Astro Tips: ಮಲಗುವಾಗ ದಿಂಬಿನ ಬಳಿ ಇಡುವ ಈ ಸಂಗತಿಗಳು ನಿಮ್ಮ ತಿಜೋರಿಯನ್ನೇ ಖಾಲಿ ಮಾಡುತ್ತವೆ
1. ನೀರಿನ ಬಾಟಲಿ - ರಾತ್ರಿ ಮಲಗುವ ವೇಳೆ ಕೆಲವರಿಗೆ ತಲೆಭಾಗದಲ್ಲಿ ನೀರಿನ ಬಾಟಲಿಯನ್ನು ಇಟ್ಟು ಮಲಗುವ ಅಭ್ಯಾಸವಿರುತ್ತದೆ. ಬಾಯಾರಿಕೆಯಾದಾಗ ನಡೆದುಕೊಂಡು ದೂರಕ್ಕೆ ಹೋಗಬಾರದು ಎಂಬ ಉದ್ದೇಶ ಇದರ ಹಿಂದಿರುತ್ತದೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಇದು ತುಂಬಾ ಕೆಟ್ಟ ಪ್ರಭಾವ ಬೀರುತ್ತದೆ. ಈ ರೀತಿ ಮಾಡುವ ವ್ಯಕ್ತಿಯ ಏಕಾಗ್ರತೆ ಹಾಳಾಗುವುದರ ಜೊತೆಗೆ ವ್ಯಕ್ತಿ ಯಾವಾಗಲು ಒತ್ತಡದಲ್ಲಿರುತ್ತಾನೆ.
2. ಪುಸ್ತಕ - ಕೆಲವರಿಗೆ ರಾತ್ರಿ ಮಲಗುವ ವೇಳೆ ಪುಸ್ತಕ ಓದುವ ಅಭ್ಯಾಸವಿರುತ್ತದೆ. ಆದರೆ, ನಿದ್ರೆ ಬರಲಾರಂಭಿಸಿದಾಗ, ಅವರು ಪುಸ್ತಕವನ್ನು ದಿಂಬಿನ ಕೆಳಗೆ ಅಥವಾ ತಲೆಭಾಗದಲ್ಲಿ ಇಟ್ಟು ಮಲಗುತ್ತಾರೆ. ಆದರೆ, ನೀವು ಈ ರೀತಿ ಎಂದಿಗೂ ಕೂಡ ಮಾಡಬೇಡಿ. ತಲೆ ಕೆಳಗೆ ಪುಸ್ತಕವನ್ನಿಟ್ಟು ಮಲಗಿದರೆ, ಮನೆಯಲ್ಲಿನ ನಕಾರತ್ಮಕತೆ ಹೆಚ್ಚಾಗುತ್ತದೆ. ಜೀವನದಲ್ಲಿ ಮುಂದುವರೆಯಲು ಅಂತಹ ಜನರಿಂದ ಸಾಧ್ಯವಾಗುವುದಿಲ್ಲ.
3. ಇಲೆಕ್ಟ್ರಿಕ್ ಉಪಕರಣಗಳು- ಮಲಗುವ ವೇಳೆ ತಲೆಭಾಗದಲ್ಲಿ ವಾಚ್, ಮೊಬೈಲ್, ಲ್ಯಾಪ್ ಟಾಪ್ ಗಳಂತಹ ವಿದ್ಯುತ್ ಉಪಕರಣಗಳನ್ನು ಇರಿಸಿ ಮಲಗಬಾರದು ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ವ್ಯಕ್ತಿಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ. ಇದರಿಂದ ಧನಹಾನಿ ಸಂಭವಿಸುತ್ತದೆ. ಜೊತೆಗೆ ಇದರಿಂದ ಜೀವನದ ಮೇಲೆ ಅದರ ಕೆಟ್ಟ ಪರಿಣಾಮ ಉಂಟಾಗುತ್ತದೆ ಎನ್ನಲಾಗುತ್ತದೆ.
4. ಚಿನ್ನಾಭರಣ - ಧಾರ್ಮಿಕ ನಂಬಿಕೆಗಳ ಪ್ರಕಾರ ಒಂದು ವೇಳೆ ಯಾವುದೇ ವ್ಯಕ್ತಿ ಮಲಗುವಾಗ ತಲೆಭಾಗದ ಬಳಿ ಚಿನ್ನದ ಸರ ಅಥವಾ ಚಿನ್ನದ ಆಭರಣ ಇಟ್ಟು ಮಲಗಿದರೆ, ಅವನ ಜೀವನದಲ್ಲಿ ಅಡೆತಡೆಗಳು ಎಂದಿಗೂ ದೂರಾಗುವುದಿಲ್ಲ ಎನ್ನಲಾಗುತ್ತದೆ. ವೃತ್ತಿ ಜೀವನದಲ್ಲಿ ಸಾಕಷ್ಟು ಕಷ್ಟಪಟ್ಟರು ಕೂಡ ಅವನು ಯಸಸ್ಸು ಸಾಧಿಸುವುದಿಲ್ಲ ಎನ್ನಲಾಗುತ್ತದೆ. ಅಂತಹ ವ್ಯಕ್ತಿಗೆ ಜೀವನದಲ್ಲಿ ಸುಲಭ ಕಾರ್ಯವೂ ಕೂಡ ಕಷ್ಟದ ಕಾರ್ಯ ಎನಿಸಲಾರಂಭಿಸುತ್ತದೆ.
5. ವ್ಯಾಲೆಟ್ ಅಥವಾ ಪರ್ಸ್ - ಹಲವು ಜನರಿಗೆ ತಮ್ಮ ವ್ಯಾಲೆಟ್ ಹಾಗೂ ಪರ್ಸ್ ನ ಸುರಕ್ಷತೆಗಾಗಿ ಅವುಗಳನ್ನು ದಿಂಬಿನ ಕೆಳಗೆ ಇಟ್ಟು ಮಲಗುವ ಅಭ್ಯಾಸವಿರುತ್ತದೆ. ಆದರೆ, ವಾಸ್ತು ಶಾಸ್ತ್ರದಲ್ಲಿ ಇದನ್ನು ತಪ್ಪು ಎಂದು ಭಾವಿಸಲಾಗಿದೆ. ಈ ರೀತಿ ಮಾಡುವವರ ಕೈಯಲ್ಲಿ ಹಣ ಎಂದಿಗೂ ಕೂಡ ಉಳಿಯುವುದಿಲ್ಲ ಎನ್ನಲಾಗುತ್ತದೆ. ಅವರ ಜೀವನದಲ್ಲಿ ಅನಾವಶ್ಯಕ ಖರ್ಚು ಕೂಡ ಹೆಚ್ಚಾಗುತ್ತದೆ. ಹೀಗಾಗಿ ಪರ್ಸ್ ಅನ್ನು ಯಾವಾಗಲು ತಿಜೋರಿಯಲ್ಲಿಟ್ಟು ಮಲಗಬೇಕು.