ಭವ್ಯ ಬಂಗಲೆ.. ಐಷಾರಾಮಿ ಕಾರು, ಪ್ರೊಡಕ್ಷನ್‌ ಹೌಸ್ ಒಡತಿ.. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹೆಸರಿನಲ್ಲಿರುವ ಒಟ್ಟು ಆಸ್ತಿ ಆಸ್ತಿ ಎಷ್ಟು ಕೋಟಿ ?

Wed, 29 Jan 2025-7:54 am,
Ashwini Puneeth Rajkumar Net Worth

ಅಶ್ವಿನಿ ಪುನೀತ್‌ ರಾಜಕುಮಾರ್‌ PRK ಪ್ರೊಡಕ್ಷನ್‌ ಹೌಸ್‌ನ ಜವಾಬ್ದಾರಿ ಹೊತ್ತಿದ್ದಾರೆ. ಅಷ್ಟೇ ಅಲ್ಲ ಹಲವು ಸಿನಿಮಾಗಳನ್ನು PRK ಬ್ಯಾನರ್‌ ಅಡಿ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಹಾಗಾದ್ರೆ ಅಶ್ವಿನಿ ಹೆಸರಿನಲ್ಲಿರುವ ಆಸ್ತಿ ಎಷ್ಟು? ಇಲ್ಲಿ ತಿಳಿಯೋಣ....

Ashwini Puneeth Rajkumar Net Worth

ಪುನೀತ್‌ ರಾಜಕುಮಾರ್‌ ಕನ್ನಡದ ಮನೆ ಮಗ. ಅಣ್ಣಾವ್ರು ಎಂದೇ ಜನಮನದಲ್ಲಿ ಜಾಗಪಡೆದ ಮೇರುನಟ ಡಾ.ರಾಜಕುಮಾರ್‌ ವರ ಕಿರಿಯ ಪುತ್ರ ಪುನೀತ್‌. ಬಾಲ್ಯದಲ್ಲೇ ನಟನೆಗೆ ಬಂದ ಪ್ರತಿಭೆ.

Ashwini Puneeth Rajkumar Net Worth

ಪುನಿತ್‌ ರಾಜಕುಮಾರ್‌ ಮತ್ತು ಅಶ್ವಿನಿ 1999 ರ ಡಿಸೆಂಬರ್ 1 ರಂದು ಮದುವೆ ಆದರು. ಇವರಿಗೆ ಧ್ರುತಿ ಮತ್ತು ವಂದಿತಾ ಎಂಬ ಇಬ್ಬರು ಪುತ್ರಿಯರಿದ್ದು, ಇಬ್ಬರೂ ವಿದ್ಯಾಭ್ಯಾಸದಲ್ಲಿ ಬ್ಯುಸಿಯಾಗಿದ್ದಾರೆ. 

ಪುನಿತ್‌ ರಾಜಕುಮಾರ್‌ 2021 ರ ಅಕ್ಟೋಬರ್‌ 29 ರಂದು ಹೃದಯಾಘಾತದಿಂದ ವಿಧಿವಶರಾದರು. ಅಂದಿನಿಂದ ಪುನೀತ್‌ ಮಾಡುತ್ತಿದ್ದ ಎಲ್ಲ ಸಾಮಾಜಿಕ ಕಾರ್ಯಗಳು, PRK ಪ್ರೊಡಕ್ಷನ್‌ ಹೌಸ್‌ ಜವಾಬ್ದಾರಿಯನ್ನು ಅಶ್ವಿನಿ ಹೆಗಲಿಗೆ ಹಾಕಿಕೊಂಡಿದ್ದು ಕೊಂಚ ಧಕ್ಕೆಯೂ ಬರದಂತೆ ಮುನ್ನಡೆಸುತ್ತಿದ್ದಾರೆ.  

ಅಶ್ವಿನಿ ಪುನೀತ್‌ ರಾಜಕುಮಾರ್‌ 14 ಮಾರ್ಚ್‌ 1981 ರಲ್ಲಿ ಜನಿಸಿದರು. ಅವರಿಗೆ ಈಗ 43 ವರ್ಷ ವಯಸ್ಸು. ಅಶ್ವಿನಿ ಈಗಲೂ ಮೊದಲು ಪುನೀತ್‌ ಜೊತೆ ಇದ್ದ ಭವ್ಯವಾದ ಬಂಗಲೆಯಲ್ಲಿಯೇ ವಾಸಿಸುತ್ತಿದ್ದಾರೆ. 

ಅಶ್ವಿನಿ ಪುನೀತ್‌ ರಾಜಕುಮಾರ್‌ ಐಷಾರಾಮಿ ಆಡಿ ಕ್ಯೂ 7 ಕಾರನ್ನು ಅಶ್ವಿನಿ ಖರೀದಿಸಿದ್ದರು, ಈ ಕಾರಿನ ಬೆಲೆ 1.10 ಕೋಟಿಯಿಂದ 1.20 ಕೋಟಿ ರೂಪಾಯಿಗಳ ವರೆಗೂ ಇರಬಹುದು ಎನ್ನಲಾಗುತ್ತಿದೆ. ಲ್ಯಾಂಬರ್ಗಿನಿ ಸೇರಿದಂತೆ ಇವರ ಬಳಿ ಹಲವು ಐಷಾರಾಮಿ ಕಾರುಗಳ ಸಂಗ್ರಹವಿದೆ.

ಕೆಲವು ವರದಿಗಳ ಪ್ರಕಾರ, ಅಶ್ವಿನಿ ಪುನೀತ್‌ ರಾಜಕುಮಾರ್‌ ಅವರ ಹೆಸರಿನಲ್ಲಿರುವ ಒಟ್ಟು ಆಸ್ತಿ 200 ರಿಂದ 210 ಕೋಟಿ ಎನ್ನಲಾಗುತ್ತಿದೆ. (ಇದು ಸೋಷಿಯಲ್‌ ಮೀಡಿಯಾ ಮತ್ತು ಕೆಲವು ವರದಿಗಳನ್ನು ಆಧರಿಸಿ ಬರೆದಿದ್ದು, ಅಧಿಕೃತ ಮಾಹಿತಿಯಲ್ಲ) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link