Mayuri: ತಾಯಿಯಾದ ಸಂಭ್ರಮದಲ್ಲಿ `ಅಶ್ವಿನಿ ನಕ್ಷತ್ರ` ಸೀರಿಯಲ್ ನಟಿ ಮಯೂರಿ!
ಈ ಖುಷಿಯ ಸುದ್ದಿಯನ್ನು ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಅನೇಕರು ಮಯೂರಿ ಹಾಗೂ ಅರುಣ್ ದಂಪತಿಗೆ ಶುಭಾಶಯ ತಿಳಿಸಿದ್ದಾರೆ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಅವರು ಆಗಾಗ ತಾಯ್ತನದ ಬಗ್ಗೆ ಮಾತನಾಡುತ್ತಿದ್ದರು, ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಮುಂಬರಲಿರುವ ಮಗುವಿನ ಆರೈಕೆ ಬಗ್ಗೆ ಕೂಡ ಕೆಲ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು.
ಇವರಿಬ್ಬರೂ ಬಾಲ್ಯದ ಸ್ನೇಹಿತರು. ಅರುಣ್ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡ್ತಿದ್ದಾರೆ. ಅಶ್ವಿನಿ ನಕ್ಷತ್ರ ಕಿರುತೆರೆ ಧಾರಾವಾಹಿಯ ಮೂಲಕ ಮಯೂರಿ ಅವರು ತುಂಬಾನೇ ಫೇಮಸ್ ಆದರು.. ನಂತರ ಧಾರಾವಾಹಿಯ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿ ಕೃಷ್ಣಲೀಲಾ ಎನ್ನುವ ಅದ್ಭುತವಾದ ಸಿನಿಮಾದಲ್ಲಿ ನಟನೆ ಮಾಡಿ ಅಭಿಮಾನಿಗಳ ಗಮನವನ್ನ ತನ್ನತ್ತ ಸೆಳೆದಿದ್ದಾರೆ.
ಗರ್ಭಿಣಿಯಾದ ನಂತರವೂ ಮಯೂರಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದರು. ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ, ಸಂದರ್ಶನಗಳನ್ನು ಕೂಡ ನೀಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಮಯೂರಿ ಹಬ್ಬಗಳು, ವಿಶೇಷ ದಿನಗಳನ್ನು ಕೂಡ ಅದ್ದೂರಿಯಾಗಿ, ಖುಷಿಯಿಂದ ಆಚರಿಸಿದ್ದರು.