡಲ್‌ವುಡ್‌ನಲ್ಲಿ ಸಹ ಇತ್ತಿಚೆಗೆ ಹಲವು ಡಿವೋರ್ಸ್ ಸುದ್ದಿಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಇದೀಗ ಕನ್ನಡ ಕಿರುತೆರೆಯ ಸ್ಟಾರ್ ನಟಿ ಮಯೂರಿ ಕ್ಯಾತರಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಮಾತು ಹರಿದಾಡುತ್ತಿದೆ.
ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ನಟನಾ ಲೋಕಕ್ಕೆ ಮಯೂರಿ ಕ್ಯಾತರಿ ಕಾಲಿಟ್ಟರು. ಇದೇ ಸೀರಿಯಲ್‌ನಿಂದ ಸಾಕಷ್ಟು ಜನಪ್ರಿಯರಾದರು. ಬಳಿಕ ಸಿನಿಮಾಗಳನ್ನು ಸಹ ಮಾಡಿದರು.
ನಟ ಅಜಯ್ ಜೊತೆ ಕೃಷ್ಣ ಲೀಲಾ ಸಿನಿಮಾದಲ್ಲಿ ಮಯೂರಿ ಕ್ಯಾತರಿ ನಟಿಸಿದಾರೆ. ಈ ಸಿನಿಮಾ ಸೂಪರ್ ಹಿಟ್ ಆಯ್ತು. ಬಳಿಕ ಅನೇಕ ಅವಕಾಶಗಳನ್ನು ಮಯೂರಿ ಕ್ಯಾತರಿ ಪಡೆದರು.
ಇಷ್ಟಕಾಮ್ಯ, ನಟರಾಜ ಸರ್ವಿಸ್, ಕರಿಯ 2, 8ಎಂಎಂ ಬುಲೆಟ್, ರುಸ್ತುಂ, ನನ್ನ ಪ್ರಕಾರ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಮೌನಂ, ಪೊಗರು, ವೀಲ್ಚೇರ್ ರೋಮಿಯೋ ಹೀಗೆ ಹಲವಾರು ಸಿನಿಮಾಗಳಲ್ಲಿ ಮಯೂರಿ ನಟಿಸಿ ಜನರ ಮನಗೆದ್ದವರು.
ಅರುಣ್ ಕುಮಾರ್ ಮತ್ತು ಮುಯೂರಿ 10 ವರ್ಷಗಳಿಂದ ಸ್ನೇಹಿತರಾಗಿದ್ದರು. ಇದೇ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. 2020ರ ಜೂನ್ 12ರಂದು ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಅರುಣ್ ಕುಮಾರ್ ಮತ್ತು ಮುಯೂರಿ ಮದುವೆ ಆದರು. ಈ ದಂಪತಿಗ ಒಂದು ಗಂಡು ಮಗುವಿದೆ.
ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಮಯೂರಿ ತಮ್ಮ ಪತಿ ಮತ್ತು ,ಗುವಿನ ಹಲವು ಫೋಟೋಗಳನ್ನು ಶೇರ್ ಮಾಡಿದ್ದರು. ಆದರೆ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿದ್ದ ಮಯೂರಿ ಪತಿಯ ಫೋಟೋಗಳು ಡಿಲೀಟ್ ಆಗಿದ್ದವು.
ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಮಯೂರಿ ತಮ್ಮ ಪತಿ ಮತ್ತು ,ಗುವಿನ ಹಲವು ಫೋಟೋಗಳನ್ನು ಶೇರ್ ಮಾಡಿದ್ದರು. ಆದರೆ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿದ್ದ ಮಯೂರಿ ಪತಿಯ ಫೋಟೋಗಳು ಡಿಲೀಟ್ ಆಗಿದ್ದವು.
ಮಯೂರಿ ಖಾತೆಯಲ್ಲಿ ಪತಿಯ ಫೋಟೋ ಡಿಲೀಟ್ ಆಗಿದ್ದದನ್ನು ನೋಡಿದ ನೆಟ್ಟಿಗರು ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ತಿಳಿದುಕೊಂಡರು. ಈ ಬಗ್ಗೆ ಚರ್ಚೆ ಶುರುವಾಯಿತು. ಇದಕ್ಕೆ ನಟಿ ಮಯೂರಿ ಸ್ಪಷ್ಟನೆ ನೀಡಿದ್ದಾರೆ.
ನಾನು ಪಾಸಿಟಿವ್ ಆಗಿ ಯೋಚಿಸುವ ವ್ಯಕ್ತಿ. ಈ ರೀತಿ ನಮ್ಮ ಬಗ್ಗೆ ಕೇಳುವವರು ಕೆಟ್ಟವರಲ್ಲ. ಯಾವುದೋ ಬೇರೆಯ ಆಲೋಚನೆಯಲ್ಲಿ ಕೇಳಿರಲೂಬಹುದು. ಯಾರ ವೈಯಕ್ತಿಕ ವಿಚಾರದ ಬಗ್ಗೆ ನಾನು ಕೇಳಲ್ಲ. ಪಬ್ಲಿಕ್ ಫಿಗರ್ ಅಂದ ಮೇಲೆ ಕುತೂಹಲ ಸಹಜವಾಗಿ ಇರುತ್ತದೆ ಎಂದು ನಟಿ ಮಯೂರಿ ಹೇಳಿದ್ದಾರೆ.
ಬೇರೆಯವರ ಸಂಸಾರದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳುವ ಬದಲು, ಅವರವರ ಜೀವನದ ಬಗ್ಗೆ ನೋಡಿಕೊಳ್ಳಲಿ ಎಂದು ನಟಿ ಮಯೂರಿ ಹೇಳಿದ್ದಾರೆ.
ನನ್ನ ಮೆದುಳು, ಮನಸ್ಸು, ದೇಹ ತುಂಬಾ ಚೆನ್ನಾಗಿದೆ. ದಾಂಪತ್ಯ ಜೀವನದಲ್ಲೂ ಖುಷಿಯಾಗಿಬದುಕುತ್ತಿದ್ದೇನೆ. ಕೆಲವರು ಟೀಕಿಸುತ್ತಾರೆ, ಅವರ ಬಗ್ಗೆ ನಾನು ತಲೆ ಕಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಈ ಹೇಳಿಕೆಯ ಮೂಲಕ ನಟಿ ಮಯೂರಿ ಕ್ಯಾತರಿ ತಮ್ಮ ವಿಚ್ಛೇದನ ವದಂತಿಗಳಿಗೆ ತೆರೆ ಎಳೆದಿದ್ದಾರೆ.