Astro Tips: ನೀರಿನಲ್ಲಿ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿದರೆ ಒಲಿಯುವಳು ಲಕ್ಷ್ಮಿ, ಕೈ ಸೇರಲಿದೆ ಕುಬೇರನ ಸಂಪತ್ತು
ನೀವು ಜೀವನದಲ್ಲಿ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದರೆ ಜ್ಯೋತಿಷ್ಯದ ಕೆಲವು ಸಲಹೆಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀವು ಸ್ನಾನ ಮಾಡುವ ನೀರಿನಲ್ಲಿ ಕೆಲವು ವಸ್ತುಗಳನ್ನು ಬೆರೆಸಿ ಸ್ನಾನ ಮಾಡುವುದರಿಂದ ಜೀವನದಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಪರಿಹಾರ ಪಡೆದು, ಸಂಪತ್ತಿನ ದೇವತೆಯಾದ ತಾಯಿ ಮಹಾಲಕ್ಷ್ಮೀ ಹಾಗೂ ಸಂಪತ್ತಿನ ದೇವರು ಕುಬೇರ ದೇವನ ಆಶೀರ್ವಾದ ಪಡೆಯಬಹುದು. ಅಪಾರ ಸಂಪತ್ತಿನ ಒಡೆಯರಾಗಬಹುದು ಎಂದು ನಂಬಲಾಗಿದೆ. ಹಾಗಿದ್ದರೆ ಸ್ನಾನ ಮಾಡುವ ನೀರಿನಲ್ಲಿ ಯಾವ ವಿಶೇಷ ವಸ್ತುಗಳನ್ನು ಬೆರೆಸುವುದರಿಂದ ಹಣಕಾಸಿನ ಬಿಕ್ಕಟ್ಟಿನಿಂದ ಪರಿಹಾರ ಪಡೆಯಬಹುದು ಎಂದು ತಿಳಿಯೋಣ...
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಉಪ್ಪು ಅಡುಗೆ ರುಚಿಯನ್ನಷ್ಟೇ ಹೆಚ್ಚಿಸುವುದಿಲ್ಲ, ವ್ಯಕ್ತಿಯ ಅದೃಷ್ಟವನ್ನೂ ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ವಾರದಲ್ಲಿ ಎರಡು ದಿನ ಸ್ನಾನ ಮಾಡುವ ನೀರಿನಲ್ಲಿ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ಮತ್ತು ಸತತ ಆರು ತಿಂಗಳುಗಳ ಕಾಲ ಈ ಪರಿಹಾರ ಕೈಗೊಳ್ಳುವುದರಿಂದ ವ್ಯಕ್ತಿಯು ಆರ್ಥಿಕ ಬಿಕ್ಕಟ್ಟಿನಿಂದ ಪರಿಹಾರ ಪಡೆಯಬಹುದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಸೋಮವಾರ ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ಹಾಲು ಬೆರೆಸಿ ಸ್ನಾನ ಮಾಡುವುದರಿಂದ ಮನಸ್ಸು ಶಾಂತಿಯಿಂದ ಇರುತ್ತದೆ. ಮಾತ್ರವಲ್ಲ, ಆ ಮನೆ ಸದಾ ಸಂಪತ್ತಿನಿಂದ ತುಂಬಿರುತ್ತದೆ.
ಪ್ರತಿ ಶುಕ್ರವಾದ ಸ್ನಾನದ ನೀರಿನಲ್ಲಿ ಸುಗಂಧ ದ್ರವ್ಯವನ್ನು ಬೆರೆಸಿ ಸ್ನಾನ ಮಾಡುವುದರಿಂದ ಕುಬೇರನ ಆಶೀರ್ವಾದ ಪಡೆದು, ಜೀವನದಲ್ಲಿ ಪ್ರಗತಿಯ ಹಾದಿ ತೆರೆಯುತ್ತದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಿ ಖಜಾನೆ ತುಂಬಲಿದೆ ಎಂಬ ನಂಬಿಕೆ ಇದೆ.
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರುವಾರದ ದಿನ ಸ್ನಾನ ಮಾಡುವ ನೀರಿನಲ್ಲಿ ಅರಿಶಿನವನ್ನು ಬೆರೆಸಿ ಸ್ನಾನ ಮಾಡುವುದರಿಂದ ಜಾತಕದಲ್ಲಿ ಗುರು ದೋಷ ನಿವಾರಣೆಯಾಗುತ್ತದೆ. ಸತತ ಮೂರು ತಿಂಗಳುಗಳ ಕಾಲ ಈ ಪರಿಹಾರ ಕೈಗೊಳ್ಳುವುದರಿಂದ ಧನ-ಸಂಪತ್ತು ನಿಮ್ಮ ಖಜಾನೆ ತುಂಬಲಿದೆ ಎನ್ನಲಾಗುತ್ತದೆ.
ಪ್ರತಿ ಶನಿವಾರ ಸ್ನಾನ ಮಾಡುವ ನೀರಿನಲ್ಲಿ ಉಪ್ಪು ಮತ್ತು ಅರಿಶಿನವನ್ನು ಬೆರೆಸಿ ಸ್ನಾನ ಮಾಡುವುದರಿಂದ ಶನಿ ದೋಷ ನಿವಾರಣೆಯಾಗಿ ಶನಿ ಕೃಪೆಗೆ ಪಾತ್ರರಾಗಬಹುದು. ಮಾತ್ರವಲ್ಲ, ತಾಯಿ ಲಕ್ಷ್ಮಿ ಆಶೀರ್ವಾದದಿಂದ ಕುಬೇರನ ಸಂಪತ್ತು ನಿಮ್ಮದಾಗಲಿದೆ ಎಂಬ ನಂಬಿಕೆ ಇದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.