ಏಷ್ಯಾಕಪ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಈ 5 ಆಟಗಾರರು ಟಿ-20 ವಿಶ್ವಕಪ್‌ನಲ್ಲೂ ಮಿಂಚಲಿದ್ದಾರೆ!
ಟೀಂ ಇಂಡಿಯಾದ ಬಲಿಷ್ಠ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ಏಷ್ಯಾ ಕಪ್ 2022 ಅತ್ಯಂತ ವಿಶೇಷವಾಗಿತ್ತು. ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿದ್ದಾರೆ. ಇದೀಗ ಅವರು ಟಿ-20 ವಿಶ್ವಕಪ್‌ನಲ್ಲಿ ಎಲ್ಲಾ ತಂಡಗಳಿಗೆ ದೊಡ್ಡ ಭಯ ಹುಟ್ಟಿಸಿದ್ದಾರೆ. ಏಷ್ಯಾಕಪ್‍ನಲ್ಲಿ ಕೊಹ್ಲಿ 5 ಇನ್ನಿಂಗ್ಸ್‌ಗಳಲ್ಲಿ 92.00 ಸರಾಸರಿಯಲ್ಲಿ 276 ರನ್ ಗಳಿಸಿದರು.
ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಈ ಟೂರ್ನಿಯ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಆಗಿದ್ದರು. ಮೊಹಮ್ಮದ್ ರಿಜ್ವಾನ್ 6 ಇನ್ನಿಂಗ್ಸ್‌ಗಳಲ್ಲಿ 56.20 ಸರಾಸರಿಯಲ್ಲಿ 281 ರನ್ ಗಳಿಸಿದರು. ಅವರು T20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಅತಿದೊಡ್ಡ ಮ್ಯಾಚ್ ವಿನ್ನರ್ ಆಗಬಹುದು.
ಟೀಂ ಇಂಡಿಯಾದ ಮಾರಕ ಬೌಲರ್ ಭುವನೇಶ್ವರ್ ಕುಮಾರ್ ಅವರಿಗೂ ಈ ಟೂರ್ನಿ ಅದ್ಭುತವಾಗಿತ್ತು. ಏಷ್ಯಾಕಪ್ 2022ರಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಅವರು 5 ಪಂದ್ಯಗಳಲ್ಲಿ 6.05ರ ಎಕಾನಮಿಯಲ್ಲಿ 11 ವಿಕೆಟ್‍ಗಳನ್ನು ಪಡೆದರು.
ಶ್ರೀಲಂಕಾದ ವನಿಂದು ಹಸರಂಗ ಏಷ್ಯಾಕಪ್ 2022ರ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅಬ್ಬರಿಸಿರುವ ವನಿಂದು ಹಸರಂಗ ಟಿ-20 ವಿಶ್ವಕಪ್‌ನಲ್ಲಿ ಎಲ್ಲಾ ತಂಡಗಳಿಗೆ ಹೆದರಿಕೆ ಹುಟ್ಟಿಸಿದ್ದಾರೆ. ಹಸರಂಗ 6 ಪಂದ್ಯಗಳಲ್ಲಿ 9 ವಿಕೆಟ್ ಪಡೆದು ಮಿಂಚಿದ್ದಾರೆ.
ಪಾಕಿಸ್ತಾನದ ಮೊಹಮ್ಮದ್ ನವಾಜ್ ಏಷ್ಯಾಕಪ್‍ನಲ್ಲಿ ತಮ್ಮ ಅದ್ಭುತ ಬೌಲಿಂಗ್‍ನಿಂದ ಅದ್ಭುತ ಪ್ರದರ್ಶನ ನೀಡಿದರು. 6 ಪಂದ್ಯಗಳಲ್ಲಿ ಈ ಪಾಕ್ ಬೌಲರ್ 8 ವಿಕೆಟ್ ಪಡೆದಿದ್ದಾರೆ. ಅದೇ ರೀತಿ ಭಾರತ ವಿರುದ್ಧ 42 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.